Achyutananta govinda

Composer : Shri Purandara dasaru

ಅಚ್ಯುತಾನಂತ ಗೋವಿಂದನೆಂಬ ವಸ್ತು
ಎನ್ನ ಕೈ ಸೇರಿತು ||ಪ||

ಎಷ್ಟು ಪುಣ್ಯವ ಮಾಡಿದೆನೋ
ಪರವಸ್ತು ಎನ್ನ ಕೈಯ ಸೇರಿತು ||ಅಪ||

ವೆಚ್ಚ ಮಾಡಲಾಗದು
ಇದು ಮುಚ್ಚಿ ಬಚ್ಚಿಡಲಾಗದು
ಹೊತ್ತಾರೆದ್ದು ಕೀರ್ತನೆ ಮಾಡುವ
ವಸ್ತು ಎನ್ನ ಕೈ ಸೇರಿತು ||೧||

ಕ್ಷೀರ ಸಾಗರದಮೃತವ ತಂದ
ಕಾಮಧೇನು ಎನ್ನ ಕೈಯ ಸೇರಿತು
ನೀಲ ವರ್ಣನಾದ ಪಾಲಿಪ ಹೊಸ ದಿವ್ಯ
ನೀಲ ಮಾಣಿಕ್ಯ ಕೈ ಸೇರಿತು ||೨||

ಸುರ ಮುನಿಗಳು ಕೂಡಲು ಇದು
ಹರಳಿಗೆ ಬೆಲೆಯಾಗದು
ವರದ ಪುರಂದರ ವಿಠ್ಠಲರಾಯನೆಂಬ
ಒಡವೆ ಎನ್ನ ಕೈಯ ಸೇರಿತು ||೩||


acyutAnaMta gOviMdaneMba vastu
enna kai sEritu ||pa||

eShTu puNyava mADidenO
paravastu enna kaiya sEritu ||apa||

vecca mADalAgadu
idu mucci bacciDalAgadu
hottAreddu kIrtane mADuva
vastu enna kai sEritu ||1||

kShIra sAgaradamRutava taMda
kAmadhEnu enna kaiya sEritu
nIla varNanAda pAlipa hosa divya
nIla mANikya kai sEritu ||2||

sura munigaLu kUDalu idu
haraLige beleyAgadu
varada puraMdara viThThalarAyaneMba
oDave enna kaiya sEritu ||3||

Leave a Reply

You might also like

error: Content is protected !!