Composer : Shri Modalkal Sheshadasaru
ವ್ರತವನಲ್ಲದೆ ಅನುವ್ರತ ಮಾಡಬಹುದೇ
ಶತಮುಖ ಸ್ಥಿತನಾದ ದಿವಿಜ ಪತಿಯ [ಪ]
ದಾನಶೀಲನೆನಿಸಿ ವಿಬುಧರಿಗೆ ಮೃಷ್ಟಾನ್ನ
ಪಾನಗಳುಂಬೋ ಪಂಕ್ತಿಯಲ್ಲಿ |
ದೀನನೊಬ್ಬನು ಬರಲು ದೋಷಿಯಾದವನೆಂದು
ಆನನವ ತಿರುಹುವನೇ ಅವನಿಯೊಳಗೇ [೧]
ಅನ್ನ ಕಾರಣವಾದ ಪರ್ಜನ್ಯದಿಂದಲಿ ಸಕಲ
ಜನರನು ಪರಿತೋಷ ಬಡಿಸಿ ಕೃಪದಿ |
ಚೆನ್ನಿಗನೆ ಈ ಅಲ್ಪ ಪ್ರಾದೇಶ ಸ್ಥಿತರನ್ನು
ಬನ್ನ ಬಡಿಸುವರೇನೊ ಘನ್ನ ಮಹಿಮಾ [೨]
ಭಕ್ತವತ್ಸಲನೆಂಬೊ ಬಿರುದು ನಿನಗೆ ಉಂಟೆ
ಸಖತನದಿ ಬಿನ್ನೈಪೆ ಸಾರ್ವಭೌಮ |
ಭಕುತ ಸುರಧೇನು ಗುರುವಿಜಯ ವಿಠಲರೇಯ
ಉಕುತಿ ಲಾಲಿಸಿ ವೃಷ್ಟಿ-ಗರಿವುದು ಕರುಣದಲಿ [೩]
vratavanallade anuvrata mADabahudE
SatamuKa sthitanAda divija patiya [pa]
dAnaSIlanenisi vibudharige mRuShTAnna
pAnagaLuMbO paMktiyalli |
dInanobbanu baralu dOShiyAdavaneMdu
Ananava tiruhuvanE avaniyoLagE [1]
anna kAraNavAda parjanyadiMdali sakala
janaranu paritOSha baDisi kRupadi |
cennigane I alpa prAdESa sthitarannu
banna baDisuvarEno Ganna mahimA [2]
BaktavatsalaneMbo birudu ninage uMTe
saKatanadi binnaipe sArvaBauma |
Bakuta suradhEnu guruvijaya viThalarEya
ukuti lAlisi vRuShTi-garivudu karuNadali [3]

Leave a Reply
You must be logged in to post a comment.