-
Gange bhageerathi
Composer : Shri Harapanahalli Bheemavva ಗಂಗೆ ಭಾಗೀರಥೀ ಮಂಗಳಾಂಗಿಅಳಕನಂದನಳೆ ನೀ ಮಹಾ ಸುಂದರಾಂಗಿಸಿಂಧುರಾಜನ ರಾಣಿ ಸಿರಿ ಸಂಪತ್ತು ಕೊಟ್ಟುಕಂಗಳಿಂದಲಿ ನೋಡಿ ಕರುಣಿಸೆಮ್ಮನು ತಾಯೆ [ಪ] ಕಾಶಿ ಪಟ್ಟಣದಲಿ ವಾಸವಾಗಿಸರಸ್ವತಿಯ ಕೂಡಿ ನೀ ಸರಸವಾಗಿಸೋಸಿಲಿಂದ ಸೂರ್ಯಪುತ್ರಿ ಯಮುನೆಯ ಕೂಡಿ ಉ-ಲ್ಲಾಸದಿಂದ್ಹರಿದೆ ವಾರ್ಣಾಸಿಗ್ಹೋಗಿ (೧) ಹಾಲಿನಂತೆ ಹರಿವೊ ಗಂಗೆ ನೀನುನೀಲದಂತಿದ್ದ ಯಮುನೆಯ ಕೂಡಿಲೀಲೆಯಿಂದಲಿ ಸರಸ್ವತಿಯನ್ನು ಕೂಡಿಒಯ್ಯಾರದಿಂದ್ ಹರಿದೆ ಪ್ರಯಾಗದಲ್ಲಿ (೨) ಭಗೀರಥನ ಹಿಂದೆ ನೀ ಬಂದೆ ಓಡಿಸಗರನ ಸುತರ ಉದ್ಧಾರ ಮಾಡಿಜಗವ ಪಾವನ ಮಾಡೋ ಜಾಹ್ನವಿಯೆ ನೀ ಎನ್ನಮಗುವೆಂದು…
-
Enu Pelali teerthapatiya
Composer : Shri Vijayadasaru ಏನು ಪೇಳಲಿ ತೀರ್ಥಪತಿಯ ಮಹಿಮೆಮಾನವರಿಗೆ ಯಿಲ್ಲಿ ಮುಕ್ತಿ ಏಳಲವಯ್ಯಾ [ಪ] ಕಾಸಿಯೊಳು ಮರಣ ಮುಕ್ತಿಯೆಂದು ಪೇಳುವದುದೇಶದೊಳು ಪುಸಿಯಲ್ಲ ಸಿದ್ಧವೆನ್ನಿಈಶನುಪದೇಶದಿಂದಲಿ ವಿಗತ ಜನನಾಗಿಶ್ರೀ ಶಕ್ತಿ ವೇಣಿಮಾಧವನ ಸನ್ನಿಧಿ ಗೈಯ್ವಾ [೧] ನಿರುತ ವ್ಯಭಿಚಾರಿ ವಿಪ್ರನ ಕೆಡಿಸಿ ಕಾಸಿಯಲಿಇರಲು ಕಾಲಾಖ್ಯ ಉರಗನು ಕಚ್ಚಲುಪರಮಭೀತಿಯಿಂದ ಅವಳ ವಸನವ ತಂದುವರ ತ್ರಿವೇಣಿಯೊಳಗೆ ತೊಯಿಸಲು ಗತಿಸಾರ್ದರು [೨] ಇಲ್ಲಿಗೆ ನಡೆತಂದು ಸ್ನಾನವಂದೆ ಮಾಡಲುನಿಲ್ಲದೆ ಸನ್ಮುಕ್ತಿ ಧರನಾಗುವಾಬಲ್ಲಿದಾ ವಿಜಯವಿಠ್ಠಲವೇಣಿ ಮಾಧವನಸಲ್ಲಲಿತ ಪಾದವನು ಕಾಂಬ ಪ್ರಾಣೇಂದ್ರಿಯದಲಿ [೩] Enu pELali tIrthapatiya…
-
Namo namo Krishnaveni
Composer : Shri Prasannavenkata dasaru ನಮೋ ನಮೋ ಕೃಷ್ಣವೇಣಿನಮೋ ನಮೋ ಕೃಷ್ಣವೇಣಿ ಕಲ್ಯಾಣಿ [ಪ.] ಈ ಜನ್ಮದಘವು ನಾನಾ ಜನ್ಮ ಕೃತ ದೋಷಆರ್ಜಿತವಾದ ಪಂಚ ಮಹಾಪಾಪವುತ್ರಿಜಗತ್ಪಾವನಿಯೆ ನಿನ್ನ ಕಂಡು ನಾ ಕಳೆದೆರಾಜಿಸುವ ದಿವ್ಯಗತಿಯೀಯೆ ಎನ್ನತಾಯೆ (೧) ವಿಪ್ರಮುನಿ ಸುರನರರು ಕನ್ಯಕ್ಕೆ ಗುರು ಬರಲುಕ್ಷಿಪ್ರ ನೆರೆದರು ಉಭಯತೀರವಿಡಿದುಸುಪ್ರಾರ್ಥನೆಯ ಮಾಡಿ ಆನಂದದಿ ಹರಿಯನೆಪ್ರಸನ್ನೀ ಕರಿಸಿಕೊಳ್ಳುವರಮ್ಮ (೨) ನಿರ್ಮಳಾತ್ಮಕ ಗಂಗೆ ಸಂಗೆ ಗುಣೋತ್ತುಂಗೆಹಿಂಗಿಸು ಭವವ ಪಾವನತರಂಗೆಜಂಗಮ ಜಡಾತ್ಮರನುದ್ಧರಿಸುತಿಹೆ ಸದಾಮಂಗಳ ಶ್ರೀಪ್ರಸನ್ವೆಂಕಟನೊಲುಮೆಯಲ್ಲಿ (೩) namO namO kRuShNavENinamO namO kRuShNavENi kalyANi…
