-
Surapanalayadante mantralaya
Composer : Shri Jagannatha dasaru ಸುರಪನಾಲಯದಂತೆ ಮಂತ್ರಾಲಯಕರೆಸುವುದು ಕಂಗೊಳಿಸುವುದು ನೋಳ್ಪ ಜನಕೆ [ಪ] ಕಾಮಧೇನುವಿನಂತೆ ಇಪ್ಪ ಗುರುವರ ಸಾರ್ವಭೌಮ ಸುಧೀಂದ್ರಸುತ ಶ್ರೀ ರಾಘವೇಂದ್ರಆಮಯಾಧಿ ಖಳತಮಿಶ್ರ ಓಡಿಸುವ ಚಿಂತಾಮಣಿ ಪ್ರಕಾಶದಂತಿಪ್ಪ ವೃಂದಾವನದಿ (೧) ಸುರತರುವಿನಂತಿಪ್ಪ ಕೀರ್ತಿ ಸಚ್ಚಾಯಆಶ್ರಿತರ ಮನೋರಥ ಪೂರೈಸುವಾಧರಣಿಸುರಾಖ್ಯ ಷಟ್ಪದಗಳಿಗೆ ತತ್ಸುಧಾಪರಿಮಳದಿ ತೃಪ್ತಿಬಡಿಸುವ ಮರುತನಂತೆ (೨) ವಾರಾಹಿ ಎಂಬ ನಂದನ ವನದಿ ಜನರುವಿಹಾರ ಮಾಳ್ಪರು ಸ್ನಾನಪಾನದಿಂದಾಘುರು ರಾಘವೇಂದ್ರರಲ್ಲಿಪ್ಪ ಕಾರಣ ಪರಮಕಾರುಣ್ಯ ನಿಧಿ ಜಗನ್ನಾಥ ವಿಠಲನಿಹನು (೩) surapanAlayadaMte maMtrAlayakaresuvudu kaMgoLisuvudu nOLpa janake [pa] kAmadhEnuvinaMte…
-
Namada ghanate
Composer : Shri Gurugopala vittala ನಾಮದಾ ಘನತೆ ನಿಮಗೆ ಸಲ್ಲೋದೇ |ಶ್ರೀಮಂತ ರಾಘವೇಂದ್ರಸ್ವಾಮಿ ಎಂತೆಂಬ [ಪ] ಅಳವಬೋಧರ ಭಾಷ್ಯಾ೦ಬುಧಿಗೆ ಟೀಕೆಗಳೆಂಬ |ಲಲಿತ ಸೇತುವೆಗಟ್ಟಿ ಹರಿದಾಸರ |ಸುಲಭದಿಂದೈದಿಸಿ ದಶಕರಣಗಳ ಜೈಸಿ |ಒಲಿಸಿ ಸವಿದೆ ವಿಷ್ಣು ಜ್ಞಾನ ಪ್ರಕೃತಿಯನು [೧ ] ಹಲವು ದುರ್ಮತ ವಾದಿಗಳೆನೆಂಬಾದ್ರಿಗಳ |ಕುಲಿಶದಿಂದ ವರಪಕ್ಷ ಭೇದಿಸಿ |ಅಳವಬೋಧರ ಮತ ಅಮರಾವತಿಯಲಿ | ನಿ |ಶ್ಚಲ ಸಾಮ್ರಾಜ್ಯವನಾಳ್ದೆ – ಕವಿಗಳ ಪೊರೆದೆ [೨ ] ಭಾಸುರ ಸಚ್ಚಾಸ್ತ್ರ ವದನದಿ ಒಪ್ಪುತ |ಪೂಶರ ಜಯ ಶಕ್ತಿಯನೆ ಧರಿಸಿದೆ…
-
Naan yaake chintisali
Composer : Shri Vyasatatvajnaru ನಾನ್ಯಾಕೆ ಚಿಂತಿಸಲಿ ನಾನ್ಯಾಕೆ ಧೇನಿಸಲಿತಾನಾಗಿ ಶ್ರೀ ರಾಘವೇಂದ್ರಯತಿ ಒಲಿದ [ಪ] ಪೋರತನದವನು ಎರಡು ತೆರೆಗಳಲಿದೂರಾಗಿ ಮೊರೆಯು ಅಲ್ಲವೆಂದುಕಾರುಣ್ಯದಿಂದ ತಮ್ಮಯ ಗುರುತುಗಳ ತೋರಿಧೀರ ತಾ ಕರವನ್ನು ಪಿಡಿದ ಬಳಿಕಾ | ೧ | ಪೂರ್ಣಜಲ ಹರಿವ ವಾಹಿನಿ ಕಂಡು ಬೆದರುವಗೆಕರುಣಧಾರನು ತಾನೆ ಬಂದು ನಿಂದುತೂರ್ಣದಲಿ ಕರಪಿಡಿದು ಹರಿಗೋಲ ಒಳಗಿಟ್ಟುಘೂರ್ಣಿಸಲು ಅವಗೆ ಚಿಂತೆಯುಂಟೆ | ೨ | ಏಸು ಜನ್ಮಗಳಲ್ಲಿ ಅರ್ಚಿಸಿದೆನೋ ನಾ ನಿನ್ನವಾಸುದೇವವಿಠ್ಠಲ ಪಾದಪದುಮಲೇಸಾಗಿ ಈ ಸುಕೃತದಿಂದೆನ್ನ ಹರಿದಾಸಈ ಸುಗುಣ ಗುರುರಾಯ ಎನಗೆ…
