Vijayadasaru

  • Madhvamuni Enna

    Composer : Shri Vijayadasaru ಶ್ರೀ ವಿಜಯದಾಸರ ಕೃತಿರಾಗ: ಶಿವರಂಜಿನಿ ಖಂಡಛಾಪುತಾಳ ಮಧ್ವಮುನಿ ಎನ್ನ ಹೃತ್ಕುಮುದ ಚಂದ್ರ || ಪ ||ಅದ್ವೈತ ಮತಾರಣ್ಯ ದಹನ ಗುಣಸಾಂದ್ರ || ಅ ಪ || ನೊಂದೆ ಎಂಭತ್ತುನಾಲ್ಕು ಲಕ್ಷ ಯೋನಿಯಲ್ಲಿ |ಒಂದೇ ಪ್ರಕಾರ ಸಂಚರಣೆಯಿಂದ ||ಒಂದೊಂದು ಕರ್ಮವಾ ಅರಸಿ ನೋಡಿದೆ ಅದ – |ರಿಂದ ಭವಾಬ್ಧಿಗೆ ವಂದುಪಾಯವ ಕಾಣೆ || ೧ || ನೀರು ಚಳಮಳ ಕಾಸಿ ಆರಲಿಟ್ಟು ಹೆಪ್ಪಾ |ನೀರಿನಿಂದಲಿ ಕೊಡಲು ಬಪ್ಪುದೇನೂ ||ಮಾರುತೀ ನಿನ್ನ ಕೃಪೆ ಪಡಿಯದಲೆ…

  • Entu Varnipenamma

    Composer : Shri Vijayadasaru ಶ್ರೀ ವಿಜಯದಾಸರ ರಚನೆ , ರಾಗ: ಶಂಕರಾಭರಣ , ಆದಿತಾಳ ಎಂತು ವರ್ಣಿಪೆನಮ್ಮಮ್ಮ ಈ ಗುರುಗಳಎಂತು ಸ್ತುತಿಪೆನಮ್ಮಮ್ಮ ॥ ಪ ॥ಯಂತ್ರೋದ್ಧಾರಕನಾಗಿ ಇಂತು ಮೆರೆವ ಯತಿಯ ॥ ಅ ಪ ॥ ಕೋತಿ ರೂಪದಲಿ ಬಂದು ಭೂತಳಕ್ಕೆ ಬೆಡಗು ತೋರಿ ।ತುಂಗಭದ್ರ ತೀರದಲ್ಲಿ ಖ್ಯಾತಿಯಾಗಿಪ್ಪ ಯತಿಯ ॥ 1 ॥ ಸುತ್ತಲು ವಾನರ ಬದ್ಧ ಮತ್ತೆ ವಲಯಾಕಾರ ।ಚಿತ್ರಕೋಣ ಮಧ್ಯ ಅದರೊಳ್ ನಿತ್ಯದಲ್ಲಿ ಯಿಪ್ಪ ಯತಿಯ ॥ 2 ॥ ವ್ಯಾಸಮುನಿರಾಯರಿಂದ…

  • Vatanna jaya jatanna

    Composer : Shri Vijayadasaru ವಾತನ್ನ ಜಯ ಜಾತನ್ನ |ಲೋಕಪ್ರೀತನ್ನ ಸ್ತುತಿಸಿ ಖ್ಯಾತನ್ನ [ಪ]ಮುಖ್ಯಪ್ರಾಣನ್ನ… ವಿಷವ ನುಂಗಿದ ಮಹಾಶೌರ್ಯನ್ನಅಸಮ ಸುಂದರ ಮತಿಧಾರ್ಯನ್ನನಿಶಾಚರ ಕುಲದೋಷ ಸೂರ್ಯನ್ನಆರಾಧಿಸುವ ಭಕ್ತರ ಸುಕಾರ್ಯನ್ನ…ಮುಖ್ಯಪ್ರಾಣನ್ನ ||೧|| ವಾನರ ಕುಲದೊಳು ಧೈರ್ಯನ್ನಮುದ್ದು ಆನನ ಗೀರ್ವಾಣ ವರ್ಯನ್ನಆನಂದ ವಿಜ್ಞಾನ ಚರ್ಯನ್ನದುಷ್ಟದಾನವರಳಿದ ಅತಿ ವೀರ್ಯನ್ನ…ಮುಖ್ಯಪ್ರಾಣನ್ನ ||೨|| ದ್ವಿಜರಾಜ ಕುಲಾಗ್ರಣಿ ಭೀಮನ್ನದ್ವಿಜಕೇತನಂಘ್ರಿಗೆ ಪ್ರೇಮನ್ನದ್ವಿಜರ ಪಾಲಿಸಿದ ನಿಸ್ಸೀಮನ್ನಕುರು ವ್ರಜವ ಸಡೆದ ಸಾರ್ವಭೌಮನ್ನ….ಮುಖ್ಯಪ್ರಾಣನ್ನ ||೩|| ಅದ್ವೈತ ಮತ ಕೋಲಾಹಲನ್ನವೇದ ಸಿದ್ಧಾಂತ ಶುಭ ಗುಣಶೀಲನ್ನಸದ್ವೈಷ್ಣವರನ್ನು ಪರಿಪಾಲನ್ನಗುರುಮಧ್ವಮುನಿ ಗುಣ ಲೋಲನ್ನ…ಮುಖ್ಯಪ್ರಾಣನ್ನ ||೪|| ಚಾರು ಚರಿತ ನಿರ್ದೋಶನ್ನಲೋಕ…

error: Content is protected !!