Tatva suvvali – Venkatesha Stotra

Composer : Shri Jagannatha dasaru

ಶ್ರೀ ವೇಂಕಟೇಶ ಸ್ತೋತ್ರ

ಶರಣಾಗತರ ಕಲ್ಪತರುವೆ ವೇಂಕಟಧರಾ –
ಧರನಾಥ ನಿನ್ನ ಚರಣಾಬ್ಜ | ಚರಣಾಬ್ಜಯುಗಳ ಸಂ –
ದರುಶನವನೀಯೋ ಎಂದೆಂದೂ || ೧ || || ೧೯೦ ||

ವೇಂಕಟಾಚಲನಿಲಯ ಪಂಕಜೋದ್ಭವನಯ್ಯ
ಶಂಕರಪ್ರಿಯ ಕವಿಗೇಯ | ಕವಿಗೇಯ ನಿನ್ನ ಪದ –
ಕಿಂಕರನೆನಿಸೋ ಶುಭಕಾಯ || ೨ || || ೧೯೧ ||

ಸ್ವಾಮಿತೀರ್ಥನಿವಾಸ ಕಾಮಿತಪ್ರದ ಕುಲ –
ಸ್ವಾಮಿ ಸರ್ವಜ್ಞ ಸರ್ವೇಶ | ಸರ್ವೇಶ ಸುರಸಾರ್ವ –
ಭೌಮ ನೀನೆನಗೆ ದಯವಾಗೋ || ೩ || || ೧೯೨ ||

ದೇವಶರ್ಮನ ತುತಿಗೆ ನೀನೊಲಿದು ಪಾಲಿಸಿದೆ
ದೇವಕೀಕಂದ ದಯದಿಂದ | ದಯದಿಂದ ಒಲಿದೆನ್ನ
ತಾವಕ-ರೊಳಗಿಟ್ಟು ಸಲಹಯ್ಯ || ೪ || ||೧೯೩ ||

ಸತ್ಯಸಂಕಲ್ಪ ಜಗದತ್ಯಂತಭಿನ್ನ ಸ –
ರ್ವೊತ್ತಮ ಪುರಾಣಪುರುಶೆಷ | ಪುರುಶೆಷ ಸತತ ತ್ವ –
ದ್ಭೃತ್ಯನ್ನ ಕಾಯೊ ಕರುಣಾಳೊ || ೫ || || ೧೯೪ ||

ಕೃತಿಪತಿಯೇ ನಿನ್ನ ಸಂಸ್ಮೃತಿಯೋಂದಿರಲಿ ಜನ್ಮ-
ಮೃತಿನರಕಭಯವು ಬರಲಂಜೇ | ಬರಲಂಜೇ ಏನಗೇ ಸಂ –
ತತ ನಿನ್ನ ಸ್ಮರಣೇ ಕರುಣಿಸೊ || ೬ || || ೧೯೫ ||

ಶುಚಿಸದ್ಮನೇ ಮನೊವಚನಾತ್ಮಕೃತಕರ್ಮ-
ನಿಚಯ ನಿನಗೀವೇ ಸುಚರಿತ್ರ | ಸುಚರಿತ್ರ ಸುಗುಣಗಳ –
ರಚನೇಸುಖವೀಯೊ ರುಚಿರಾಂಗ || ೭ || || ೧೯೬ ||

ಹೃದಯದಲಿ ತವ ರೂಪ ವದನದಲಿ ತವ ನಾಮ
ಉದರದಲಿ ನೈವೆದ್ಯ ಶಿರದಲ್ಲಿ | ಶಿರದಲ್ಲಿ ನಿರ್ಮಾಲ್ಯ
ಪದಜಲಗಳಿರಲು ಭಯವುಂಟೆ || ೮ || || ೧೯೭ ||

ಸತತ ಸ್ಮರಿಸುತ ನಿನ್ನ ನುತಿಸಿ ಬೇಡಿಕೊಳುವೆ
ಹಿತದಿಂದ ನಿನ್ನ ವಿಜ್ಞಾನ | ವಿಜ್ಞಾನ ನಿಜಭಾಗ –
ವತರ ಸಂಗವನೆ ಕರುಣಿಸೋ || ೯ || || ೧೯೮ ||

ಝುಷಕೇತುಜನಕ ದುರ್ವಿಷಯಕೊಳಗಾಗಿ ಸಾ –
ಹಸಪಡುವ ಚಿತ್ತ ಪ್ರತಿದಿನ | ಪ್ರತಿದಿನಗಳಲ್ಲಿ ನಿ –
ನ್ನೊಶ ಮಾಡಿಕೊಳ್ಳೋ ವನಜಾಕ್ಷ|| ೧೦ || || ೧೯೯ ||

ಮಲಮೂತ್ರರಕ್ತಕಶ್ಮಲದೇಹಪೋಷಣೆಗೆ
ಬಳಲಿದೆ ನಾ ನಿನ್ನ ಭಜಿಸದೇ | ಭಜಿಸದೆ ಪರರ ಬಾ –
ಗಿಲ ಕಾಯ್ದು ಕಳೆದೆ ದಿವಸವ || ೧೧ || || ೨೦೦ ||

ಶ್ವಾನಸೂಕರನೀಚಯೋನಿಯೊಳು ಬರಲಂಜಿ
ಶ್ರೀನಾಥ ನಿನ್ನ ಸ್ಮೃತಿಸ್ವರ್ಗ | ಸ್ಮೃತಿಸ್ವರ್ಗಸುಖ ನಿನ –
ಗಾನು ಬೇಡುವೆನು ಕರುಣಿಸೋ || ೧೨ || || ೨೦೧ ||

ನಿನ್ನ ವಿಸ್ಮೃತಿ ಜನ್ಮಜನ್ಮಕ್ಕೆ ಕೊಡದಿರು
ಎನ್ನ ಕುಲದೈವ ಎಂದೆಂದು | ಎಂದೆಂದು ನಿನಗಾನು
ಬಿನ್ನೈಪೆ ಬಿಡದೆ ಇನಿತೆಂದು || ೧೩ || || ೨೦೨ ||

ಪ್ರಕೃತಿಗುಣಗಳ ಕಾರ್ಯ ಸುಖದುಃಖಮೂಲ ಜಡ –
ಪ್ರಕೃತಿಗಭಿಮಾನೀ ಮಹಲಕ್ಷ್ಮೀ | ಮಹಲಕ್ಷ್ಮಿಪತಿ ನಿನ್ನ
ಭಕುತ ನಾನಯ್ಯ ಎಂದೆಂದು || ೧೪ || || ೨೦೩ ||

ಪುಣ್ಯಪಾಪಾದಿಗಳು ನಿನ್ನಧೀನದೊಳಿರಲು
ಎನ್ನದೆಂದರುಹಿ ದಣಿಸು-ವಿ | ದಣಿಸುವುದು ಧರ್ಮವೇ
ನಿನ್ನರಿವ ಜ್ಞಾನ ಕರುಣಿ-ಸೊ || ೧೫ || || ೨೦೪ ||

ಇನಿತಿದ್ದ ಬಳಿಕ ಯೋಚನೆ ಯಾಕೆ ಗರುಡವಾ –
ಹನನೆ ಮಹಲಕ್ಷ್ಮೀನರಸಿಂಹ | ನರಸಿಂಹ ಬಿನ್ನೈಪೆ
ಘನತೆ ನಿನಗಲ್ಲ ಕರುಣಾಳು || ೧೬ || || ೨೦೫ ||

ಸುಲಭರಿನ್ನುಂಟೆ ನಿನ್ನುಳಿದು ಲೋಕತ್ರಯದಿ
ಬಲವಂತರುಂಟೆ ಸುರರೊಳು | ಸುರರೊಳು ನೀನು ಬೆಂ –
ಬಲವಾಗಿ ಇರಲು ಭಯವುಂಟೆ || ೧೭ || || ೨೦೬ ||

ಹಯವದನ ಸೃಷ್ಟಿಸ್ಥಿತಿಲಯಕಾರಣನು ನೀನೆ
ದಯವಾಗಲೆಮಗೆ ದುರಿತೌಘ | ದುರಿತೌಘಗಳು ಬಟ್ಟ –
ಬಯಲಾಗುತಿಹವೋ ಸ್ಮೃತಿಯಿಂದ || ೧೮ || || ೨೦೭ ||

ಕಲುಷವರ್ಜಿತನೆ ಮಂಗಳಚರಿತ ಭಕ್ತವ –
ತ್ಸಲ ಭಾಗ್ಯಪುರುಷ ಬಹುರೂಪ | ಬಹುರೂಪ ಎನಗಚಂ –
ಚಲ ಭಕುತಿ ನೀನೇ ಕರುಣಿ-ಸೋ || ೧೯ || || ೨೦೮ ||

ಫಾಲಾಕ್ಷಪ್ರಿಯ ನಿನ್ನ ಲೀಲೆಗಳ ಮರೆಯದಲೆ
ಕಾಲಕಾಲದಲಿ ಸ್ಮರಿಸುವ | ಸ್ಮರಿಸಿ ಹಿಗ್ಗುವ ಭಾಗ್ಯ
ಪಾಲಿಸೋ ಎನಗೆ ಪರಮಾತ್ಮ || ೨೦ || || ೨೦೯ ||

ಕನಸಿಲಾದರು ವಿಷಯನೆನಹನೀಯದೆ ಎನ್ನ
ಮನದಲ್ಲಿ ನೀನೇ ನೆಲೆಗೊಳ್ಳೋ | ನೆಲೆಗೊಳ್ಳೊ ಲೋಕಪಾ –
ವನಚರಿತ ಪಾರ್ಥಸಖ ಶ್ರೀಕೃಷ್ಣ || ೨೧ || || ೨೧೦ ||

ಚತುರವಿಧಪುರುಷಾರ್ಥ ಚತುರಾತ್ಮ ನೀನಿರಲು
ಇತರ ಪುರುಷಾರ್ಥ ನಾನೊಲ್ಲೆ | ನಾನೊಲ್ಲೆ ತ್ವತ್ಪಾದ –
ರತಿಭಾಗ್ಯ ನೀನೆ ಕರುಣಿಸೋ || ೨೨ || || ೨೧೧ ||

ಜಯ ಮತ್ಸ್ಯ ಕೂರ್ಮ ಜಯ ಜಯ ವರಹ ನರಸಿಂಹ
ಜಯತು ವಾಮನದೇವ ಭೃಗುರಾಮ | ಭೃಗುರಾಮ ರಘುರಾಮ
ಜಯ ಕೃಷ್ಣ ಬೌದ್ಧ ಕಲಿಹರ್ತಾ || ೨೩ || || ೨೧೨ ||

ಜಯ ವಿಶ್ವ ತೈಜಸನೆ ಜಯ ಪ್ರಾಜ್ಞ ತುರ್ಯಾತ್ಮ
ಜಯ ಅಂತರಾತ್ಮ ಪರಮಾತ್ಮ | ಪರಮಾತ್ಮ ಜ್ಞಾನಾತ್ಮ
ಜಯತು ಅನಿರುದ್ಧ ಪ್ರದ್ಯುಮ್ನ || ೨೪ || || ೨೧೩ ||

ಜಯತು ಸಂಕರ್ಷಣನೆ ಜಯ ವಾಸುದೇವನೆ
ಜಯಜಯತು ಶ್ರೀಲಕ್ಷ್ಮೀನಾರಾಯ್ಣ | ನಾರಾಯಣಾನಂತ
ಜಯತು ಶ್ರೀಗೋವಿಂದ ಅಚ್ಯುತ || ೨೫ || || ೨೧೪ ||

ಜಯ ಪೂರ್ಣಜ್ಞಾನಾತ್ಮ ಜಯ ಪೂರ್ಣ ಐಶ್ವರ್ಯ
ಜಯ ಪ್ರಭಾಪೂರ್ಣ ತೇಜಾತ್ಮ | ತೇಜಾತ್ಮ ನಂದಾತ್ಮ
ಜಯಜಯ ಶಕ್ತ್ಯಾತ್ಮ ಕೃದ್ಧೋಲ್ಕ || ೨೬ || || ೨೧೫ ||

ಜಯಜಯತು ಮಹೋಲ್ಕ ಜಯಜಯತು ವೀರೋಲ್ಕ
ಜಯಜಯತು ದ್ಯುಲ್ಕ ಸಹಸ್ರೋಲ್ಕ | ಸಹಸ್ರೋಲ್ಕ ಜಯಜಯ
ಜಯ ಜಗನ್ನಾಥವಿಟ್ಠಲಾರ್ಯ || ೨೭ || || ೨೧೬ ||


SrI vEMkaTESa stOtra

SaraNAgatara kalpataruve vEMkaTadharA –
dharanAtha ninna caraNAbja | caraNAbjayugaLa saM –
daruSanavanIyO eMdeMdU || 1 || || 190 ||

vEMkaTAcalanilaya paMkajOdBavanayya
SaMkarapriya kavigEya | kavigEya ninna pada –
kiMkaranenisO SuBakAya || 2 || || 191 ||

svAmitIrthanivAsa kAmitaprada kula –
svAmi sarvaj~ja sarvESa | sarvESa surasArva –
Bauma nInenage dayavAgO || 3 || || 192 ||

dEvaSarmana tutige nInolidu pAliside
dEvakIkaMda dayadiMda | dayadiMda olidenna
tAvaka-roLagiTTu salahayya || 4 || ||193 ||

satyasaMkalpa jagadatyaMtaBinna sa –
rvottama purANapuruSeSha | puruSeSha satata tva –
dBRutyanna kAyo karuNALo || 5 || || 194 ||

kRutipatiyE ninna saMsmRutiyOMdirali janma-
mRutinarakaBayavu baralaMjE | baralaMjE EnagE saM –
tata ninna smaraNE karuNiso || 6 || || 195 ||

SucisadmanE manovacanAtmakRutakarma-
nicaya ninagIvE sucaritra | sucaritra suguNagaLa –
racanEsuKavIyo rucirAMga || 7 || || 196 ||

hRudayadali tava rUpa vadanadali tava nAma
udaradali naivedya Siradalli | Siradalli nirmAlya
padajalagaLiralu BayavuMTe || 8 || || 197 ||

satata smarisuta ninna nutisi bEDikoLuve
hitadiMda ninna vij~jAna | vij~jAna nijaBAga –
vatara saMgavane karuNisO || 9 || || 198 ||

JuShakEtujanaka durviShayakoLagAgi sA –
hasapaDuva citta pratidina | pratidinagaLalli ni –
nnoSa mADikoLLO vanajAkSha|| 10 || || 199 ||

malamUtraraktakaSmaladEhapOShaNege
baLalide nA ninna BajisadE | Bajisade parara bA –
gila kAydu kaLede divasava || 11 || || 200 ||

SvAnasUkaranIcayOniyoLu baralaMji
SrInAtha ninna smRutisvarga | smRutisvargasuKa nina –
gAnu bEDuvenu karuNisO || 12 || || 201 ||

ninna vismRuti janmajanmakke koDadiru
enna kuladaiva eMdeMdu | eMdeMdu ninagAnu
binnaipe biDade initeMdu || 13 || || 202 ||

prakRutiguNagaLa kArya suKaduHKamUla jaDa –
prakRutigaBimAnI mahalakShmI | mahalakShmipati ninna
Bakuta nAnayya eMdeMdu || 14 || || 203 ||

puNyapApAdigaLu ninnadhInadoLiralu
ennadeMdaruhi daNisu-vi | daNisuvudu dharmavE
ninnariva j~jAna karuNi-so || 15 || || 204 ||

initidda baLika yOcane yAke garuDavA –
hanane mahalakShmInarasiMha | narasiMha binnaipe
Ganate ninagalla karuNALu || 16 || || 205 ||

sulaBarinnuMTe ninnuLidu lOkatrayadi
balavaMtaruMTe suraroLu | suraroLu nInu beM –
balavAgi iralu BayavuMTe || 17 || || 206 ||

hayavadana sRuShTisthitilayakAraNanu nIne
dayavAgalemage duritauGa | duritauGagaLu baTTa –
bayalAgutihavO smRutiyiMda || 18 || || 207 ||

kaluShavarjitane maMgaLacarita Baktava –
tsala BAgyapuruSha bahurUpa | bahurUpa enagacaM –
cala Bakuti nInE karuNi-sO || 19 || || 208 ||

PAlAkShapriya ninna lIlegaLa mareyadale
kAlakAladali smarisuva | smarisi higguva BAgya
pAlisO enage paramAtma || 20 || || 209 ||

kanasilAdaru viShayanenahanIyade enna
manadalli nInE nelegoLLO | nelegoLLo lOkapA –
vanacarita pArthasaKa SrIkRuShNa || 21 || || 210 ||

caturavidhapuruShArtha caturAtma nIniralu
itara puruShArtha nAnolle | nAnolle tvatpAda –
ratiBAgya nIne karuNisO || 22 || || 211 ||

jaya matsya kUrma jaya jaya varaha narasiMha
jayatu vAmanadEva BRugurAma | BRugurAma raGurAma
jaya kRuShNa bauddha kalihartA || 23 || || 212 ||

jaya viSva taijasane jaya prAj~ja turyAtma
jaya aMtarAtma paramAtma | paramAtma j~jAnAtma
jayatu aniruddha pradyumna || 24 || || 213 ||

jayatu saMkarShaNane jaya vAsudEvane
jayajayatu SrIlakShmInArAyNa | nArAyaNAnaMta
jayatu SrIgOviMda acyuta || 25 || || 214 ||

jaya pUrNaj~jAnAtma jaya pUrNa aiSvarya
jaya praBApUrNa tEjAtma | tEjAtma naMdAtma
jayajaya SaktyAtma kRuddhOlka || 26 || || 215 ||

jayajayatu mahOlka jayajayatu vIrOlka
jayajayatu dyulka sahasrOlka | sahasrOlka jayajaya
jaya jagannAthaviTThalArya || 27 || || 216 ||

Leave a Reply

You might also like

error: Content is protected !!