Composer: Shri Vijayadasaru
ರಾಗ: ವರಾಳಿ
ಧ್ರುವತಾಳ
ದಾಸರ ನಿಜ ಕಾರುಣ್ಯ ಪಾತ್ರನು ನಾನು
ದಾಸರ ಹೆಬ್ಬಾಗಿಲ ಮುಂದೆ ಕಾಯುವವ ನಾನು
ದಾಸರ ಮನೆಯಲ್ಲಿ ಅಂಗಳ ತೊಳೆವವ ನಾನು
ದಾಸರ ಭೋಜನಶಾಲೆ ಸಮ್ಮಾರ್ಜನಗೈವ ನಾನು
ದಾಸರ ಸದನಕ್ಕೆ ಜಲವಾಹಕ ನಾನು
ದಾಸರ ಪೂಜಾ ಸಾಧನ ದ್ರವ್ಯ ತರುವವ ನಾನು
ದಾಸರ ಊಟದೆಡೆ ಯಂಜಲು ತೆಗೆವವ ನಾನು
ದಾಸರ ಬಳಿಯಲ್ಲಿ ಸಮ್ಮೊಗದವ ನಾನು
ದಾಸರುಂಡದ್ದೆ ಉಂಡು ದಾಸರುಟ್ಟದ್ದೆ ಉಟ್ಟು
ದಾಸರಾಡಿದ್ದೆ ಎನಗೆ ವೇದವಾಕ್ಯವೆಂದು
ಲೇಸಾಗಿ ಪೇಳಿಕೊಳುತಲಿದ್ದವರ ಸಂಗ
ಲೇಶ ಬಿಡದೆ ಕಾಲಕಳೆದ ಜ್ಞಾನಿಗಳಿವರ
ದಾಸದಾಸೀ ಜನರ ಯೆಲ್ಲೆಲ್ಲಿಗೆ ನಿಜ –
ದಾಸ ದಾಸನು ನಾನು ಅನಂತ ಜನುಮದಲ್ಲಿ
ಭೂಷಣ ಎನಗಿದೆ ಮತ್ತಾವ ಸಂಪತ್ತು
ಸೂಸಿ ಪ್ರಾಪುತವಾಗಲದರಿಂದ ಲಾಭವೇನು
ದಾಸಜನರ ಪ್ರೀಯ ವಿಜಯವಿಟ್ಠಲರೇಯನ
ದಾಸನಾದವನಿಗೆ ಆವುದು ಕೊರತೆ ಕಾಣೆ || ೧ ||
ಮಟ್ಟತಾಳ
ಸುಣ್ಣಕೆ ಗತಿ ಯಿಲ್ಲದ ಮನುಜ ಪಾಮರಗೆ
ಮುನ್ನೆ ಕುಳಿತಲ್ಲಿ ರನ್ನದೊಜ್ರದ ಖಣಿ
ತನ್ನಿಂದಲಿ ತಾನೆ ಕಣ್ಣಿಗೆ ಪೊಳದಂತೆ
ಚನ್ನಾಗಿ ಬಳಿಯಲ್ಲಿ ಬಣ್ಣಿಸಲಂದು
ಘನ್ನ ದುರಿತ ಮೋಚನ್ನವಾದುದಕೆ
ಎನ್ನ ಪುಣ್ಯವಲ್ಲ ಎನ್ನ ಸಾಧನವಲ್ಲ
ಮನ್ನಿಸಿ ಪಿರಿಯರು ಇನ್ನಿತು ಪಾಲಿಸಲು
ಇನ್ನು ವೆಗ್ಗಳವಿದೆ ಜನಾರ್ದನದೇವ
ಸನ್ನುತಿಸಿ ವಿಜಯವಿಟ್ಠಲ ಹರಿಯ
ಬಣ್ಣಿಸಿ ಪರಮಹಿಮೆ ಗುಣಿಸುವನಾರೊ || ೨ ||
ತ್ರಿವಿಡಿತಾಳ
ಅರವಿಂದದ ಬಳಿಯ ಖದ್ಯೋತ ಕ್ರಿಮಿ ಒಂದು
ಹರಿದಾಡುತಿರಲಾಗ ಅದೆ ಕಾಲದಲ್ಲಿ
ತರಣಿ ಉದ್ಭವನಾಗೆ ಮುದದಿಂದ ಸರಸಿಜ
ಅರಳಲು ಕಾಣುತಲಾ ಖದ್ಯೋತವು
ಹರುಷ ಬಡುವದೆಂದು ನರನು ನುಡಿಯಲದರ
ಚರಿತೆ ತಿಳಿಯದೇನೊ ನೋಳ್ಪರಿಗೆ
ಮರುಳೆ ಮನವೆ ಕೇಳು ಕವನಾ ನಿನ್ನ ಕೃತಿ
ಹಿರಿದಾಗಿಪ್ಪದೆಂದು ಹಿಗ್ಗದಿರು
ಎರಡರ ಹೆಸರು ಒಂದಾದರು ಮಹಾಖ್ಯಾತಿ
ಬರುವದು ತರಣಿಗಲ್ಲದೆ ಖದ್ಯೋತಕೇನು
ಗರುವಿಕೆತನ ಸಲ್ಲಾ ವಿಜಯವಿಟ್ಠಲರೇಯನ
ಶರಣರ ಕೃಪೆಯಿಂದಲಿ ಭಾಗ್ಯ ನಿಜವೆನ್ನು || ೩ ||
ಅಟ್ಟತಾಳ
ಪರಮ ದರಿದ್ರನು ಬಹು ರೋಗಿಷ್ಟನು
ನಿರುತ ನಿಂದಕನು ಮಹಾ ದುಃಖಿಷ್ಟನೆಂದಿಗು
ಕುರುಡನು ಕಿವುಡನು ಕುಂಟನು ಮೂಕ ನಾನಾ
ಪರಿ ವ್ಯಾಕುಲದವ ವ್ಯಾಕುಲದವ
ಆರು ಇಲ್ಲದಿಪ್ಪ ಪರದೇಶಿ ಕೇವಲ ತೃಷಿ ಪೀಡಿತ ಕ್ಷುಧಾ –
ತುರನಾಗಿ ಬ್ಯಾಸಿಗಿ ಬಿಸಲೊಳು ತಪಿಸುತ
ಸ್ಮರಣಿಯು ಇಲ್ಲದೆ ನೀರಿಲ್ಲದಾರಣ್ಯದಿ
ಇರುತಿಪ್ಪ ಮಂದ ಮಾನವನ ತತ್ಕಾಲದಿ
ಭರದಿಂದ ಕೊಂಡೊಯ್ದು ಸಂಜೀವಾದ್ರಿಯಲ್ಲಿ
ಸುರತರುವಿನ ತಂಪು ನೆರಳೊಳಗೆ ಇಟ್ಟ
ತೆರದಂತೆ ಎನಗಿಂದು ಸ್ವೋತ್ತುಮರಿಂದಲಿ
ದೊರಕಿತು ಇದೆ ಸುಖ ಸೌಖ್ಯವೆನ್ನು ಮನವೆ
ಧರೆಯೊಳು ದೈವವಾದ ವಿಜಯವಿಟ್ಠಲನ್ನ
ಮರಿಯದೆ ಜಿಂಹ್ವೆಯಲಿ ಕೊಂಡಾಡು ನಲಿದಾಡು || ೪ ||
ಆದಿತಾಳ
ಉಪಜೀವ್ಯ ನಿನಗಿದೆ ಎಲೊ ಮನವೆ ಕೇಳು ಬಲು
ಗುಪಿತದಲ್ಲಿ ಚರಿಸು ಅಂತರಂಗದಲ್ಲಿ
ಸುಪಥ ಬಯಸುತಿರು ಸುಜನರ ಬಿಡದಿರು
ಅಫಲನಾಗು ಅತಿ ಉಗ್ರಕರ್ಮವ ಬಿಡು
ಉಪಚಾರವೆನ್ನದಿರು ಹರಿದಾಸರು ಒಲಿದು
ಕೃಪೆ ಮಾಡಿದಲ್ಲದೆ ಬರಿದೆ ಬಾಹುದೆ ಸುಖ
ವಿಪುಲದೊಳಗೆ ಹರಿದಾಸನಾಗುವದಕೆ
ಅಪರಿಮಿತವಾಗಿ ಸಾಧನ ದೊರೆಯಬೇಕೊ
ಉಪದೇಶಕರ್ತ ನಮ್ಮ ವಿಜಯವಿಟ್ಠಲರೇಯನ
ಜಪತಪ ಧ್ಯಾನದಲ್ಲಿ ಪೊತ್ತು ಪೋಗಾಡುವದು || ೫ ||
ಜತೆ
ಇಂದ್ರನಾಮಕರಾದ ದಾಸರೊಲಿದ ಮ್ಯಾಲೆ
ಚಂದ್ರ ಪ್ರಕಾಶ ಶಿರಿ ವಿಜಯವಿಟ್ಠಲ ಪೊಳೆವಾ ||
rAga: varALi
dhruvatALa
dAsara nija kAruNya pAtranu nAnu
dAsara hebbAgila muMde kAyuvava nAnu
dAsara maneyalli aMgaLa toLevava nAnu
dAsara BOjanaSAle sammArjanagaiva nAnu
dAsara sadanakke jalavAhaka nAnu
dAsara pUjA sAdhana dravya taruvava nAnu
dAsara UTadeDe yaMjalu tegevava nAnu
dAsara baLiyalli sammogadava nAnu
dAsaruMDadde uMDu dAsaruTTadde uTTu
dAsarADidde enage vEdavAkyaveMdu
lEsAgi pELikoLutaliddavara saMga
lESa biDade kAlakaLeda j~jAnigaLivara
dAsadAsI janara yellellige nija –
dAsa dAsanu nAnu anaMta janumadalli
BUShaNa enagide mattAva saMpattu
sUsi prAputavAgaladariMda lABavEnu
dAsajanara prIya vijayaviTThalarEyana
dAsanAdavanige Avudu korate kANe || 1 ||
maTTatALa
suNNake gati yillada manuja pAmarage
munne kuLitalli rannadojrada KaNi
tanniMdali tAne kaNNige poLadaMte
cannAgi baLiyalli baNNisalaMdu
Ganna durita mOcannavAdudake
enna puNyavalla enna sAdhanavalla
mannisi piriyaru innitu pAlisalu
innu veggaLavide janArdanadEva
sannutisi vijayaviTThala hariya
baNNisi paramahime guNisuvanAro || 2 ||
triviDitALa
araviMdada baLiya KadyOta krimi oMdu
haridADutiralAga ade kAladalli
taraNi udBavanAge mudadiMda sarasija
araLalu kANutalA KadyOtavu
haruSha baDuvadeMdu naranu nuDiyaladara
carite tiLiyadEno nOLparige
maruLe manave kELu kavanA ninna kRuti
hiridAgippadeMdu higgadiru
eraDara hesaru oMdAdaru mahAKyAti
baruvadu taraNigallade KadyOtakEnu
garuviketana sallA vijayaviTThalarEyana
SaraNara kRupeyiMdali BAgya nijavennu || 3 ||
aTTatALa
parama daridranu bahu rOgiShTanu
niruta niMdakanu mahA duHKiShTaneMdigu
kuruDanu kivuDanu kuMTanu mUka nAnA
pari vyAkuladava vyAkuladava
Aru illadippa paradESi kEvala tRuShi pIDita kShudhA –
turanAgi byAsigi bisaloLu tapisuta
smaraNiyu illade nIrilladAraNyadi
irutippa maMda mAnavana tatkAladi
BaradiMda koMDoydu saMjIvAdriyalli
surataruvina taMpu neraLoLage iTTa
teradaMte enagiMdu svOttumariMdali
dorakitu ide suKa sauKyavennu manave
dhareyoLu daivavAda vijayaviTThalanna
mariyade jiMhveyali koMDADu nalidADu || 4 ||
AditALa
upajIvya ninagide elo manave kELu balu
gupitadalli carisu aMtaraMgadalli
supatha bayasutiru sujanara biDadiru
aPalanAgu ati ugrakarmava biDu
upacAravennadiru haridAsaru olidu
kRupe mADidallade baride bAhude suKa
vipuladoLage haridAsanAguvadake
aparimitavAgi sAdhana doreyabEko
upadESakarta namma vijayaviTThalarEyana
japatapa dhyAnadalli pottu pOgADuvadu || 5 ||
jate
iMdranAmakarAda dAsarolida myAle
caMdra prakASa Siri vijayaviTThala poLevA ||
Leave a Reply