Eke Mamate kottu

Composer : Shri Gopala dasaru

ಏಕೆ ಮಮತೆ ಕೊಟ್ಟು ದಣಿಸುವೀ ರಂಗ |
ನೀ ಕರುಣದಿ ಎನ್ನ ಪಾಲಿಸೋ ಕೃಷ್ಣ ||ಅ.ಪ||

ನಿನ್ನನು ಭಜಿಸಲು ಅನ್ಯ ವಿಷಯಂಗಳಿಗ್
ಎನ್ನನೊಪ್ಪಿಸುವುದು ನೀತಿಯೇ |
ಮನ್ನಿಸಿ ದಯದಿ ನೀನೆನ್ನ ಪಾಲಿಸದಿರೆ
ನಿನ್ನ ನೇಮಕೆ ಪ್ರತಿಕೂಲವೇ ರಂಗ ||೧||

ತನುವು ತನ್ನದು ಅಲ್ಲ ತನು ಸಂಬಂಧಿಗಳಾರೋ
ತನುವ್ಯಾರೋ ತಾನ್ಯಾರೋ ಅವರಿಗೆ |
ಧನ ಮೊದಲಾದ ವಿಷಯಂಗಳ ಅನುಭವ
ಹಿಂದಣ ಜನುಮದಂತಲ್ಲದೇ ರಂಗ ||೨||

ಇಂದ್ರಿಯಂಗಳ ವಿಷಯದಿಂದ ಭೇಧಿಸೆ
ಗೋವಿಂದ ನಿನ್ನ ಮನಕೆ ಬಾರದೇ |
ಇಂದಿರೆಯರಸ ಬ್ರಹ್ಮಾದಿವಂದಿತ ನಿನ್ನ
ಬಂಧಕ ಶಕುತಿಗೆ ನಮೋ ನಮೋ ರಂಗ ||೩||

ಅರಿತು ಅರಿತು ಎನಗೆ ಅರೆಲವವಾದರೂ
ವಿರಕುತಿ ವಿಷಯದಿ ಬಾರದು |
ಕರುಣಾಸಾಗರ ನಿನ್ನ ಸ್ಮರಣೆಯೊಂದಲ್ಲದೆ
ಮರುಳುನಿಗಾವ ಬಗೆಗಾಣೆನೋ ರಂಗ ||೪||

ಎಂದಿಗೆ ಇನ್ನು ನಿನ್ನ ಚಿತ್ತಕ್ಕೆ ಬರುವುದೋ
ಅಂದಿಗೆ ಉದ್ಧರಿಸೋ ಕರುಣಿಯೇ |
ಸುಂದರವಿಗ್ರಹ ಗೋಪಾಲವಿಠ್ಠಲ ಸುಖಸಾಂದ್ರ
ಭವವಿಮೋಚಕ ನಮೋ ನಮೋ ರಂಗ.. ||೫||


Eke mamate koTTu daNisuvI raMga |
nI karuNadi enna pAlisO kRuShNa ||a.pa||

ninnanu bhajisalu anya viShayaMgaLig
ennanoppisuvudu nItiyE |
mannisi dayadi nInenna pAlisadire
ninna nEmake pratikUlavE raMga ||1||

tanuvu tannadu alla tanu saMbaMdhigaLArO
tanuvyArO tAnyArO avarige |
dhana modalAda viShayaMgaLa anuBava
hiMdaNa janumadaMtalladE raMga ||2||

iMdriyaMgaLa viShayadiMda bhEdhise
gOviMda ninna manake bAradE |
iMdireyarasa brahmAdivaMdita ninna
baMdhaka Sakutige namO namO raMga ||3||

aritu aritu enage arelavavAdarU
virakuti viShayadi bAradu |
karuNAsAgara ninna smaraNeyoMdallade
maruLunigAva bagegANenO raMga ||4||

eMdige innu ninna cittakke baruvudO
aMdige uddharisO karuNiyE |
suMdaravigraha gOpAlaviThThala suKasAMdra
bhavavimOcaka namO namO raMga.. ||5||

Leave a Reply

Your email address will not be published. Required fields are marked *

You might also like

error: Content is protected !!