Composer : Shri Shyamasundara dasaru on Shri Ikoor Narasimhacharya
Shri Ikoor Narasimhacharya – 1883 – 1947
Aradhane : Phalguna Shukla Dvitiya
ಬಾರಯ್ಯಾ ಬಾರಯ್ಯಾ |
ಸೂರಿವರಿಯ ಐಕೂರು ನಿಲಯ ಗುರು || ಪ ||
ನೀನಾಕಿದ ಸುಜ್ಞಾನದ ಸಸಿಗಳು |
ಮ್ಲಾನವಾಗುತಿವೆ ಸಾನುರಾಗದಲಿ || ೧ ||
ಸಲೆ ತವ ಕರುಣ ಸಲಿಲವ ಎರದು |
ಘಳಿಲನೆ ವೃದ್ಧಿಯಗೊಳಿಸಿ ಸಲಹಲು || ೨ ||
ನಾಟಿದ ಸಸಿಗಳು ನೀಟಾಗುವ ಪರಿ |
ತೋಟಿಗ ನೀ ಕೃಪೆ ನೋಟದಿ ಸಲುಹಲು || ೩ ||
ಕೋವಿದವರ ನೀ ಕಾವಲಿ ಇರಲು | ಕು |
ಜೀವಿಗಳಿಂದಲಿ ಹಾವಳಿಯಾಗದು || ೪||
ನೀ ಮರೆದರೆ ಸುಕ್ಷೇಮವಾಗುದು |
ಶ್ಯಾಮಸುಂದರನ ಪ್ರೇಮದ ಪೋತ || ೫ ||
bArayyA bArayyA |
sUrivariya aikUru nilaya guru || pa ||
nInAkida suj~jAnada sasigaLu |
mlAnavAgutive sAnurAgadali || 1 ||
sale tava karuNa salilava eradu |
GaLilane vRuddhiyagoLisi salahalu || 2 ||
nATida sasigaLu nITAguva pari |
tOTiga nI kRupe nOTadi saluhalu || 3 ||
kOvidavara nI kAvali iralu | ku |
jIvigaLiMdali hAvaLiyAgadu || 4||
nI maredare sukShEmavAgudu |
SyAmasuMdarana prEmada pOta || 5 ||

Leave a Reply
You must be logged in to post a comment.