Composer : Shri Purandara dasaru
ಅಮ್ಮ ನಿಮ್ಮ ಮನೆಗಳಲ್ಲಿ
ನಮ್ಮ ರಂಗನ ಕಂಡಿರೇ ||ಪ||
ಕಾಶಿ ಪೀತಾಂಬರ ಕೈಯಲ್ಲಿ ಕೊಳಲು ಪೂಸಿದ
ಶ್ರೀ ಗಂಧ ಮೈಯೊಳಗಮ್ಮ
ಲೇಸಾಗಿ ತುಳಸಿಯ ಮಾಲೆಯ ಹಾಕಿದ
ವಾಸುದೇವನು ಬಂದ ಕಂಡಿರೇ ||೧||
ಕರದಲ್ಲಿ ಕಂಕಣ ಬೆರಳಲ್ಲಿ
ಉಂಗುರ ಕೊರಳಲ್ಲಿ ಹಾಕಿದ ಹುಲಿಯುಗುರಮ್ಮ
ಅರಳೆಲೆ ಕನಕ ಕುಂಡಲ ಕಾಲಲನುಗೆ
ಉರಗ ಶಯನ ಬಂದ ಕಂಡಿರೇ ||೨||
ಕುಂಕುಮ ಕಸ್ತೂರಿ ಕರಿ ನಾಮ ತಿದ್ದಿ
ಶಂಖ ಚಕ್ರಗಳ ಧರಿಸಿಹನಮ್ಮ
ಬಿಂಕದಿಂದಲಿ ಕೊಳಲೂದುತ್ತ ಪಾಡುತ್ತ
ಪಂಕಜಾಕ್ಷನು ಬಂದ ಕಂಡಿರೇ ||೩||
ಮಾವನ ಮಡುಹಿದ ಶಕಟನ
ಕೆಡಹಿದ ಗೋವರ್ಧನ ಗಿರಿ ಎತ್ತಿದನಮ್ಮ
ಆವ ತಾಯಿಗೆ ಈರೇಳು ಜಗ ತೋರಿದ
ಕಾವನಯ್ಯ ಬಂದ ಕಂಡಿರೇ ||೪||
ಕಾಲಲಿ ಕಿರು ಗೆಜ್ಜೆ ನೀಲದ ಬಾವುಲಿ ನೀಲ
ವರ್ಣನು ನಾಟ್ಯವಾಡುತಲಿ
ಮೇಲಾಗಿ ಬಾಯಲ್ಲಿ ಜಗವನ್ನು ತೋರಿದ
ಮೂಲೋಕದೊಡೆಯನ ಕಂಡಿರೇ ||೫||
ಹದಿನಾರು ಸಾವಿರ ಗೋಪಿಯರ ಕೂಡಿ
ಚತುರಂಗ ಪಗಡೆಯ-ನಾಡುವನಮ್ಮ
ಮದನ ಮೋಹನ ರೂಪ ಎದೆಯಲ್ಲಿ ಕೌಸ್ತುಭ
ಮಧುಸೂದನ ಬಂದ ಕಂಡಿರೇ ||೬||
ತೆತ್ತೀಸ ಕೋಟಿ ದೇವರ್ಗಳ ಒಡಗೂಡಿ
ಹತ್ತಾವತಾರವ ಎತ್ತಿದವನೆ
ಕೃಷ್ಣಾಮೂರುತಿ ನಮ್ಮ ಪುರಂದರ
ವಿಠಲನ ನಿತ್ಯೋತ್ಸವನ ಕಂಡಿರೇ ||೭||
amma nimma manegaLalli
namma raMgana kaMDirE ||pa||
kASi pItAMbara kaiyalli koLalu pUsida
SrI gaMdha maiyoLagamma
lEsAgi tuLasiya mAleya hAkida
vAsudEvanu baMda kaMDirE ||1||
karadalli kaMkaNa beraLalli
uMgura koraLalli hAkida huliyuguramma
araLele kanaka kuMDala kAlalanuge
uraga Sayana baMda kaMDirE ||2||
kuMkuma kastUri kari nAma tiddi
SaMKa cakragaLa dharisihanamma
biMkadiMdali koLalUdutta pADutta
paMkajAkShanu baMda kaMDirE ||3||
mAvana maDuhida SakaTana
keDahida gOvardhana giri ettidanamma
Ava tAyige IrELu jaga tOrida
kAvanayya baMda kaMDirE ||4||
kAlali kiru gejje nIlada bAvuli nIla
varNanu nATyavADutali
mElAgi bAyalli jagavannu tOrida
mUlOkadoDeyana kaMDirE ||5||
hadinAru sAvira gOpiyara kUDi
caturaMga pagaDeya-nADuvanamma
madana mOhana rUpa edeyalli kaustuBa
madhusUdana baMda kaMDirE ||6||
tettIsa kOTi dEvargaLa oDagUDi
hattAvatArava ettidavane
kRuShNAmUruti namma puraMdara
viThalana nityOtsavana kaMDirE ||7||

Leave a Reply
You must be logged in to post a comment.