Ena Bedali nanu ninna

Composer : Shri Gopaladasaru

By Smt.Shubhalakshmi Rao

ಏನ ಬೇಡಲಿ ನಾನು ನಿನ್ನ ಬಳಿಗೆ ಬಂದು
ನೀನಿತ್ತ ಸೌಭಾಗ್ಯ ನಿಬಿಡವಾಗಿದೆ ಎನಗೆ ||ಪ||

ಜನನಿಯ ಕೊಡು ಎಂದು ಜಯವಂತ ಬೇಡುವೆನೇ
ಜನನಿ ಏನಿತ್ತಳಾ ಧೃವರಾಯಗೆ
ಜನಕನ ಕೊಡು ಎಂದು ಜಗದೀಶ ಬೇಡುವೆನೇ
ಜನಕನೇನಿತ್ತನಾ ಪ್ರಹ್ಲಾದಗೇ ||೧||

ಅನುಜನ ಕೊಡು ಎಂದು ಅತಿಶಯದಿ ಬೇಡುವೆನೇ
ಅನುಜನೇನಿತ್ತನೈ ಆ ವಾಲಿಗೆ
ಧನವನ್ನೆ ಕೊಡು ಎಂದು ದೈನ್ಯದಲಿ ಬೇಡುವೆನೇ
ಧನವ ಗಳಿಸಿದಾ ಸುಯೋಧನನೇನಾದನು ||೨||

ಸತಿಯಳ ಕೊಡು ಎಂದು ಮತಿವಂತ ಬೇಡುವೆನೇ
ಸತಿಯಿಂದ ದ್ಯು ನಾಮಕನೇನಾದನೈ
ಸುತರುಗಳ ಕೊಡು ಎಂದು ಸತತದಲಿ ಬೇಡುವೆನೇ
ಸುತರಿಂದ ಧೃತರಾಷ್ಟ್ರ ಗತಿಯೆಷ್ಟು ಪಡೆದ ||೩||

ಬಂಧುಗಳ ಕೊಡು ಎಂದು ಚೆಂದದಲಿ ಬೇಡುವೆನೇ
ಬಂಧುಗಳು ಸಲಹಿದರೇ ಗಜರಾಜನಾ
ಅಂದಣವ ಕೊಡು ಎಂದು ಅಂದದಲಿ ಬೇಡುವೆನೇ
ಅಂದಣವನೇರಿದ ನಹುಷನೇನಾದನೈ ||೪||

ಬೇಡುವೆನು ನಾ ನಿನ್ನ ಬೇಡತಕ್ಕದು ದೇವ
ನೀಡೆನೆಂಬುದು ನಿನ್ನ ಮನದೊಳಿತ್ತೇ
ಮೂಡಲ ಗಿರಿವಾಸ ಗೋಪಾಲವಿಠಲಾ
ಪರರ ಬೇಡದಂತೆ ಎನ್ನ ಮಾಡಯ್ಯ ಹರಿಯೇ ||೫||


Ena bEDali nAnu ninna baLige baMdu
nInitta saubhAgya nibiDavAgide enage ||pa||

jananiya koDu eMdu jayavaMta bEDuvenE
janani EnittaLA dhRuvarAyage
janakana koDu eMdu jagadIsha bEDuvenE
janakanEnittanA prahlAdagE ||1||

anujana koDu eMdu atishayadi bEDuvenE
anujanEnittanai A vAlige
dhanavanne koDu eMdu dainyadali bEDuvenE
dhanava gaLisidA suyOdhananEnAdanu ||2||

satiyaLa koDu eMdu mativaMta bEDuvenE
satiyiMda dyu nAmakanEnAdanai
sutarugaLa koDu eMdu satatadali bEDuvenE
sutariMda dhRutarAShTra gatiyeShTu paDeda ||3||

baMdhugaLa koDu eMdu ceMdadali bEDuvenE
baMdhugaLu salahidarE gajarAjanA
aMdaNava koDu eMdu aMdadali bEDuvenE
aMdaNavanErida nahuShanEnAdanai ||4||

bEDuvenu nA ninna bEDatakkadu dEva
nIDeneMbudu ninna manadoLittE
mUDala girivAsa gOpAlaviThalA
parara bEDadaMte enna mADayya hariyE ||5||

Leave a Reply

You might also like

error: Content is protected !!