Palisenna velapura chenna

Composer : Shri Pradyumna Teertharu

By Smt.Shubhalakshmi Rao

ಪಾಲಿಸೆನ್ನ ವೇಲಾಪುರ ಚೆನ್ನ (ಪ)

ಪಾಲಿಸು ಕರುಣಾ ನಿಲಯನೆಂದು ನಾ
ಕೇಳಿ ಬಂದೆ ಬಹು ಸುಂದರಕಾಯ (ಅ.ಪ)

ಪದುಮ ಶಂಖ ಅರಿ ಮುದದಿ ಗದಾಧರ
ಪದಪದುಮದಿ ಮನ ಒದಗಿಸಿ ಬೇಗ [೧]

ಪೀತಾಂಬರ ಶ್ರೀವತ್ಸ ಕೌಸ್ತುಭದಿ
ಅತಿ ಶೋಭಿಪ ನೀ ಸ್ತುತಿಗೊಲಿಯುತಲಿ [೨]

ಚನ್ನಕೇಶವ ಬಿನ್ನೈಸುವೆನೋ
ಬೆನ್ನ ಬಿಡದಲೆ ಮನ್ನಿಸಿ ತ್ವರದಿ [೩]

ಕಂದನ ಕುಂದುಗಳೊಂದೆಣಿಸದಲೆ
ಬಂದು ಚಿಂತನಕೆ ಇಂದಿರೆ ರಮಣ [೪]

ಮೀನಕೇತುಪಿತ ಶ್ರೀ ನರಹರಿಯೆ
ಜ್ಞಾನ ಭಕುತಿಯಿತ್ತು ಮೌನದಿಂದ ನೀ [೫]


pAlisenna vElApura cenna (pa)

pAlisu karuNA nilayaneMdu nA
kELi baMde bahu suMdarakAya (a.pa)

paduma SaMKa ari mudadi gadAdhara
padapadumadi mana odagisi bEga [1]

pItAMbara SrIvatsa kaustuBadi
ati SOBipa nI stutigoliyutali [2]

cannakESava binnaisuvenO
benna biDadale mannisi tvaradi [3]

kaMdana kuMdugaLoMdeNisadale
baMdu ciMtanake iMdire ramaNa [4]

mInakEtupita SrI narahariye
j~jAna Bakutiyittu maunadiMda nI [5]

Leave a Reply

You might also like

error: Content is protected !!