Sarasaksheru varalakshmi

Composer : Shri Raghurama vittala

By Smt.Shubhalakshmi Rao

ಸಾರ ಸಾಕ್ಷೇರು ವರ ಲಕ್ಷ್ಮಿ ದೇವೇರಿಗೆ
ಪಾದ ಪೂಜೆಯ ಮಾಡಿ ಧನ್ಯರಾಗಿ [ಪ]

ಧನ್ಯರಾಗಿ ಮಾನ್ಯರಾಗಿ, ಭಾಗ್ಯವಂತರಾಗಿ
ಸಂಪನ್ನರಾಗಿ [ಅ.ಪ]

ಹಾರ ಕೇಯೂರ ಕಂಕಣ ಗೊಂಡ್ಯಾ
ತೋರ ವಡ್ಯಾಣ ನಾಗ ಭೂಷ |
ವಾಲೆನಾಗರ ಬೇಸರಿ ಬಾಳ್ಯ,
ಪೂರ್ವದ ಬುಗುಡಿ ಬುಲಾಕು ಮುಕುರ [೧]

ಕುಂದ ಮಂದಾರ ಸುಗಂಧಿ ಪುಷ್ಪ
ಚೆಂದದ ಪರಿಮಳ ಆರ್ಯ |
ಅಂದದಿ ಪೂಜೆ ಅರ್ಥ್ಯ ಪಾದ್ಯ,
ಕುಂದಣ ಪೀಠವು ದೀಪ ಧೂಪ [೨]

ನಾರಿಕೇಳ ಅಂಜುರ ಕದಳಿ ಹಲಸು
ಸಾರದಾಳಿಂಬ ಉತ್ತತ್ತಿ ದ್ರಾಕ್ಷಿ |
ಬೋರೆ ಗೋಡಂಬಿ ಸೇಬು ಮಾವು ಕಿತ್ತಳೆ,
ನೀರೆ ತಾಂಬೂಲ ನೀಡಿ ಭಕ್ತಿಯಿಂದ [೩]

ಮಂಡಿಗೆ ಫೇಣಿ ಚಿರೋಟಿ ಲಾಡು
ಸಂಡಿಗೆ ಹಪ್ಪಳಾಂಬೋಡೆ ಬೂಂದ್ಯಾ |
ತಂಡ ತಂಡದ ಪಾಯಸ ಕ್ಷೀರ ತುಪ್ಪ,
ಮಂಡಲವ ಮಾಡಿ ನೈವೇದ್ಯಕಿಟ್ಟು [೪]

ಮಂಗಳಾರಿ ಮಾಡಿರೆ ಮನ್ಮಥ ಪಿತನಿಗೆ
ಮಂಗಳೆಂದು ಪಾಡಿರೆ ಗಂಗಾ ಜನಕನಿಗೆ |
ಆರುತಿ ಮಾಡಿರೆ ಜಾನಕಿಗೆ,
ಶುಭ ಮಂಗಳ ಶ್ರೀ ರಘುರಾಮ ವಿಠ್ಠಲಗೆ [೫]


sAra sAkShEru vara lakShmi dEvErige
pAda pUjeya mADi dhanyarAgi [pa]

dhanyarAgi mAnyarAgi, BAgyavaMtarAgi
saMpannarAgi [a.pa]

hAra kEyUra kaMkaNa goMDyA
tOra vaDyANa nAga BUSha |
vAlenAgara bEsari bALya,
pUrvada buguDi bulAku mukura [1]

kuMda maMdAra sugaMdhi puShpa
ceMdada parimaLa Arya |
aMdadi pUje arthya pAdya,
kuMdaNa pIThavu dIpa dhUpa [2]

nArikELa aMjura kadaLi halasu
sAradALiMba uttatti drAkShi |
bOre gODaMbi sEbu mAvu kittaLe,
nIre tAMbUla nIDi BaktiyiMda [3]

maMDige PENi cirOTi lADu
saMDige happaLAMbODe bUMdyA |
taMDa taMDada pAyasa kShIra tuppa,
maMDalava mADi naivEdyakiTTu [4]

maMgaLAri mADire manmatha pitanige
maMgaLeMdu pADire gaMgA janakanige |
Aruti mADire jAnakige,
SuBa maMgaLa SrI raGurAma viThThalage [5]

Leave a Reply

You might also like

error: Content is protected !!