Composer : Shri Gonavarada Ramadasaru
ಎಲ್ಲನು ನಿನಗೆ ಕೂಡಿತಯ್ಯ ಹರಿ
ಪುಲ್ಲನಾಭ ದಯ ಮಾಡಯ್ಯ [ಪ]
ಖುಲ್ಲನು ನಾಬಲು ಎಲ್ಲಿಯು ಸಲ್ಲದೆ
ತಲ್ಲಣಿಸುತ ನಿನ್ನ ಬಲವೆಂದೆ ದೇವ ದೇವ [ಅ.ಪ]
ದೃಢಗುಣ ಎನ್ನೊಳಿಲ್ಲಯ್ಯ ಬಲು
ನುಡಿ ಹೀನ ನಾಕಡು ಪಾಪ್ಪಯ್ಯ
ನಡೆ ನುಡಿ ಇಲ್ಲದೆ ಕಡುನೊಂದೀಗ ನಿಮ್ಮನ್-
ಹುಡುಕುತ ತಿರುಗುವೆ ಜಡಜಾಕ್ಷನೆ ಪೊರೆ [೧]
ಪರರದ್ರವ್ಯ-ವಪಹರಿಸಿದೆನೊ ನಾ
ಪರಮ ನೀಚನಾಗಿ ಚರಿಸಿದೆನೊ
ಮರವೆಲಿ ಆಗಣಿತ ದುರಿತವನುನಾ
ಜರೆಯದೆ ಪರಿಪರಿ ಮಾಡಿದೆನೊ
ಮರೆವೆಲಿ ಮಾಡಿದ ಪರಮ ಎನ್ನ ತಪ್ಪು
ಕರುಣಾಕರನೆ ನೀ ಕರುಣದಿ ಕ್ಷಮಿಸಯ್ಯ [೨]
ಶರಣಾಗತ ವತ್ಸಲನೆಂದು ನಿನ್ನ
ಮೊರೆಯ ಹೊಕ್ಕೆನಯ್ಯ ದಯಾಸಿಂಧು
ಮೊರೆ ಕೇಳು ಭಕ್ತರ ಪ್ರಿಯ ಬಂಧು ಎನ್ನ
ದುರಿತದಿ ಕಡೆ ಹಾಯ್-ಸೈ ಇಂದು
ಶಿರಬಾಗಿ ನಿಮಗೆ ಸೆರೆಗೊಡ್ಡಿ ಬೇಡುವೆ
ಕರಪಿಡಿ ಬಿಡಬೇಡ ಸಿರಿವರ ಶ್ರೀರಾಮ [೩]
ellanu ninage kUDitayya hari
pullanABa daya mADayya [pa]
khullanu nAbalu elliyu sallade
tallaNisuta ninna balaveMde dEva dEva [a.pa]
dRuDhaguNa ennoLillayya balu
nuDi hIna nAkaDu pAppayya
naDe nuDi illade kaDunoMdIga nimman-
huDukuta tiruguve jaDajAkShane pore [1]
pararadravya-vapaharisideno nA
parama nIcanAgi carisideno
maraveli AgaNita duritavanunA
jareyade paripari mADideno
mareveli mADida parama enna tappu
karuNAkarane nI karuNadi kShamisayya [2]
SaraNAgata vatsalaneMdu ninna
moreya hokkenayya dayAsiMdhu
more kELu Baktara priya baMdhu enna
duritadi kaDe hAy-sai iMdu
SirabAgi nimage seregoDDi bEDuve
karapiDi biDabEDa sirivara SrIrAma [3]

Leave a Reply
You must be logged in to post a comment.