Karava mugida mukhyaprana

Composer : Shri Gopaladasaru

ಕರವ ಮುಗಿದ ಮುಖ್ಯಪ್ರಾಣ
ದುರುಳರ ಸದೆದು ಶರಣರ ಪೊರೆಯೆಂದು ||ಪ||

ಜೀವೇಶರೈಕ್ಯವು ಜಗತು ಮಿಥ್ಯೆ ಯೆಂದು
ಈ ವಿಧ ಹೇಳುವ ಮಾಯಿಗಳಳಿಯೆಂದು ||
ಇಲ್ಲಿ ಮಾತ್ರ ಭೇದ ಅಲ್ಲಿ ಒಂದೆ ಎಂಬೊ
ಕ್ಷುಲ್ಲಕರ ಹಿಡಿದು ಹಲ್ಲು ಮುರಿಯೆಂದು |೧|

ಪರಿಪರಿ ಭಕ್ತರ ಹೃದಯ ಕಮಲದಲ್ಲಿ
ನಿರುತ ಮಾಡುವ ಕರ್ಮ ಹರಿಗೆ ಅರ್ಪಿತವೆಂದು ||
ಹರಿ ಮಾಡೊ ವ್ಯಾಪಾರ ಬಲ್ಲ ಕಾರಣದಿಂದ
ಸಿರಿ ಗೋಪಾಲವಿಠಲಗೆ ಎರಗಿ ನಿಂದು |೨|


karava mugida muKyaprANa
duruLara sadedu SaraNara poreyeMdu ||pa||

jIvESaraikyavu jagatu mithye yeMdu
I vidha hELuva mAyigaLaLiyeMdu ||
illi mAtra BEda alli oMde eMbo
kShullakara hiDidu hallu muriyeMdu |1|

paripari Baktara hRudaya kamaladalli
niruta mADuva karma harige arpitaveMdu ||
hari mADo vyApAra balla kAraNadiMda
siri gOpAlaviThalage eragi niMdu |2|

Leave a Reply

You might also like

error: Content is protected !!