Composer : Shri Vadirajaru
ಕೈಲಾಸದಾಶೆ-ಯೆಲ್ಲಿಹುದೊ
ಶೈಲೇಂದ್ರ ಸುತೆಯರಸ ಶಿವನ ಒಲವಿಲ್ಲದವಗೆ [ಪ]
ಗುರು ಹಿರಿಯರರಿಯದಗೆ ಪರಗತಿಯ ತೊರೆದವಗೆ,
ವರಧರ್ಮ ಪಥವ ಮರೆದವಗೆ,
ದುರುಳರನೆ ಪೊರೆದು ಪರಸತಿಯ ನೆರೆದವಗೆ [೧]
ದೀನ ಜನರೊಡನಾಡಿ ಹೀನ ಕರ್ಮವ ಮಾಡಿ,
ಆನೆಂಬ ಮಮತೆಯನೆ ಕೂಡಿ,
ದಾನವನೆ ಬೇಡಿ ದುರ್ದಾನಕೆ ಮರುಳಹಗೆ [೨]
ಅನಾಚಾರಂಗಳ ಬಿಡದೆ, ಮನೆಗೆ ಬಂದರು ಕೊಡದೆ,
ಧನದ ಗಂಟುಗಳನು ಕಡಿಯದೆ,
ಅನುಸರಿಸಿ ನಡೆಯದೆ, ಪರರ ಜರಿದು ನುಡಿವವಗೆ [೩]
ವಾದಿರಾಜನ ನುಡಿಯ ಹಿತವೆಂದು ಲಾಲಿಸದೆ,
ಕ್ರೋಧ ಮಯನಾಗಿ ದೂಷಿಪಗೆ,
ಪಾದಕೆರಗದೆ ಜನನಿಯ-ನಾದರಿಸದವಗೆ [೪]
ಹಯವದನ-ನಲ್ಲೆಂದು ತಾನೆಲ್ಲ ಬಲ್ಲೆಯೆಂದು,
ದಯವುಳ್ಳವರ ದೈವನೆನದೆ ಈ ಸ್ವಯಂಭು
ಲಿಂಗದ ಕಲ್ಲೇ ದೈವವೆಂಬುವಗೆ [೫]
kailAsadASe-yellihudo
SailEMdra suteyarasa Sivana olavilladavage [pa]
guru hiriyarariyadage paragatiya toredavage,
varadharma pathava maredavage,
duruLarane poredu parasatiya neredavage [1]
dIna janaroDanADi hIna karmava mADi,
AneMba mamateyane kUDi,
dAnavane bEDi durdAnake maruLahage [2]
anAcAraMgaLa biDade, manege baMdaru koDade,
dhanada gaMTugaLanu kaDiyade,
anusarisi naDeyade, parara jaridu nuDivavage [3]
vAdirAjana nuDiya hitaveMdu lAlisade,
krOdha mayanAgi dUShipage,
pAdakeragade jananiya-nAdarisadavage [4]
hayavadana-nalleMdu tAnella balleyeMdu,
dayavuLLavara daivanenade I svayaMBu
liMgada kallE daivaveMbuvage [5]

Leave a Reply
You must be logged in to post a comment.