ಅನ್ನದಾನದ ಸುಳಾದಿ
(ಅತಿಥಿ ಅಭ್ಯಾಗತ ಪೂಜಾ , ಉತ್ತಮರಿಗೆ ಅನ್ನದಾನ ಮಾಡುವುದು)
ರಾಗ: ರೀತಿಗೌಳ
ಧ್ರುವತಾಳ
ಉತ್ತಮರಿಗೆ ಒಂದು ತುತ್ತನ್ನ ದಾನದಿಂದ
ಇತ್ತವನ ಕುಲ ಹತ್ತು ಹತ್ತು ಒಂದು ಸ –
ಪುತ ಗೋತ್ರಾಖಿಳ ಹತ್ತಿ ಹೊಂದಿದವರು
ಸುತ್ತಣ ಪರಿವಾರ ಎತ್ತಲೆತ್ತ ಉಳ್ಳವರು
ಅತ್ಯಂತವಾದ ಪಾಪ ಮೊತ್ತದಾಸಕ್ತರಾಗಿ
ಮೃತ್ಯುಲೋಕದಲ್ಲಿ ಆಪತ್ತು ಬಡುತಲಿರೆ
ಹೆತ್ತ ಜನನಿಯಂತೆ ಎತ್ತಿ ಕೊಂಡೊಯ್ದು ಪುನರಾ –
ವರ್ತಿ ಇಲ್ಲದ ಲೋಕದತ್ತ ಸೇರಿಸುವದು
ಎತ್ತಲು ಸರಿಗಾಣೆ ಕ್ಷುಧಾತುರ್ಯರಾಗಿ ಬಂದ
ಸೋತ್ತಮರಿಗಿತ್ತ ಫಲ ಚಿತ್ತದಲ್ಲಿ ಎಣಿಸೆ
ಹತ್ತಾವತಾರ ಸಿರಿ ವಿಜಯವಿಟ್ಠಲರೇಯನ
ನಿತ್ಯ ಕರುಣ ಪಡೆದು ಸತ್ಯದಲ್ಲಿ ನಡೆದಾ || ೧ ||
ಮಟ್ಟತಾಳ
ಹರಿ ಸರ್ವೋತ್ತಮವೆಂಬೊ ಜ್ಞಾನ
ಮರುತದೇವನ ಮತವೆಂಬೊ ಮತವ
ಹರಿಗುರು ಭಕುತಿ ನಿರಂತರದಲ್ಲಿ
ವಿರಕುತಿಯಾಗಿ ಚರಿಸುವ ಜ್ಞಾನಿಯರ ಸಂಗದಲ್ಲಿ
ಹರಿಕಥಾ ಶ್ರವಣ ನಿರಮಲ ಮನದಿ
ಎರಗುತಲಿಪ್ಪಾಚರಣಿಯ ಮಾನವನು
ಧರೆಯೊಳಗವನೆ ಪರಮ ಉತ್ತಮನೊ
ಅರಿದೀ ಪರಿಯಲ್ಲಿ ವಿಜಯವಿಟ್ಠಲ ಹರಿಯಾ
ಶರಣನಾಗಲಿ ಬೇಕು ತಾರತಮ್ಯವ ತಿಳಿದು || ೨ ||
ತ್ರಿವಿಡಿತಾಳ
ಬಂದ ಅತಿಥಿಯನ್ನು ತನ್ನಯ ಬಾಗಿಲ
ಮುಂದೆ ಕಾಣುತ್ತಲೆ ನಿಂದು ಎದಿರುಗೊಂಡು
ವಂದಿಸಿ ಕರ ಮುಗಿದು ದ್ವಂದ್ವ ಪಾದಕ್ಕೆರಗಿ
ತಂದೆ ಆವಲ್ಲಿಂದ ದಯಮಾಡಿ ಬಂದಿರಿ ಎಂದೂ
ಒಂದೊಂದು ಮಾತನು ನಂದಾದಿಂದಲಿ ಪೇಳಿ
ತಂದು ಪೀಠವನಿತ್ತು ಚಂದದಿಂದಲಿ ನಡು –
ಮಂದಿರದೊಳಗೆ ವಸುಂಧರ ವಿಭುದನ್ನ
ಮಂದಹಾಸದಲಿ ನಯದಿಂದ ಕುಳ್ಳಿರಿಸಿ ಜಲ –
ದಿಂದ ಚರಣ ತೊಳದಾನಂದಮಯದಿಂದ
ಸಂದೇಹ ಬಿಟ್ಟು ಸೊಬಗಿಂದ ಶಿರದ ಮೇಲೆ
ಬಿಂದು ಮಾತುರ ಜಲ ಬಂಧು ಬಳಗ ಕೂಡಿ
ಕುಂದದೆ ಧರಿಸಿ ತಾ ಮಂದಿರದಲ್ಲಿ ಚಲ್ಲಿ
ಒಂದೊಂದು ಪರಿಯಲ್ಲಿ ಪೊಂದಿ ಸುಖದಲ್ಲಿರು
ಮಂದರಧರ ನಮ್ಮ ವಿಜಯವಿಟ್ಠಲ ಹರಿಯ
ಎಂದಿಗೆಂದಿಗೆ ಬಿಡದೆ ವಂದಿಸು ಮನದಲ್ಲಿ || ೩ ||
ಅಟ್ಟತಾಳ
ಜೀವೇಶ ಒಂದೆಂಬೊ ಪೇಳೂವ ಪಾಪಿಗೆ
ಶ್ರೀವೈಷ್ಣವೋತ್ತಮ ಕರದು ತುತ್ತನ್ನವ
ಪಾವನನಾಗುವೆನೆಂದು ಇತ್ತರೆ ಅದು
ಪಾವಕನೊಳು ಹಾಕಿದಂತೆ ಬಯಲಾಗಿ
ಯಾವತ್ತು ಪುಣ್ಯವು ನಾಶವಾಗೋದು
ಆವಾವ ಕಾಲಕ್ಕೆ ಎಳ್ಳಿನಿತು ಕಾಣೆ
ದೇವೇಶ ವಿಜಯವಿಟ್ಠಲ ಜಗದೊಡಿಯ ರಾ –
ಜೀವನೇತ್ರನ ಪದದಾವರೆ ಭಜಿಪಂಗೆ
ಕೋವಿದನಾಗಿ ಇತ್ತವಗೆ ಸರಿಗಾಣೆ || ೪ ||
ಆದಿತಾಳ
ಅನ್ನಯಿತ್ತರದು ಭವನ್ನವಾಗಿ ತೋರೋದು
ಅನ್ನವೀಯದಿರೆ ಕಾನನ್ನಕ್ಕೆ ಸರಿಯೆನ್ನಿ
ಅನ್ನದಿಂದಲಿ ಬಂದ ಘನ್ನ ದುರಿತ ಹರ
ಅನ್ನದಿಂದಲಿ ಸರ್ವ ಪುಣ್ಯ ಫಲಿಸುವದು
ಅನ್ನ ಇತ್ತವನ ಕೀರ್ತಿ ಉನ್ನತವಾಗಿ ತ್ರಿಭು –
ವನ್ನ ದೊಳಗೆ ತುಂಬಿ ಚನ್ನಾಗಿ ಪೊಳೆವದಯ್ಯಾ
ಅನ್ನ ದಾನಕ್ಕಿಂತ ಇನ್ನು ಮಿಗಿಲೆ ಇಲ್ಲಾ
ಹೊನ್ನು ಹಣಾದಿ ಕೊಡಲು ಗಣ್ಯವೆ ಅನ್ನದಾನಕ್ಕೆ
ಅನ್ನಂತಕಾಲ ಮಖವನ್ನೆ ಮಾಡಲು ವಿಪ್ರ –
ಗುಣ್ಣಿಸಿದುದಕ್ಕೆ ಸರಿಯನ್ನಬಹುದೇ ತಿಳಿದು
ಅನ್ನಂತ ಮೂರುತಿ ವಿಜಯವಿಟ್ಠಲರೇಯ
ತನ್ನವನಿವನೆಂದು ಮನ್ನಿಸಿ ಸಲಹುವ || ೫ ||
ಜತೆ
ಅತಿಥಿ ಅಭ್ಯಾಗತಿಯ ಸಂತೋಷ ಬಡಿಸಲು
ಸತತ ಪೊಳಿವ ವಿಜಯವಿಟ್ಠಲ ಮನಸಿನೊಳು ||
annadAnada suLAdi
(atithi aByAgata pUjA , uttamarige annadAna mADuvudu)
rAga: rItigauLa
dhruvatALa
uttamarige oMdu tuttanna dAnadiMda
ittavana kula hattu hattu oMdu sa –
puta gOtrAKiLa hatti hoMdidavaru
suttaNa parivAra ettaletta uLLavaru
atyaMtavAda pApa mottadAsaktarAgi
mRutyulOkadalli Apattu baDutalire
hetta jananiyaMte etti koMDoydu punarA –
varti illada lOkadatta sErisuvadu
ettalu sarigANe kShudhAturyarAgi baMda
sOttamarigitta Pala cittadalli eNise
hattAvatAra siri vijayaviTThalarEyana
nitya karuNa paDedu satyadalli naDedA || 1 ||
maTTatALa
hari sarvOttamaveMbo j~jAna
marutadEvana mataveMbo matava
hariguru Bakuti niraMtaradalli
virakutiyAgi carisuva j~jAniyara saMgadalli
harikathA SravaNa niramala manadi
eragutalippAcaraNiya mAnavanu
dhareyoLagavane parama uttamano
aridI pariyalli vijayaviTThala hariyA
SaraNanAgali bEku tAratamyava tiLidu || 2 ||
triviDitALa
baMda atithiyannu tannaya bAgila
muMde kANuttale niMdu edirugoMDu
vaMdisi kara mugidu dvaMdva pAdakkeragi
taMde AvalliMda dayamADi baMdiri eMdU
oMdoMdu mAtanu naMdAdiMdali pELi
taMdu pIThavanittu caMdadiMdali naDu –
maMdiradoLage vasuMdhara viBudanna
maMdahAsadali nayadiMda kuLLirisi jala –
diMda caraNa toLadAnaMdamayadiMda
saMdEha biTTu sobagiMda Sirada mEle
biMdu mAtura jala baMdhu baLaga kUDi
kuMdade dharisi tA maMdiradalli calli
oMdoMdu pariyalli poMdi suKadalliru
maMdaradhara namma vijayaviTThala hariya
eMdigeMdige biDade vaMdisu manadalli || 3 ||
aTTatALa
jIvESa oMdeMbo pELUva pApige
SrIvaiShNavOttama karadu tuttannava
pAvananAguveneMdu ittare adu
pAvakanoLu hAkidaMte bayalAgi
yAvattu puNyavu nASavAgOdu
AvAva kAlakke eLLinitu kANe
dEvESa vijayaviTThala jagadoDiya rA –
jIvanEtrana padadAvare BajipaMge
kOvidanAgi ittavage sarigANe || 4 ||
AditALa
annayittaradu BavannavAgi tOrOdu
annavIyadire kAnannakke sariyenni
annadiMdali baMda Ganna durita hara
annadiMdali sarva puNya Palisuvadu
anna ittavana kIrti unnatavAgi triBu –
vanna doLage tuMbi cannAgi poLevadayyA
anna dAnakkiMta innu migile illA
honnu haNAdi koDalu gaNyave annadAnakke
annaMtakAla maKavanne mADalu vipra –
guNNisidudakke sariyannabahudE tiLidu
annaMta mUruti vijayaviTThalarEya
tannavanivaneMdu mannisi salahuva || 5 ||
jate
atithi aByAgatiya saMtOSha baDisalu
satata poLiva vijayaviTThala manasinoLu ||

Leave a Reply
You must be logged in to post a comment.