Gopaladasara Sripada smarisalu

Composer : Shri Varadagopala vittala

Smt.Lakshmi

ಗೋಪಾಲದಾಸರ ಶ್ರೀಪಾದ ಸ್ಮರಿಸಲು ಆಪತ್ತು
ಪರಿಹಾರವಾಗುವದು || ಪ ||

ತರಣಿವುದಿತವಾಗೆ ತಮವು ನಿಲ್ಲುವದುಂಟೆ |
ತರಕಿಸುವದು ಯಾತಕೆ |
ಪರಮ ಕರುಣಿ ನಮ್ಮ ಗುರುಗಳ ನೆನೆದರೆ |
ತ್ವರಿತದಲ್ಲೋಡುವವು ದುರಿತ ರಾಶಿಗಳು || ೧ ||

ಪವಿಗೆ ಮಣಿಯದ ಪರ್ವತಗಳುಂಟೆ ಮಹ |
ಪವನಕೆ ಪಟ ನಿಲ್ಲುವುದುಂಟೆ |
ಕರಿರಾಜ ಭಾಗಣ್ಣ ರಾಯರ ನೆನೆದರೆ |
ಕವಿವವೆ ಕಲಿಮಲ ಕಲುಷಗಳು ||| ೨ ||

ಕರಿಯುಸಿಂಹನ ಕೂಡ ಕಾದಿಗೆಲಿದುದುಂಟೆ
ಕುರಿಯು ತರಕ್ಷುನ ತರಬಲುಂಟೆ |
ಗುರು ಸ್ಮರಣಿಯು ಮನದಲಿ ಗುರುತಿಟ್ಟದೆ
ದುರಿತಗಳುಂಟೆ ದುರುಳಮತಿಯೆ || ೩ ||

ಅನಳಗೆ ಅರಳಿಯು ಅಡ್ಡಾಗುವದುಂಟೆ |
ಧನದಗೆ ವುಂಟೆ ದಾರಿದ್ರವನೂ |
ಅನಘ ಸದ್ಗುರುವಿನ ಅನುಸರಿಸಲು ಭಯಾ |
ಇನಿತಾಗದವರಾ ನೆನೆದವಗೆ || ೪ ||

ಹರಿದಿನ ವ್ರತಕೆ ಪೋಗದ ಪಾಪಗಳುಂಟೆ |
ಸರಸಗಳುಂಟೆನೋ ಶುಕಸಾಕುವಗೆ |
ವರದಗೋಪಾಲವಿಠ್ಠಲ ದಾಸರ ಪಾದ |
ನಿರುತ ನೆನೆವಗೆ ಉಂಟೇನೊ ಭೀತಿಗಳು || ೫ |||


gOpAladAsara SrIpAda smarisalu Apattu
parihAravAguvadu || pa ||

taraNivuditavAge tamavu nilluvaduMTe |
tarakisuvadu yAtake |
parama karuNi namma gurugaLa nenedare |
tvaritadallODuvavu durita rASigaLu || 1 ||

pavige maNiyada parvatagaLuMTe maha |
pavanake paTa nilluvuduMTe |
karirAja BAgaNNa rAyara nenedare |
kavivave kalimala kaluShagaLu ||| 2 ||

kariyusiMhana kUDa kAdigeliduduMTe
kuriyu tarakShuna tarabaluMTe |
guru smaraNiyu manadali gurutiTTade
duritagaLuMTe duruLamatiye || 3 ||

anaLage araLiyu aDDAguvaduMTe |
dhanadage vuMTe dAridravanU |
anaGa sadguruvina anusarisalu BayA |
initAgadavarA nenedavage || 4 ||

haridina vratake pOgada pApagaLuMTe |
sarasagaLuMTenO SukasAkuvage |
varadagOpAlaviThThala dAsara pAda |
niruta nenevage uMTEno BItigaLu || 5 |||

Leave a Reply

You might also like

error: Content is protected !!