Ane banditamma

Composer : Shri Purandara dasaru

Smt.Sridevi

ಆನೆ ಬಂದಿತಮ್ಮ
ಮರಿಯಾನೆ ಬಂದಿತಮ್ಮ |ಪ|
ತೊಲಗಿರೆ ತೊಲಗಿರೆ ಪರಬ್ರಹ್ಮ
ಬಲು ಸರಪಳಿ ಕಡಕೊಂಡು ಬಂತಮ್ಮ |ಅ ಪ|

ಕಪಟನಾಟಕದ ಹಿರಿಯಾನೆ |
ನಿಕಟ ಸಭೆಯಲಿ ನಿಂತಾನೆ |
ಶಕಟನ ಭಂಡಿಯ ಮುರಿದಾನೇ |
ಕಪಟ ನಾಟಕದಿಂದ ಸೋದರ ಮಾವನ
ಅಕಟಕಟೆನ್ನದೆ ಕೊಂದಾನೆ |೧|

ಏಳು ಭುವನವನು ಉಂಡಾನೆ |
ಸ್ವಾಮಿ ಬಾಲಕನೆಂಬ ಚೆಲುವಾನೆ |
ಬಲ್ಲಗೋವುಗಳ ಕೂಡ ನಲಿದಾನೆ |
ಚೆಲುವ ಕಾಳಿಂಗನ ಹೆಡೆಯಲಿ ಆಡುತ |
ಸೊಬಗನು ಹೆಚ್ಚಿ ಬರುತಾನೆ |೨|

ಭೀಮಾರ್ಜುನರನು ಗೆಲಿಸ್ಯಾನೆ
ಪರಮ ಭಾಗವತರ ಪ್ರಿಯದಾನೆ |
ಮುದದಿಂದ ಮಧುರೆಲಿ ನಿಂತಾನೆ |
ಪದುಮನಾಭ, ಪಂಡರಿ ರಾಯ
ಪುರಂದರವಿಠ್ಠಲನೆಂಬಾನೆ |೩|


Ane baMditamma
mariyAne baMditamma |pa|
tolagire tolagire parabrahma
balu sarapaLi kaDakoMDu baMtamma |a pa|

kapaTanATakada hiriyAne |
nikaTa saBeyali niMtAne |
SakaTana BaMDiya muridAnE |
kapaTa nATakadiMda sOdara mAvana
akaTakaTennade koMdAne |1|

ELu Buvanavanu uMDAne |
svAmi bAlakaneMba celuvAne |
ballagOvugaLa kUDa nalidAne |
celuva kALiMgana heDeyali ADuta |
sobaganu hecci barutAne |2|

BImArjunaranu gelisyAne
parama BAgavatara priyadAne |
mudadiMda madhureli niMtAne |
padumanAbha, paMDari rAya
puraMdaraviThThalaneMbAne |3|

Leave a Reply

You might also like

error: Content is protected !!