-
Eke Mamate kottu
Composer : Shri Gopala dasaru ಏಕೆ ಮಮತೆ ಕೊಟ್ಟು ದಣಿಸುವೀ ರಂಗ |ನೀ ಕರುಣದಿ ಎನ್ನ ಪಾಲಿಸೋ ಕೃಷ್ಣ ||ಅ.ಪ|| ನಿನ್ನನು ಭಜಿಸಲು ಅನ್ಯ ವಿಷಯಂಗಳಿಗ್ಎನ್ನನೊಪ್ಪಿಸುವುದು ನೀತಿಯೇ |ಮನ್ನಿಸಿ ದಯದಿ ನೀನೆನ್ನ ಪಾಲಿಸದಿರೆನಿನ್ನ ನೇಮಕೆ ಪ್ರತಿಕೂಲವೇ ರಂಗ ||೧|| ತನುವು ತನ್ನದು ಅಲ್ಲ ತನು ಸಂಬಂಧಿಗಳಾರೋತನುವ್ಯಾರೋ ತಾನ್ಯಾರೋ ಅವರಿಗೆ |ಧನ ಮೊದಲಾದ ವಿಷಯಂಗಳ ಅನುಭವಹಿಂದಣ ಜನುಮದಂತಲ್ಲದೇ ರಂಗ ||೨|| ಇಂದ್ರಿಯಂಗಳ ವಿಷಯದಿಂದ ಭೇಧಿಸೆಗೋವಿಂದ ನಿನ್ನ ಮನಕೆ ಬಾರದೇ |ಇಂದಿರೆಯರಸ ಬ್ರಹ್ಮಾದಿವಂದಿತ ನಿನ್ನಬಂಧಕ ಶಕುತಿಗೆ ನಮೋ ನಮೋ…
