-
Pahi mohana vittala
Composer : Shri Vijayadasaru – Ankita pradana to Shri Mohana dasaru ಪಾಹಿ ಮೋಹನ ವಿಠಲ ಪರಮಕರುಣಾ ಜಲನಿಧೆಮಹದಾದಿ ದೇವ ವಂದ್ಯ |ಮೋಹಪಾಶವ ಬಿಡಿಸಿ ನಂಬಿದವಗೆ ಒಲಿದುರಹಸ್ಯಮತಿ ಕೊಡುವುದು ಸ್ವಾಮಿ [ಪ] ನೀನಿತ್ತ ಮಾತುಗಳು ಪೊಳ್ಳಾಗಬಲ್ಲವೆಅನಂತ ಜನುಮವಾಗೆಆನೊಬ್ಬನೆನ್ನದಿರು ಕೀರ್ತಿಸುವ ನರನೆಂದುಜ್ಞಾನಿಗಳಿಗರಿವಾಗಿದೆಏನಯ್ಯ ನಿನ್ನಂಘ್ರಿ ಭಜಿಸದಲೆ ಇರುತಿಪ್ಪಮಾನವನ ಕ್ಲೇಶಕೆಣೆಯೆಆನಂದ ನಂದನನೆ ತೃಣವ ಪಿಡಿದು ರತುನವನು ಮಾಡಿ ತೋರುವ ಸ್ವಾಮಿ [೧] ನಿನ್ನಧೀನ ಕರ್ಮ ಸ್ವಭಾವ ಮೊದಲಾಗಿಅನ್ಯಥಾ ಯೆಲ್ಲಿ ಕಾಣೆಮನ್ನಿಪುದು ಮುದದಿಂದ ಮಂದನೆನ್ನದೆ ಎನ್ನಬಿನ್ನಪವ ಬರಿದೆನಿಸದೆಅನ್ಯನಿವನಲ್ಲವೊ ಎನ್ನನ್ನೆ ಪೊಂದಿದನಿನ್ನ…
-
Kaaye Shri Harijaaye
Composer : Shri Mohana dasaru ಕಾಯೆ ಶ್ರೀ ಹರಿ ಜಾಯೆ ಸಜ್ಜನ ಪ್ರೀಯೆ ಸುರಮುನಿ ಗೇಯೆ [ಪ]ತಾಯೇ ಎನ್ನಯ ಕಾಯ ನಿನ್ನದು ಕಾಯೇ ಕರುಣಾಬ್ಧಿಯೇ [ಅ.ಪ] ಪದ್ಮ ಮಂದಿರೆ ಪದ್ಮ ಗಂಧಿನಿಪದ್ಮಕುಚ ರಾಣಿ, ಪದ್ಮಶರ ಮಾತೇಪದ್ಮ ಬಾಂಧವೆ ಪದ್ಮರಿಪು ತಾಯೆ ||ಪದ್ಮಿ ಪದ್ಮಾಕ್ಷಿ ಪದ್ಮಾಭಿನ್ನಪದ್ಮಪಾದ ಹೃ-ತ್ಪದ್ಮದೊಳಗಿಟ್ಟಮುದ್ದು ಮಹಾ ಲಕುಮೀ [೧] ಮೂಕ ದಾನವನ ಕೊಂದು ಅವನಕೊಂಕು ಮನ್ನಿಸಿದ ಮೂಕಾಂಬಿಕೆಯೇಶ್ರೀಕಲಾ ಪಾಲಸಾಗರವಾಗಿ ಸಾಕಿದೆ ಋಷಿಯಾ ||ವಾಕೇಶ ಶಿವ ಪಾಕಶಾಸನ-ನೇಕ ಜನಪುಷ್ಪ ವೃಷ್ಟಿ ಗರೆಯಾಲುಈ ಕೊಲ್ಲೂರೊಳು ನೀ ಕರುಣದಿ…
-
Pahi Pahi guru Mohana raya
Composer : Shri Pranesha dasaru ಪಾಹಿ ಪಾಹಿ ಗುರು ಮೋಹನರಾಯಾ ಪಾಹಿ ಪಾಹಿ [ಪ] ಪಾಹಿ ಪಾಹಿ ಗುರು ಮೋಹನ ಸಿಂಧುರವಾಹನಪದ ಪಂಕೇರುಹ ಭೃಂಗಾ [ಅ.ಪ] ನವ ಭಕುತಿಗಳೆಂಬೊ ಸರಪಳಿಯೊಳು |ನವ ನವ ರೂಪದಿ ನಲಿವ ಸುಧೀರಾ [೧] ಪದುಮನಾಭನ ಧ್ಯಾನದಿ ಮದವೇರಿ |ಪದೆ ಪದೆಗೆ ಹರಿ ಪದವಾಗಾವ [೨] ವಿಜಯದಾಸರ ಪಾದರಜವ ಧರಿಸಿ ವೀ- |ರಜ ಪ್ರಾಣೇಶ ವಿಠಲನ ಭಜಿಸಿದಿ [೩] pAhi pAhi guru mOhanarAyA pAhi pAhi [pa] pAhi pAhi…
