Prasannavenkata dasaru

  • Sharanu surasura vandita

    Composer : Shri Prasannavenkata dasaru ಶರಣು ಸುರಾಸುರ ವಂದಿತ ಚರಣೆ [ಪ]ಸ್ವರಮಣನ ರಮಣಿ ಪೊರೆ ಅನ್ನಪೂರಣೆ [ಅ.ಪ] ಹಲವು ಆಭರಣಗಳಾಗಿ ಶ್ರೀಹರಿಗೆ |ವಲಿಸಿಕೊಂಡ ಮಹಾನಂದ ನಿಲಯಳೆ (೧) ಬೊಮ್ಮನಮ್ಮ ನಿನ್ನ ಸುಮ್ಮನದಲ್ಲಿ ನೆನೆ |ಸಮ್ಯಕ್ ಜ್ಞಾನವ ಮನನಿಸಿಕೊಡುವಳೆ (೨) ಸಮಯವರಿತು ಸುರ ಹರ ಬೊಮ್ಮರಿಗೆ |ಸಮಸಾಮರ್ಥ್ಯವ ನೀವ ಸಮರ್ಥಳೆ (೩) ಖ್ಯಾತಿಸುತಳೆ ಅಗಣಿತ ಗುಣಖ್ಯಾತಳೆ |ಅತೀ ದುರ್ಲಭ ದೇವನ ಸತಿ ಸನ್ಮತೆ (೪) ಶಂಖ ಕಂಠದಕಳಂಕ ಚರಿತಳೆ |ಶಂಖ ಪಿಡಿದ ಪ್ರಸನ್ವೆಂಕಟನರಸಿಯೆ (೫) SaraNu surAsura…

  • Varamahalakumi deviye kaye

    Composer : Shri Prasannavenkata dasaru ವರಮಹಾಲಕುಮಿದೇವಿಯೆ ಕಾಯೆ [ಪ] ಸೌರನಗರ ನೆಲೆವಾಸಿ ಮಹಾಮಾಯೆ [ಅ.ಪ] ಸಗರಾಜನುದರದಲಿ ಜನಿಸಿ |ಸಗ್ಗಿಗರರಸನ ತ್ವರದಲಿ ವರಿಸಿ |ನಿಗಮಾಗಮಕತಿ ವೇದ್ಯಳೆನಿಸಿ |ಜಗಕತಿ ಪಾವನ ನಗರ ನೆಲೆವಾಸಿಶ್ರೀ [೧] ನಿತ್ಯ ಮುಕುತೆ ನಿಜ ಭಕುತ ಪ್ರೀಯಳೆ |ಪುತ್ತಿಗೆ ರಾಮರ ಚಿತ್ತದಿ ಪೊಳೆವಳೆ ||ತೆತ್ತೀಸ ಕೋಟಿ ದೇವರ್ಕಳ ಕಾಯ್ವಳೆ |ನೃತ್ಯ ಮನೋಹರಿ ಸತ್ಕಥಾರ್ಥಿತಳೆ ಶ್ರೀ [೨] ಮಹಿಜೆ ಮಹಾಮಂತ್ರರಾಜನ ರಾಣಿ |ಮಹಾಮಹಾಂತರಭಿಮಾನಿ ಕನ್ಯಾಮಣಿ ||ಶ್ರೀಹರಿ ಮಹೋರದಲ್ಲಿಹ ಹೃನ್ಮಣಿ |ಮಹಿತ ಶ್ರೀಪ್ರಸನ್ನವೆಂಕಟನ ಗೃಹಖಣಿ ಶ್ರೀ [೩]…

  • Svaramanana ramani

    Composer : Shri Prasannavenkata dasaru ಸ್ವರಮಣನ ರಮಣಿ ತ್ರಿವೇಣಿ |ಸ್ಫುರಣ ಶ್ರೀಹರಿ ಚರಣಧಾರಿಣಿ [ಪ] ಕಲುಷಾಪಹಾರಿಯೆ ಜಲಚರಾನ್ವೇಷಣಲುಬ್ದೆ |ನಿಲಿಸೆನ್ನ ಹೃತ್ತೋಯಜದೊಳ್ ವಳ ಹೊರಗೂ |ನಳಿನನಾಭನ ನೆನೆವ ತಿಳಿಚಿತ್ತ ನಿರ್ಮಲೆ |ವಿಲಾಶೇಯಮಭಿಲಾಷಿಣಿ ಬುಧಶ್ರೇಣಿ [೧] ಉದದಿರಾಜನತೀ ಪ್ರೀತಿಯಾ ಪುತ್ರಿ |ಮದನಾರಿ ಜಟಜಸೂನೆ ಪಾಪೌಘ ದಹನೆ |ಪದಾಬ್ಜ ಪದುಮಕೆನ್ನನು ಭ್ರಮರನೆನಿಸಿ |ಉದದಿ ಮಥನನ ಪದ ಪದುಮವತೋರೆ [೨] ಹರೀತೋಷಲಾಭೆ ಸುಂದರಿ ಸುಭಗೆ |ದರುಶನ ಮಾತ್ರದಿ ತ್ರಿಕರಣ ಶುದ್ಧೀವೆ |ಹಿರಿಪಿಂಗಳಾಧಿಷ್ಠಿತೆ ದೇವಿ ಜಗನ್ಮಾತೆ |ತುರಗಗತಿ ಪ್ರಸನ್ವೆಂಕಟರಾಯನ್ನದಾಯಿತೆ [೩] svaramaNana ramaNi…

error: Content is protected !!