Krishna

  • Rangayya ninagarenendaro

    Composer : Shri Purandara dasaru ರಂಗಯ್ಯ ನಿನ್ನಗಾರೇನೆಂದರೊ ||ಪ|| ಸಕಲ ಭಾಗವತರು ಗತಿತಾಳ ಮೇಳದಿಂದತಕಕಿಟಕಿಟತಕ ಧಿಮಿಕೆಂದು ಕುಣಿವಾಗ ||ಅ|| ಸಕ್ಕರೆ ಚೀಣಿ ಹಾಲಿನ ಕೆನೆ ರಸದಿಂದ |ಉಕ್ಕುವ ನೊರೆಹಾಲನು ಮೆದ್ದ ಕೃಷ್ಣಯ್ಯ ||೧|| ದ್ರುಪದನ ಮಗಳ ಸೀರೆಯ ಸುತ್ತಿ ಸೆಳೆವಾಗ |ಕೃಪೆಯಿಂದ ಅಕ್ಷಯವಿತ್ತ ದೇವನೆ ನಿನ್ನ ||೨|| ಜಗದೊಡೆಯ ಮೂಡಲಗಿರಿಯ ಕೋನೇರಿ ತಿಮ್ಮ |ಅಗಣಿತ ಮಹಿಮ ಶ್ರೀಪುರಂದರವಿಠಲ ನಿನ್ನ ||೩|| raMgayya ninnagArEneMdaro ||pa|| sakala BAgavataru gatitALa mELadiMdatakakiTakiTataka dhimikeMdu kuNivAga ||a|| sakkare…

  • Hucchu hidiyito

    Composer : Shri Purandara dasaru ಹುಚ್ಚು ಹಿಡಿಯಿತೊ – ಎನಗೆ ಹುಚ್ಚು ಹಿಡಿಯಿತೊ [ಪ]ಅಚ್ಯುತನ ನಾಮವೆಂಬ ಮೆಚ್ಚು ಮದ್ದು ತಲೆಗೆ ಏರಿ [ಅ.ಪ] ವಾಸುದೇವನೆಂಬ ನಾಮ ವದನದಲ್ಲಿ ಒದರುವೆ – ಮಾಯಪಾಶವೆಂಬ ಬಲೆಯ ಹರಿದು ಹರಿದು ಬಿಸುಡುವೆ ||ಕೇಶವನ ಹೂವ ಎನ್ನ ಮುಡಿಗೆ ಮುಡಿಸುವೆ – ಭವದಕ್ಲೇಶವೆಂಬ ಗೋಡೆಯನ್ನು ಕೆದರಿಕೆದರಿ ಬಿಸುಡುವಂಥ [೧] ಕೃಷ್ಣನಂಘ್ರಿ ಕಮಲಗಳಲಿ ನಲಿದು ನಲಿದು ಬೀಳುವೆ – ಭವಕಷ್ಟವೆಂಬ ಕುಂಭಗಳನು ಒಡೆದು ಒಡೆದು ಹಾಕುವೆ ||ನಿಷ್ಠರನ್ನು ಕಂಡರವರ ಹಿಂದೆ ಹಿಂದೆ ತಿರುಗುವೆಭ್ರಷ್ಟ…

  • Sakala kaladi maadida

    Composer : Shri Vijayadasaru ಸಕಲ ಕಾಲದಿ ಮಾಡಿದ ಕರ್ಮವು |ಭಕುತಿಯಿಂದಲಿ ಬಂದರ್ಪಿತವೆನ್ನಿ ಉಡುಪಿಯಲಿ [ಪ] ಯಾತ್ರೆಗಳ ಮಾಡಲಿ ತೀರ್ಥಗಳ ಮೀಯಲಿ |ಸ್ತೋತ್ರಗಳ ಮಾಡಲಿ ಕೊಂಡಾಡಲಿ ||ನೇತ್ರದಲಿ ನೋಡಿ ಕರಮುಗಿದು ನಮಸ್ಕರಿಸಲಿಹೋತ್ರವನು ಮಾಡಿ ಹಿತವಾಗಿ ನುಡಿಯಲಿ ||೧|| ದಾನವನು ಮಾಡಲಿ ದಾಕ್ಷಿಣ್ಯವಾಗಲಿ |ಮೌನವನು ಮಾಡಲಿ ಮಾತಾಡಲಿ ||ಕಾನನವ ಸೇರಲಿ ಕಂಡಲ್ಲಿ ತಿರುಗಲಿ |ಏನೇನು ಚರಿತೆಗಳ ಮಾಡುತಿರಲಿ ||೨|| ಪುಣ್ಯವಾದರು ಲೇಸೆ ಪಾಪವಾದರು ಹರಿ |ಮನ್ನಿಸಿ ತಾನೀಗ ತೆಗೆದುಕೊಂಡು ||ತನ್ನ ಸಮೀಪದಿ ಇಟ್ಟುಕೊಂಡು ಅವನಘನ್ನ ಮೂರುತಿ ವಿಜಯವಿಠ್ಠಲ ಪೊರೆವ…

error: Content is protected !!