Vijayadasaru

  • Sampattu ninagindu posadayite

    Composer : Shri Vijayadasaru ಸಂಪತ್ತು ನಿನಗಿಂದು ಪೊಸದಾಯಿತೆ |ಸಿಂಪಿನಲಿ ಪಾಲುಗುಡಿದದು ಮರದಿಯಾ ರಂಗ [ಪ] ಪಾಲು ಮೊಸರು ಕದ್ದು ಗೋವಳರೆಂಜಲನುಂಡು |ತಾಳ ಫಲಗಳ ಮೆದ್ದದು ಮರದಿಯಾ ||ಕಾಲ ಕಾಲಕೆ ಇಲ್ಲಿ ಷಡುರಸಾಯನ ಸವಿದು |ಮೇಲಾಗಿ ಪೊಟ್ಟೆಯೆ ಪೊರೆವ ಅತಿಶಯವೇನು (೧) ಕಂಡವರ ಕೈಯ್ಯ ಪಳ್ಳಿಯಲಿ ಹಳ ಹಳ ಎನಿಸಿ |ಕೊಂಡು ಭಂಡಾಗಿ ಇದ್ದದು ಮರದಿಯಾ ||ತಂಡ ತಂಡದಲಿಪ್ಪ ವೈಭೋಗ ವಾಹನ |ತೋಂಡರು ಕರ ಮುಗಿದು ಕೊಂಡಾಡುವ ಭರವೊ (೨) ಮತಿಹೀನ ಖಳಗಂಜಿ ವನಧಿಯೊಳಗೆ ದ್ವಾರ |ವತಿಯಲ್ಲಿ…

  • Matanadai mannari Krishna

    Composer : Shri Vijayadasaru ಮಾತನಾಡೈ ಮನ್ನಾರಿ ಕೃಷ್ಣ ಮಾತನಾಡೈ [ಪ]ದಾತನು ನೀನೆಂದು ಬಯಸಿ ಬಂದೆನು ಮಾತನಾಡೈ [ಅ.ಪ.] ಊದುವ ಸಿರಿ ಪೊಂಗೊಳಲೊ ಜಗ-|ದಾಧಾರದ ನಿಜ ಹೊಳೆಯೋ ||ಪಾದದ ಪೊಂಗೆಜ್ಜೆ ಥಳಿಲೊ ಸರ್ವ |ವೇದಗಳರಸುವ ಕಲ್ಪಕ ಸೆಳಲೊ (೧) ಕಸ್ತೂರಿ ತಿಲಕದ ಮದವೊ ಮು-ಕುಟ ಮಸ್ತಕದಿ ಝಗಝಗವೊ ||ವಿಸ್ತರದಿ ಪೊತ್ತ ಜಗವೊ ಪರ- |ವಸ್ತುವು ನಂದ ಯಶೋದೆಯ ಮಗುವೊ (೨) ನವನೀತವ ಪಿಡಿದ ಕರವೊ ನವ-|ನವ ಮೋಹನ ಶೃಂಗಾರವೊ ||ಅವತರಿಸಿದ ಸುರತರುವೊ ಶತ-ರವಿಯಂದದಿ ಉಂಗುರವಿಟ್ಟ ಭರವೊ (೩)…

  • Karuniso Krishna Karuniso

    Composer : Shri Vijayadasaru ಕರುಣಿಸೋ ಕೃಷ್ಣ ಕರುಣಿಸೊ |ಕರುಣಿಸಿದರೆ ನಾ ನಿನ್ನನೆಂದಿಗು ಮರೆಯೆ [ಪ] ಭೂತಳದೊಳು ನಾನು ಈ ತನುವು ಪೊತ್ತು |ಪಾತಕದಲಿ ಯಮಯಾತನೆ ಪಟ್ಟೆಇಂದೆನ್ನ ಹೃದಯವೆಂಬೊ ಮಂದಿರದೊಳು |ಬಂದು ವಾಸವಾಗೊ ಇಂದಿರೆ ರಮಣ (೧) ಹಿಂದಿನ ಅವಗುಣ ಒಂದೂ ಎಣಿಸದೆ |ಮುಂದೆ ಆ ದೋಷಕ್ಕೆ ಮನವೆರಗಿಸದೆಪಾಪ ಪುರುಷನೆಂಬೊ ಪಾಪಿಯ ಕೈಗೆ |ಪೋಪಗೊಡದೆ ಎನ್ನ ಕಾಪಾಡೊ ರನ್ನ (೨) ಅಂತ್ಯಕಾಲದಲಿ ಅಂತಕರು ಬಂದು |ನಿಂತಾಗಲಿ ನಿನ್ನ ಚಿಂತನೆ ಒದಗಲಿಕನಸಿನೊಳಗೆ ನಿನ್ನ ನೆನಸಿಕೊಂಬಂತೆ |ಮನಸು ಸುಸ್ಥಿರವಾಗಿ ಅನುಗಾಲವಿರಲಿ…

error: Content is protected !!