Nambelo pada

Composer : Shri Tande Shripati vittala on Shri Shripati vittala dasaru

ನಂಬೆಲೋ ಪಾದ ಪೊಂದಲೋ | ಮನದ |
ಹಂಬಲ ನೀಡುವ ಶ್ರೀಪತಿ ದಾಸರ || ಪ ||

ಶ್ರೀನಿಕೇತನ ಧಾರುಣೀಪತಿ ದಶರಥ |
ಕ್ಷೋಣಿಪ ಜಾತ ವಿಠ್ಠಲ ದಾಸರ |
ಮೇಣು ಕಾರುಣ್ಯವ ಪಡೆದು ಧರೆಯೊಳು | ಮ |
ದ್ದಾನೆಯಂತೆ ಸಂಚಾರ ಮಾಡುವರನ್ನ || ೧ ||

ವೇದಗಿರೀಂದ್ರ ಧಾರುಣಿ ಪಾಲಕ ಬಾಲಾ |
ಮೇದಿನಿ ಬೇಡಿದ ಬುಧ ರಾಮ |
ಯಾದವ ಸರ್ವಜ್ಞ ಹಯಮೊಗನಾದ |
ಅನಾದಿ ಮೂರುತಿಯ ಸಂತತ ಧೇನಿಪರನ್ನ || ೨ ||

ಇಂದ್ರ ವಿಜಯ ಗೋಪಾಲ ಮೋಹನ |
ವೇಣು ಚಂದದಿ ಶ್ರೀ ವೇದವ್ಯಾಸ | ರಾಘ |
ವೇಂದ್ರ ದಾಸಾಚಾರ್ಯರಿಂದ ಪಾಲಿತ ಎನ್ನ |
ತಂದೆ ಶ್ರೀಪತಿ ವಿಠ್ಠಲನ ದಾಸಾರ್ಯರ ನಂಬಿರೋ || ೩ ||


naMbelO pAda poMdalO | manada |
haMbala nIDuva SrIpati dAsara || pa ||

SrInikEtana dhAruNIpati daSaratha |
kShONipa jAta viThThala dAsara |
mENu kAruNyava paDedu dhareyoLu | ma |
ddAneyaMte saMcAra mADuvaranna || 1 ||

vEdagirIMdra dhAruNi pAlaka bAlA |
mEdini bEDida budha rAma |
yAdava sarvaj~ja hayamoganAda |
anAdi mUrutiya saMtata dhEniparanna || 2 ||

iMdra vijaya gOpAla mOhana |
vENu caMdadi SrI vEdavyAsa | rAGa |
vEMdra dAsAcAryariMda pAlita enna |
taMde SrIpati viThThalana dAsAryara naMbirO || 3 ||

Leave a Reply

You might also like

error: Content is protected !!