Composer : Shri Shripadarajaru
ಸ್ಮರಿಸಿದವರನು ಕಾಯ್ವ ನಮ್ಮ ಸೂರ್ಯಾನೇಕ ಪ್ರಭಾವ
ಸುರ ಮುನಿಗಳ ಸಂಜೀವ ಶ್ರೀ ವೆಂಕಟ ನಮ್ಮನು ಪೊರೆವ ||ಪ||
ವೈಕುಂಠದಿಂದ ಬಂದು ಶೇಷಾಚಲದಲಿ ನಿಂದು
ಭಕ್ತರ ಪಾಲಿಪೆನೆಂದು ಅಭಯ ದಯಾಕರ ಸಿಂಧು
ಭಕುತಿ ಮುಕುತಿಯೀವ ಮತ್ಕುಲದೇವನೆ
ಸಕಲ ಜನಸೇವಿತ ಘನ ಪರಿಪೂರ್ಣನೆ
ವಿಕಸಿತ ಕಮಲನಯನ ಕಂಜನಾಭನೆ
ಪ್ರಕಟಿತ ಶುಭಕೀರ್ತಿಯಿಂದ ಮೆರೆವನೆ ||೧||
ಜ್ಞಾನಿಗಳ ಗೋಚರನೆ ತನ್ನ ಧ್ಯಾನಿಪರ ಮನೋಹರನೆ
ದಾನವರ ಸಂಹರನೆ ಮಹಾದೈನ್ಯಾದಿಗಳುದ್ಧರನೆ
ಆನಂದಮಯನೆ ಅನೇಕಾವತಾರನೆ
ಅನುದಿನ ನೆನೆವರ ಹೃದಯ ಮಂದಿರನೆ
ಘನಮಾಣಿಕ ಭೂಷಣ ಶೃಂಗಾರನೆ
ತನುವಿನ ಕ್ಲೇಶ ದುರಿತ ಸಂಹರನೆ ||೨||
ಜಯತು ದೋಷ ವಿನಾಷ ಜಯ ಮಹಿಮಾ ವಿಶೇಷ
ಜಯತು ಲಕುಮೀ ಪರಿತೋಷ ಜಯ ಶ್ರೀ ವೆಂಕಟೇಶ
ಜಯ ಕಮಲಜ ಜನಕನೆ ಜಯ ಜಗದೀಶ
ಜಯ ಗಜವರದ ಪಾಲಿತ ಪುಣ್ಯಘೋಷ
ಜಯತು ಜನಾರ್ದನ ಜಗನ್ಮೋಹನ ವೇಷ
ಜಯ ರಂಗವಿಠಲ ಕರುಣಾ ವಿಲಾಸ ||೩||
smarisidavaranu kAyva namma sUryAnEka praBAva
sura munigaLa saMjIva SrI veMkaTa nammanu poreva ||pa||
vaikuMThadiMda baMdu SEShAcaladali niMdu
Baktara pAlipeneMdu aBaya dayAkara siMdhu
Bakuti mukutiyIva matkuladEvane
sakala janasEvita Gana paripUrNane
vikasita kamalanayana kaMjanABane
prakaTita SuBakIrtiyiMda merevane ||1||
j~jAnigaLa gOcarane tanna dhyAnipara manOharane
dAnavara saMharane mahAdainyAdigaLuddharane
AnaMdamayane anEkAvatArane
anudina nenevara hRudaya maMdirane
GanamANika BUShaNa SRuMgArane
tanuvina klESa durita saMharane ||2||
jayatu dOSha vinASha jaya mahimA viSESha
jayatu lakumI paritOSha jaya SrI veMkaTESa
jaya kamalaja janakane jaya jagadISa
jaya gajavarada pAlita puNyaGOSha
jayatu janArdana jaganmOhana vESha
jaya raMgaviThala karuNA vilAsa ||3||

Leave a Reply
You must be logged in to post a comment.