-
Palipudemma padumalaye
Composer : Shri Prasannavenkata dasaru ಪಾಲಿಪುದೆಮ್ಮ ಪದುಮಾಲಯೆ ತಾಯೆ [ಪ]ಪಾಲವಾರುಧಿ ತನಯೆ ಕಾಯೆ [ಅ.ಪ] ಬೊಮ್ಮನಮ್ಮ ರುಗ್ಮಿಣಿ ಜಾಂಬವತಿಯೆ |ಪೆರ್ಮೆಯ ಹೆಮ್ಮಗ ಅಜನ ಜನನಿ |ಹಮ್ಮಿನ ಮೊಮ್ಮಗ ರುದ್ರಾದಿ ಸುರರೆಲ್ಲರ |ಪ್ರೇಮದಿ ಪೊರೆದ ಮಹಾಮಹಿಮಳೆ [೧] ಮಾತರಿಶ್ವಪ್ರಿಯ ಮಾತುಳಾಂತಕ ಹರಿ |ಕೃತ್ತಿವಾಸಾದ್ಯರಿಂದ ನಿತ್ಯವೂ ಸ್ತುತ್ಯನಾ |ವೀತ ಶೋಕ ಭಯನಾ ಶ್ರೀನಿವಾಸನಾ |ಇತ್ತ ದಯಮಾಡಿ ತೋರ್ ತನ್ನುರವ ಪ್ರಮೆಯೆ [೨] ಕೋಮಲ ಚರಣಯುಗ್ಮಕಭಿನಮಿಪೆನಿನ್ನ |ನಾಮಕೊಂಡಾಡುವ ನಿರ್ಮಲ ಮನವಿತ್ತು |ಸ್ವಾಮಿ ಶ್ರೀ ಪ್ರಸನ್ವೆಂಕಟನೊಲುಮೆಯ |ಕಮ್ಮಲರ್ಸೂಸುವ ತೆರ ಇಮ್ಮಡಿಗೊಳಿಸಮ್ಮಾ [೩]…
-
Deva devana Rani
Composer : Shri Prasannavenkata dasaru ದೇವದೇವನ ರಾಣಿ ತ್ರಿವೇಣಿ [ಪ]ಭಾವುಕ ಜನರಭಿಮಾನಿ ಜನನಿ [ಅ.ಪ] ಪ್ರಯಾಗಮಾಧವನ ರಮಣಿ ನೀ |ಶ್ರೇಯೆ ಅತಿತನಾನುಗ್ರಹಕಾರಿಣಿ ||ಮಾಯಗೊಂಡ ಮಹಿಧರನ ಕಾಣೋವು |ಪಾಯ ಮುಕುತಿ ಯೋಗ್ಯಗಭಿದಾತೆ [೧] ವನಜಸಂಭವನನಲಾಕ್ಷ ಸುರರ ಕಡೆ- |ಗಣ್ಣನೋಟದಿಂ ಸ್ಥಾನ ಬದಲಿಪೆ ||ತನ್ನುರದ ಮೋಹದರಸಿ ಹರಿಯಾ |ಚೆನ್ನ ಚೆಲುವ ಸರಸಗಳಿಂ ಸೆಳೆವಾ [೨] ಸನಕಸನಂದನ ನಾರದಾದಿ ಘನ |ಮುನಿಜನವೃಂದಕೆ ಸನ್ನುತವೂ ನೀಚೆನ್ನಿಗ ಸಿರಿ ಪ್ರಸನ್ವೆಂಕಟರೇಯನ |ಸನಿಹ ತಂದು ತೋರಿದ ಗುಣಪೂರ್ಣಿ [೩] dEvadEvana rANi trivENi [pa]BAvuka…
-
Sagara shayanana Rani
Composer : Shri Prasannavenkata dasaru ಸಾಗರ ಶಯನನ ರಾಣಿ ತ್ರಿವೇಣಿ |ಪ|ಬಾಗುವೆ ಚರಣಕೆ ಕಾಯೆ ಕಲ್ಯಾಣಿ |ಅ.ಪ| ನೀಗತಿಯೆಂದಗತಾಗತ ನಂಬಲು |ಬೇಗನೆ ಬಂದು ಪೊರೆದವಳು |ಈಗೇತಕೆ ತಾಯ್ ಮಗನ ಸಲುಹಲು |ಮೊಗವೆತ್ತದೆ ಈ ಪರಿ ಕುಳಿತಿರುವಿ [೧] ಶ್ರೀಭೂದುರ್ಗೆಯ ರೂಪ ತಳೆದು ಹರಿ |ಈ ಭವಜರಿಗೆ ಕಾಣದ ತೆರದಲಿಅಭುಜೆಗೈದ ಮಹಾಮಾಯೆ ವಿಭಾವರಿ |ಭೂಭಾರ್ಗವಿಯೆ ಜಾಂಬೂನದಾಂಬರಿ [೨] ಆರು ಮೂರು ಪ್ರಖರಾಗಮ ಕ್ಷೇತ್ರದೆ |ಸಾರ ಶಾಸ್ತ್ರಕ್ರಮ ಪೂಜೆಗೊಳ್ಳುವೆಆರುನಾಲಕು ತತ್ವಾಧಿಕ ದೇವಿಯೆ |ಸ್ಮರಪಿತ ಶ್ರೀಪ್ರಸನ್ವೆಂಕಟನ ರಾಣಿಯೆ [೩] sAgara…
