-
Vijayaraja Guru rajadhiraja
Composer : Shri Raghupati vittala ಶ್ರೀ ರಘುಪತಿವಿಟ್ಠಲದಾಸಾರ್ಯರ ಕೃತಿರಾಗ: ಆರಭಿ , ಆದಿತಾಳ ವಿಜಯರಾಜ ಗುರುರಾಜಾಧಿರಾಜ ಮಹ –ರಾಜಶಿರೋರತುನ ॥ ಪ ॥ತ್ಯಜಿಸದೆ ನಿಮ್ಮ ಪದಬುಜವ ಬಿಡೆನೆಂಬೊಸುಜನರ ಪಾಲಿಸಯ್ಯ ॥ ಅ ಪ ॥ ಜ್ಞಾನಭಕುತಿ ಕೊಡು ಗಾನಶೀಲನ ಮಾಡುಹೀನಮನವ ಕೆಡಿಸೋ ।ನಾನೆಂಬೊ ಅಹಂಕಾರವನ್ನೆ ತೊಲಗಿಸೋನಿನ್ನವರವನೆನಿಸೋ ।ಧೇನಿಸುವಂದದಿ ಹರಿಯ ಪದಬುಜವಮಾನಸದಲಿ ಸರ್ವದಾ ।ಕಾಣಿಸಿಕೊಡು ನಾನು ಜೀವನು ನಿಜವೆಂಬೊಜ್ಞಾನ ಮನಕೆ ಬರಲಿ ॥ 1 ॥ ಮೌನವಾಗಿರಲಾರು ಹೀನತಿ ನುಡಿಯಲುಪ್ರಾಣಪ್ರೇರಕರಿಂದಲಿ ।ಆನೇನಾಡುವುದೆಲ್ಲ ಆನೆ ಎನ್ನುವೆನೆಲ್ಲಆನೆ ಸ್ವತಂತ್ರನಲ್ಲ ।ದೀನನಾಗೆರಗಿ…
-
Ratuna Dorakitalla
Composer : Shri Jagannatha dasaru ರತುನ ದೊರಕಿತಲ್ಲ ಎನಗೊಂದು-ರತುನ ದೊರಕಿತಲ್ಲ ||ಪ|| ರತುನ ದೊರಕಿತು ಎನ್ನ ಜನುಮ ಪ-ವಿತ್ರವಾಯಿತು ಇಂದಿನಾ ದಿನಯತನಗೈಯುತ ಬರುತಲಿರೆ, ಪ್ರ-ಯತನ ಮಾಡದೆ ವಿಜಯರಾಯರೆಂಬೊ ||ಅ.ಪ|| ಜ್ಞಾನವೆಂಬೋ ಪುತ್ಥಳಿ ಕಂಬಿಯಲ್ಲಿಅಣಿಮುತ್ತಿನ ಭಕ್ತಿಲಿ, ಸುಕೃತಮಾಲಾನಾನಾ ವಿಧಂಗಳಲಿ, ಯೋಚಿಸುತಿರೆ |ಪ್ರಾಣಪದಕವೆಂಬ ಮಾಲೆನು-ಮಾನವಿಲ್ಲದೆ ಕೊರಳಿಗ್ಹಾಕುತಗಾನದಿಂದಲಿ ಕುಣಿದು ಪಾಡುತದೀನ ಜನರುದ್ಧಾರ ಗಯ್ಯುವ ||೧|| ಪಥದಿ ನಾ ಬರುತಿರಲು,ಥಳಥಳವೆಂದುಅತಿಕಾಂತಿಯು ಕಾಣಲು ಬೆರಗಾಗುತ್ತ,ಅತಿಚೋದ್ಯವ ಕಾಣಲು, ಸೇವಿಸುತಿರೆ |ಸತತ ಕರಪಿಡಿದಾದರಿಸಿ ಮನೋರಥವ ಪೂರೈಸುತಲಿ ಸ-ನ್ಮತಿಯ ಪಾಲಿಸಿ ಮೋಕ್ಷ ಪಥವನೆಅತಿಶಯದಿ ತೋರುತಲಿ ಮೆರೆಯುವ ||೨||…
-
Karunava Mado
Composer : Shri Venugopala dasaru ಕರುಣವ ಮಾಡೊ ಶರಣರ ಪ್ರೇಮಿ,ಧೊರೆ ನೀನೆ ಗುರು ವಿಜಯರಾಯ [ಪ] ಸುರ ತರುವಿನ ಅನುಸರಿಸಿದ ಮನುಜಗೆ,ಮೃಷ್ಟಾನ್ನದ ಬರವೆ |ಸುರನದಿ ಅನುಸರಿಸಿದ ಮನುಜನಿಗೆಘನ ತೃಷೆಯ ಬಾಧೆಯೆ [೧] ಕಾಮಧೇನು ಎನ್ನ ಧಾಮದೊಳಗಿರೆಸೀಮೆ ಆಳುವರಾಸೆಯೆ,ರಾಮನ ಪದಯುಗ ತಾಮರಸವ ನಂಬೆಪಾಮರರಂಜಿಕೆಯೆ [೨] ವ್ರಜತಾಧಿಪ ವೇಣುಗೋಪಾಲ ವಿಠಲನ್ನನಿಜವಾಗಿ ನಂಬಿರುವ,ಕುಜನ ದಲ್ಲಣ ಗುರು ವಿಜಯರಾಯರೆ ನಿಮ್ಮಭಜಿಸುವೆನನವರತ [೩] karuNava mADo SaraNara prEmi,dhore neene guru vijayarAya [pa] sura taruvina anusarisida manujage,mRuShTAnnada barave |suranadi…
