Vamana Suladi – Vijayadasaru

Smt.Nandini Sripad

ಶ್ರೀ ವಿಜಯದಾಸಾರ್ಯ ಕೃತ
ವಾಮನ ಸುಳಾದಿ
ರಾಗ: ನಾಟ

ಧ್ರುವತಾಳ
ವಾಮನ ವಟು ಇಂದ್ರಾನುಜ ಉಪೇಂದ್ರನೆ
ಭೂಮಿ ಸುರಾಗ್ರಣಿ ಬಾಲ ಬ್ರಹ್ಮಚಾರಿ
ಹೇಮ ಯಜ್ಞೋಪವೀತಹೇಮಮೇಖಳ ಪೊಳೆವ
ಹೇಮ ಕೌಪೀನಧರ ಕ್ಷೇತ್ರರಮಣಾ
ವ್ಯೋಮಗಂಗಾ ಜನಕ ಹಸ್ತ ಛತ್ರ ಕಮಂಡಲ
ಸೋಮ ಸನ್ನಿಭ ಪೂರ್ಣ ಗುಣಗಣ ನಿಲಯಾ
ಕಾಮಿತ ಫಲವೀವ ಕರುಣಾನಿಧಿ
ಸಾಮಗಾಯನ ಪ್ರೀತ ಸುಜನರ ಮನೋರಥ
ಸಮಸ್ತ ಲೋಕನಾಥ ಗರುಡು ವರೂಥ
ಭೀಮ ದೈತ್ಯಹರಣ ವಿಜಯವಿಠ್ಠಲ ನಿ –
ಸ್ಸೀಮ ಮಹಿಮ ಸುರ ಸ್ತೋಮವಿನುತಪಾದ || ೧ ||

ಮಟ್ಟತಾಳ
ಬಲಿರಾಯನು ಬಹಳ ಬಲವಂತನಾಗಿ
ಬಲರಾತಿ ಮಿಕ್ಕ ಬಲಿಷ್ಠರಾದವರ
ಕಲಹದೊಳೋಡಿಸಿ ಛಲದಲ್ಲಿ ಅವರ
ಬಲು ಪದವಿಗಳನು ಶೆಳೆದು ತೆಗೆದುಕೊಂಡು
ಬಿಲ್ಲುಗಾರರಿಗೆ ವೆಗ್ಗಳನಾಗಿ ಚರಿಸಿ
ಇಳಿಯೊಳಗಾರಿಗೆ ಅಳುಕದಲಿರುತಿರಲು
ಜಲಜ ಮಗನ ಜನಕ ವಿಜಯವಿಠ್ಠಲ ತ –
ನ್ನೊಳಗೆ ನಿರಂತರ ನಿಲಿದೊಲಿದು ನೆನೆವಾ || ೨ ||

ರೂಪಕತಾಳ
ಮನದೊಳು ಬಲಿರಾಯಾ ಮನಸಿಜನಯ್ಯನ
ನೆನೆಸುತ್ತ ಸಕಲ ಲೋಕವನೆ ಗೆದ್ದು
ಎನಗಾರು ಸರಿಯೆಂದು ಬಲು ಗರ್ವದಲಿ ಇರೆ
ಅನಿಮಿಷಪತಿ ಪಲಾಯನವಾಗಿ ಪೋಗಲು
ದನುಜ ಬಲ್ಲಿದನೆಂದು ದಕ್ಷನ ತನುಜೆ
ಮನೋವ್ಯಥೆಯಿಂದ ಕ್ಲೇಶ ಬಡುತ್ತ
ಶಣಿಸಿ ದೈತ್ಯನ ಕೂಡ ಗೆಲುವ ಮಗನ ಪಡಿವೆಂ –
ದೆನುತ ರೋಷದಲಿಪತಿಆಜ್ಞಾದಲ್ಲಿ
ವನಜನಾಭನ ಧ್ಯಾನವೇ ಮಾಡಿದಳು ತನ್ನ
ಮನದ ಬಯಕೆಯನು ಸಲ್ಲಿಸು ಎನುತಲಿ
ಫಣಿಶಾಯಿ ವಿಜಯವಿಠಲ ವಾಮನ ದೇವ
ಮುನಿ ಕಶ್ಯಪ ಅದಿತಿದೇವಿಗೆ ಒಲಿದಾ || ೩ ||

ಝಂಪೆತಾಳ
ಶಕ್ರನ ಸೌಭಾಗ್ಯ ಇಂದ್ರಸೇನನು ಬಿಡದೆ
ಆಕ್ರಮಿಸಿ ತ್ರಿಲೋಕ ಮಧ್ಯದಲಿ ಬಲು ಪ –
ರಾಕ್ರಮನಾಗಿ ತಾನಲ್ಲದಲೆ ಮತ್ತೋರ್ವ
ಚಕ್ರವರ್ತಿಯೇ ಇಲ್ಲವೆಂದು ಹಿಗ್ಗೀ
ಶುಕ್ರನ್ನ ಶಿಷ್ಯನಿರೆ ಯಾಗದಲ್ಲಿ ಉ –
ರುಕ್ರಮನೇ ಉಪೇಂದ್ರನಾಗಿ ಬಂದು
ತಾ ಕ್ರೀಡೆಯಾಡಿದಂತೆ ಬಾಲಕನಾಗಿ
ಆಕ್ರಮ ಮಾಡಿ ಬಲಿಯ ಮೆಚ್ಚಿಸೀ
ಸಕ್ರಿಯ ಸಕಲೇಶ ವಿಜಯವಿಠ್ಠಲನು ತ್ರಿ –
ವಿಕ್ರಮಾವತಾರ ಧರಿಸಿದನು ಸುರರೊಲಿಯೇ || ೪ ||

ತ್ರಿವಿಡಿತಾಳ
ದಾನವನಲ್ಲಿಗೆ ಮುದ್ದು ಮೋಹನ ಪೋಗಿ
ದಾನವ ಬೇಡಿದ ಮೂರು ಪಾದಾ
ಕ್ಷೋಣಿಯ ಕೊಡು ಎಂದು ಕಪಟ ವೇಷದಲ್ಲಿ
ಏನೆಂಬೆ ವಟುವಿನ ಮಹಾಮಹಿಮೆ
ಮಾನವನಂತೆ ಲೀಲೆ ತೋರಿ ಕರ ವಡ್ಡಿ –
ದಾನೊ ಪಿತಾಮಹನಯ್ಯಾ ನಮ್ಮಯ್ಯ
ಕಾಣುವರಾರು ಈತನ ಮಹತ್ತಣು ರೂಪಾ
ಏಣಿಸಲಳವೇ ಲಕುಮಿಗಾದರೂ
ಬಾಣಸುರನ ಜನಕ ಮಾತು ಕೇಳುತ ವಿಪ್ರ
ಏನು ಬೇಡಿದನೆಂದು ನಸುನಗುತ
ತಾ ನೀರಿನಲಿ ತನ್ನ ಸತಿಯ ಸಹಿತನಾಗಿ
ಕ್ಷೋಣಿಯ ತ್ರಿಪದಾ ಧಾರಿಯೆರಿಯೇ
ಧೇನು ಭಕ್ತರಿಗೆಲ್ಲ ವಿಜಯವಿಠ್ಠಲ ತಾನೆ
ಆನಂದದಲಿ ಕೈಕೊಂಡಾ ಭಕ್ತಿಗೆ ಮೆಚ್ಚಿ || ೫ ||

ಅಟ್ಟತಾಳ
ಒಂದು ಚರಣ ಬೊಮ್ಮಾಂಡ ಖರ್ಪರದಲ್ಲಿ
ಒಂದು ಚರಣ ಪಾತಾಳ ಲೋಕದಲ್ಲಿ
ಸಂದೇಹವಿಲ್ಲದೆ ವ್ಯಾಪಿಸಿದವು ಮ –
ತ್ತೊಂದು ಪಾದಕೆ ಭೂಮಿ ಸಾಲದಾಯಿತೆಂದು
ಇಂದ್ರಸೇನಗೆ ವಾಮನದೇವ ನುಡಿಯಿಂದ
ಬಂಧಿಸಿ ಸಮಯಬದ್ಧ ಮಾಡಲು ಬಲಿ
ಇಂದಿರಾಪತಿ ಈತನೆಂದು ತಿಳಿದು ವೇಗ
ವಂದಿಸಿ ತನ್ನಯ ಶಿರವನು ನೀಡಲು
ಅಂದು ಗೋವಿಂದನು ಅರಸನ ತಲೆಮೆಟ್ಟಿ
ಒಂದು ಚರಣದಲ್ಲಿ ಪಾತಾಳಕಟ್ಟಿದ
ಮುಂದೆ ನಖದಿಂದ ಬೊಮ್ಮಾಂಡ ಭೇದಿಸಿ
ಮಂದಾಕಿನಿ ಪೆತ್ತಾ ನಿರುತ ನಿರ್ಭೀತಾ
ಇಂದ್ರವಂದಿತಸಿರಿ ವಿಜಯವಿಠ್ಠಲ ಕೃಪಾ –
ಸಿಂಧು ಸಿಂಧುರ ಪಾಲಾ ಸಿಂಧುತನುಜೆಪತಿ|| ೬ ||

ಆದಿತಾಳ
ಕಾಯವನಿತ್ತವಗೆ ನಾರಾಯಣನು ಒಲಿದು ಕಲ್ಪ
ಆಯುವನಿತ್ತು ಸರ್ವದ ಐಶ್ವರ್ಯದಲ್ಲಿ ಇಟ್ಟು
ಕಾಯಿದಾ ತಾನವನ ಮನಿಯ
ಸ್ಥಾಯವಾಗಿ ಬಾಗಿಲೊಳು ಈಯಬಲ್ಲ ದೇವ ತನ್ನ
ಮಾಯಾದಿಂದ ಜನರ ಮೋಹಿಸಿ ಶ್ರೀಯರಸ
ವಿಜಯವಿಠ್ಠಲ ನಾಯಕ ಶಿರೋಮಣಿ
ಶ್ರೇಯಸ್ಸುನೀವ ತನ್ನ ಗಾಯನ ಮಾಡುವರಿಗೆ || ೭ ||

ಜತೆ
ಇಂದ್ರಂಗೆ ಸುರ ಪದವಿ ಕೊಡಿಸಿ ಬಲಿಗೆ ಒಲಿದಾ
ಕಂದರ್ಪಪಿತ ನಮ್ಮ ವಿಜಯವಿಠ್ಠಲ ವಟು ||


SrI vijayadAsArya kRuta
vAmana suLAdi
rAga: nATa

dhruvatALa
vAmana vaTu iMdrAnuja upEMdrane
BUmi surAgraNi bAla brahmacAri
hEma yaj~jOpavIta hEma mEKaLa poLeva
hEma kaupInadhara kShEtraramaNA
vyOmagaMgA janaka hasta Catra kamaMDala
sOma sanniBa pUrNa guNagaNa nilayA
kAmita PalavIva karuNAnidhi
sAmagAyana prIta sujanara manOratha
samasta lOkanAtha garuDu varUtha
BIma daityaharaNa vijayaviThThala ni –
ssIma mahima sura stOmavinutapAda || 1 ||

maTTatALa
balirAyanu bahaLa balavaMtanAgi
balarAti mikka baliShTharAdavara
kalahadoLODisi Caladalli avara
balu padavigaLanu SeLedu tegedukoMDu
billugArarige veggaLanAgi carisi
iLiyoLagArige aLukadalirutiralu
jalaja magana janaka vijayaviThThala ta –
nnoLage niraMtara nilidolidu nenevA || 2 ||

rUpakatALa
manadoLu balirAyA manasijanayyana
nenesutta sakala lOkavane geddu
enagAru sariyeMdu balu garvadali ire
animiShapati palAyanavAgi pOgalu
danuja ballidaneMdu dakShana tanuje
manOvyatheyiMda klESa baDutta
SaNisi daityana kUDa geluva magana paDiveM –
denuta rOShadali pati Aj~jAdalli
vanajanABana dhyAnavE mADidaLu tanna
manada bayakeyanu sallisu enutali
PaNiSAyi vijayaviThala vAmana dEva
muni kaSyapa aditidEvige olidA || 3 ||

JaMpetALa
Sakrana sauBAgya iMdrasEnanu biDade
Akramisi trilOka madhyadali balu pa –
rAkramanAgi tAnalladale mattOrva
cakravartiyE illaveMdu higgI
Sukranna SiShyanire yAgadalli u –
rukramanE upEMdranAgi baMdu
tA krIDeyADidaMte bAlakanAgi
Akrama mADi baliya meccisI
sakriya sakalESa vijayaviThThalanu tri –
vikramAvatAra dharisidanu suraroliyE || 4 ||

triviDitALa
dAnavanallige muddu mOhana pOgi
dAnava bEDida mUru pAdA
kShONiya koDu eMdu kapaTa vEShadalli
EneMbe vaTuvina mahAmahime
mAnavanaMte lIle tOri kara vaDDi –
dAno pitAmahanayyA nammayya
kANuvarAru Itana mahattaNu rUpA
ENisalaLavE lakumigAdarU
bANasurana janaka mAtu kELuta vipra
Enu bEDidaneMdu nasunaguta
tA nIrinali tanna satiya sahitanAgi
kShONiya tripadA dhAriyeriyE
dhEnu Baktarigella vijayaviThThala tAne
AnaMdadali kaikoMDA Baktige mecci || 5 ||

aTTatALa
oMdu caraNa bommAMDa Karparadalli
oMdu caraNa pAtALa lOkadalli
saMdEhavillade vyApisidavu ma –
ttoMdu pAdake BUmi sAladAyiteMdu
iMdrasEnage vAmanadEva nuDiyiMda
baMdhisi samayabaddha mADalu bali
iMdirApati ItaneMdu tiLidu vEga
vaMdisi tannaya Siravanu nIDalu
aMdu gOviMdanu arasana talemeTTi
oMdu caraNadalli pAtALakaTTida
muMde naKadiMda bommAMDa BEdisi
maMdAkini pettA niruta nirBItA
iMdravaMdita siri vijayaviThThala kRupA –
siMdhu siMdhura pAlA siMdhutanuje pati || 6 ||

AditALa
kAyavanittavage nArAyaNanu olidu kalpa
Ayuvanittu sarvada aiSvaryadalli iTTu
kAyidA tAnavana maniya
sthAyavAgi bAgiloLu Iyaballa dEva tanna
mAyAdiMda janara mOhisi SrIyarasa
vijayaviThThala nAyaka SirOmaNi
SrEyassunIva tanna gAyana mADuvarige || 7 ||

jate
iMdraMge sura padavi koDisi balige olidA
kaMdarpapita namma vijayaviThThala vaTu ||

Leave a Reply

You might also like

error: Content is protected !!