Composer : Shri Purandara dasaru
ಹೇಳಿದರೆ ನಮ್ಮ ಮೇಲೆ ಯಾಕಮ್ಮ ಸಿಟ್ಟು, ಇಂಥ
ಗಾಳಿಗಾರ ಮಗನ ಪಡೆದ ಮೇಲೆ ನೀವಿಷ್ಟು ||ಪ||
ಸಣ್ಣ ರುಮಾಲು ಕಟ್ಟಿ ಚುಂಗ ಬಿಟ್ಟು , ಪಣೆಗೆ
ಬಣ್ಣಿಸಿ ಕಸ್ತೂರಿ ತಿಲಕನಿಟ್ಟು
ಚಿಣ್ಣಿಕೋಲು ಚೆಂಡು ಬುಗುರಿ ಕೈಯಲಿಟ್ಟು, ಪೊಸ
ಬೆಣ್ಣೆಯ ಮೆಲ್ಲು ಹೋಗೆಂದು ಕಳುಹಿಬಿಟ್ಟು |೧|
ಕರೆದು ಕೈಯಲ್ಲಿ ಚಿಟ್ಟೆ ಬೆಲ್ಲ ಕೊಟ್ಟು, ಚಿಕ್ಕ
ಹರಳು ಕಲ್ಲುಗಳನ್ನೆ ಆರಿಸಿ ಕೊಟ್ಟು
ವಾರಿಗೆಯ ಪುಂಡರನ್ನು ಮಾಡಿಕೊಟ್ಟು, ಗೋಪಿ
ಊರನೆಲ್ಲ ಸುಲಿಯೆಂದು ಕಳುಹಿಕೊಟ್ಟು |೨|
ಹೋಗೆಂದು ರಂಗನ ಕಳುಹಿಕೊಟ್ಟು, ಗೋಪಿ
ಆಗ ಭೋಗಂಗಳೆಲ್ಲ ತುಂಬಿಕೊಟ್ಟು
ನಿಗಮ ಗೋಚರನೆಂಬ ಪೆಸರನಿಟ್ಟು, ಗೋಪಿ
ಪುರಂದರವಿಠಲನ್ನ ಬೆಳೆಸಿಬಿಟ್ಟು |೩|
hELidare namma mEle yAkamma siTTu, iMtha
gALigAra magana paDeda mEle nIviShTu ||pa||
saNNa rumAlu kaTTi cuMga biTTu , paNege
baNNisi kastUri tilakaniTTu
ciNNikOlu ceMDu buguri kaiyaliTTu, posa
beNNeya mellu hOgeMdu kaLuhibiTTu |1|
karedu kaiyalli ciTTe bella koTTu, cikka
haraLu kallugaLanne Arisi koTTu
vArigeya puMDarannu mADikoTTu, gOpi
Uranella suliyeMdu kaLuhikoTTu |2|
hOgeMdu raMgana kaLuhikoTTu, gOpi
Aga BOgaMgaLella tuMbikoTTu
nigama gOcaraneMba pesaraniTTu, gOpi
puraMdaraviThalanna beLesibiTTu |3|

Leave a Reply
You must be logged in to post a comment.