Samsaravembantha bhagyavirali

Composer : Shri Purandara dasaru

By Smt.Shubhalakshmi Rao

ಸಂಸಾರವೆಂಬಂಥ ಭಾಗ್ಯವಿರಲಿ ||ಪ||
ಕಂಸಾರಿ ನೆನವೆಂಬ ಸೌಭಾಗ್ಯವಿರಲಿ ||ಅ||

ತಂದೆ ನೀನೇ ಕೃಷ್ಣ, ತಾಯಿ ಇಂದಿರೆ ದೇವಿ,
ಪೊಂದಿದ ಅಣ್ಣನು ವನಜ ಸಂಭವನು,
ಇಂದುಮುಖಿ ಸರಸ್ವತೀ ದೇವಿಯೆ ಅತ್ತಿಗೆಯು,
ಎಂದಿಂದಿಗೂ ವಾಯು ದೇವರೆ ಗುರುವು |೧|

ಭಾರತೀ ದೇವಿಯೆ ಗುರು ಪತ್ನಿ ಎನಗೆ,
ಗರುಡ ಶೇಷಾದಿಗಳೆ ಗುರು ಪುತ್ರರು,
ಹರಿದಾಸ-ನೆಂಬುವರೆ ಇಷ್ಟ ಬಾಂಧವರೆನಗೆ,
ಹರಿ ಭಜನೆ ನಡೆಯುತಿಹ ಸ್ಥಳವೆ ಮಂದಿರವು |೨|

ಸರುವಾಭಿಮಾನವನು ತ್ಯಜಿಸುವುದೆ ಸುಸ್ನಾನ,
ಹರಿಯ ನಾಮವೆ ಇನ್ನು ಅಮೃತಪಾನ,
ವರದ ಪುರಂದರ ವಿಠ್ಠಲ ನಿನ್ನ ಪಾದ ಧ್ಯಾನ,
ಕರುಣಿಸಿ ಅನವರತ ಕರಪಿಡಿದು ಕಾಯೊ |೩|


saMsAraveMbaMtha BAgyavirali ||pa||
kaMsAri nenaveMba sauBAgyavirali ||a||

taMde nInE kRuShNa, tAyi iMdire dEvi,
poMdida aNNanu vanaja saMBavanu,
iMdumuKi sarasvatI dEviye attigeyu,
eMdiMdigU vAyu dEvare guruvu |1|

BAratI dEviye guru patni enage,
garuDa SEShAdigaLe guru putraru,
haridAsa-neMbuvare iShTa bAMdhavarenage,
hari Bajane naDeyutiha sthaLave maMdiravu |2|

saruvABimAnavanu tyajisuvude susnAna,
hariya nAmave innu amRutapAna,
varada puraMdara viThThala ninna pAda dhyAna,
karuNisi anavarata karapiDidu kAyo |3|

Leave a Reply

You might also like

error: Content is protected !!