Jayaraya Jayaraya daya

Composer : Shri Jagannatha dasaru

ಜಯರಾಯ ಜಯರಾಯ
ದಯವಾಗೆಮಗನುದಿನ ಸುಪ್ರೀಯಾ ||ಪ||

ವಿದ್ವನ್ ಮಂಡಲಿ ಸದ್ವಿನುತನೆ ಪಾ-
ದ ದ್ವಯಕೆರಗುವೆ ಉದ್ಧರಿಸೆನ್ನನು ||೧||

ಗುರು ಪೂರ್ಣಪ್ರಜ್ಞರ ಸನ್ಮತ
ಉದ್ಧರಿಸಿ ಮೆರೆದೆ ಭುಸುರವರ ವರದಾ ||೨||

ಸುರನಾಥನೆ ನೀ ನರನಾವೇಷದಿಂ
ಧರಣಿಯೊಳಗ್ ಅವತರಿಸಿದೆ ದಯದಿ ||೩||

ವಿದ್ಯಾರಣ್ಯನಾ ವಿದ್ಯಮತದ ಪ್ರ-
ಸಿದ್ಧಾಂತಗಳ ಅಪದ್ಧವೆಂದೆನಿಸಿದೆ ||೪||

ಸಭ್ಯರ ಮಧ್ಯದೊಳತ್ಯಧಿಕ ವರಾ
ಕ್ಷೋಭ್ಯ ಮುನಿ ಕರಾಬ್-ಜಾ-ಭ್ಯುದಿತ ಗುರು ||೫||

ಅವಿದಿತನ ಸತ್-ಕವಿಗಳ ಮಧ್ಯದಿ
ಸುವಿವೇಕಿಯ ಮಾಡವನಿಯೊಳೆನ್ನನು ||೬||

ನಿನ್ನವನು ನಾನನ್ಯನಲ್ಲವೊ ಜ
ಗನ್ನಾಥವಿಠಲನ ಎನ್ನೊಳಗಿರಿಸೋ ||೭||


jayarAya jayarAya
dayavAgemaganudina suprIyA ||pa||

vidvan maMDali sadvinutane pA-
da dvayakeraguve uddharisennanu ||1||

guru pUrNapraj~jara sanmata
uddharisi merede Busuravara varadA ||2||

suranAthane nI naranAvEShadiM
dharaNiyoLag avatariside dayadi ||3||

vidyAraNyanA vidyamatada pra-
siddhAMtagaLa apaddhaveMdeniside ||4||

saByara madhyadoLatyadhika varA
kShOBya muni karAbjAByudita guru ||5||

aviditana sat-kavigaLa madhyadi
suvivEkiya mADavaniyoLennanu ||6||

ninnavanu nAnanyanallavo ja
gannAthaviThalana ennoLagirisO ||7||

Leave a Reply

You might also like

error: Content is protected !!