Composer : Shri Purandara dasaru
ಆಡಿ ನೋಡಣ್ಣಾ ಆಡಿಸಿ ನೋಡಣ್ಣಾ |ಪ|
ಮೂರು ಲೋಕಕೆ ಶಿವನು ಕಳಿಸಿದ
ಮೂರು ಕಣ್ಣೀನ ತೆಂಗಿನ ಕಾಯಿ
ಸುತ್ತಲು ರಾಜ್ಯವ ಆಳಿಸುತಿರುವ
ತೋಟ್ಟದೊಳಗಿನ ಪರಂಗೇ ಕಾಯಿ ||೧||
ಹತ್ತು ಜನರು ಬೇಡೀ ಕೊಂಬುವ
ಕೃಷ್ಣಾನೆಂಬೊ ಕುಂಬಳಕಾಯಿ,
ದುರುಳರ ಸಂಗ ಮಾಡಬೇಡಿರಿ
ಕೊಳೆತು ಹೋಗುವ ಹಾಗಲಕಾಯಿ ||೨||
ನಾಲಿಗೆ ಇಲ್ಲದೆ ನಾಟ್ಯವಾಡುವ
ಜಾಣ ನಾಯಕಿ ಸೋರೆಕಾಯಿ,
ಸಾಲ ತೊಗೊಂಡು ಕೊಡದೆ ಭಂಡಾರ
ಭೆಂಡೆನಿಸುವುದೆ ಬೆಂಡೆಕಾಯಿ ||೩||
ಸಿಪ್ಪೆ ತಿಂದರೆ ಸಪ್ಪೆ ಮಾಡುವ
ಜಾಣನೆಂಬುದೆ ಮೆಣಿಸಿನಕಾಯಿ
ಒಬ್ಬರು ಗಂಡಗೆ ಇಬ್ಬರು ಹೆಂಡರು
ಝಗಳ ನೊಡು ನೀ ಸೌಂತೆಕಾಯಿ ||೪||
ಹತ್ತೆಂಬೋದೆ ದಶಾವತಾರ
ಒಂಬತ್ತೆಂಬೊದೆ ನವ ದ್ವಾರ,
ಎಂಟ್ಟೆಂಬೋದೆ ಅಷ್ಟ ದಿಕ್ಕುಗಳು,
ಏಳೆಂಬೋದೆ ಸಪ್ತ ವಾಹನ ,
ಆರೆಂಬೋದೆ ಅರಿಷಡ್ ವರ್ಗ,
ಅಯಿದೆಂಬೋದೆ ಪಂಚೇಂದ್ರಿಯ,
ನಾಲ್ಕೆಮ್ಬೋದೆ ಚತುರ್ ವೇದಗಳು,
ಮೂರೆಂಬೋದೆ ತ್ರೀಮೂರ್ತಿ,
ಎರಡೆಂಬೋದೆ ದ್ವೈತಾದ್ವೈತ,
ಒಂದೆಂಬೋದೆ ಪರಮಾತ್ಮ,
ಎಲ್ಲ ಜನರೊಳು ಪ್ರೀತಿ ಇರಬೇಕು
ನಮ್ಮ ಪುರಂದರ ವಿಠಲನ ಅಮಟೆಕಾಯಿ ||೫||
ADi nODaNNA ADisi nODaNNA |pa|
mUru lOkake shivanu kaLisida
mUru kaNNIna teMgina kAyi
suttalu rAjyava ALisutiruva
tOTTadoLagina paraMgE kAyi ||1||
hattu janaru bEDI koMbuva
kRuShNAneMbo kuMbaLakAyi,
duruLara saMga mADabEDiri
koLetu hOguva hAgalakAyi ||2||
nAlige illade nATyavADuva
jANa nAyaki sOrekAyi,
sAla togoMDu koDade bhaMDAra
bheMDenisuvude beMDekAyi ||3||
sippe tiMdare sappe mADuva
jANaneMbude meNisinakAyi
obbaru gaMDage ibbaru heMDaru
jhagaLa noDu nee souMtekAyi ||4||
hatteMbOde dashAvatAra
oMbatteMbode nava dvAra,
eMTTeMbOde aShTa dikkugaLu,
ELeMbOde sapta vAhana ,
AreMbOde ariShaD varga,
ayideMbOde paMchEMdriya,
nAlkembOde chatur vEdagaLu,
mUreMbOde trImUrti,
eraDeMbOde dvaitAdvaita,
oMdeMbOde paramAtma,
ella janaroLu preeti irabEku
namma puraMdara viThalana amaTekAyi ||5||
Leave a Reply