Composer : Shri Kamalesha vittala [ Raja S.Gururajacharya]
ಕೂಸೇನೆ ಇದು ಕೂಸೇನೆ
ವಸುಧೆಯೊಳಗೆ ಇನ್ಥ ಕೂಸನು ನಾ ಕಾಣೆ [ಪ]
ಅಸಿ ಅತಿವಿತಕ್ಕೆಲ್ಲ ತುಸು ಸಹ ಬೆದರದೆ
ಶ್ರೀಶನಧಿಕನೆಂದು ಸಾರುತ ಮೆರೆವುದು [೧]
ಗಿರಿಯಿಂದಲಿ ಬಿದ್ದು ಕರಿಯ ಪಾದಕೆ ಸಿಲುಕಿ
ಗರಳವ ಕುಡಿದರು ನಗುತಾಡುವುದಿದು [೨]
ರಾಶಿಗ್ರಂಥವ ಬರೆದು ಜ್ಞಾನಿಗಳನು ಪೊರೆದು
ಆಸನವೇರಿತಾ ರಾಜ್ಯವನಾಳುವುದಿದು [೩]
ಕಾಶಾಯವನುಟ್ಟು ಭೂಸುರನುತನಾಗಿ
ಈ ಸುಜನರಿಗೆಲ್ಲ ಕಾಮಿತವೀವುದು [೪]
ಯೋಗ ತಪಕೆ ಸಿಗದ ಕಮಲೇಶನು ಪುಟ್ಟ
ಮಗು ಕರೆದೋಡನೆ ತಾ ಕಂಬದಿಂ ಬರನೇನೆ [೫]
koosEne idu koosEne
vasudheyoLage intha koosanu naa kANe [pa]
asi ativitakkella tusu saha bedarade
shreeshanadhikaneMdu saaruta merevudu [1]
giriyiMdali biddu kariya paadake siluki
garaLava kuDidaru nagutADuvudidu [2]
rAshigraMthava baredu j~jAnigaLanu poredu
AsanavEritA rAjyavanALuvudidu [3]
kAshAyavanuTTu bhoosuranutanAgi
ee sujanarigella kAmitavIvudu [4]
yOga tapake sigada kamalEshanu puTTa
magu karedODane tA kaMbadiM baranEne [5]

Leave a Reply
You must be logged in to post a comment.