Nambide ninna padambuja

Composer : Shri Jagannatha dasaru

By Smt.Shubhalakshmi Rao

ನಂಬಿದೆ ನಿನ್ನ ಪಾದಾಂಬುಜ ನರಸಿಂಹ |
ದಾಸರಾಯಾ ಎನ್ನ |
ಬೆಂಬಿಡದಲೆ ಕಾಯೋ ಬಹು ಪರಿಯಿಂದ ದಾಸರಾಯಾ [ಪ]

ಈರೇಳು ವರುಷವಾರಂಭಿಸಿ ಪ್ರತಿದಿನ | ದಾಸರಾಯ ಜಾವು
ಮೂರುಗಳಲ್ಲಿ ಮುಕುಂದನ ಚರಣವ | ದಾಸರಾಯಾ |
ಚಾರು ಮನಾಬ್ಜದಿ ಬಹಿರದಿ ಬಗೆ ಬಗೆ | ದಾಸರಾಯಾ |
ಬಿಡದಾರಾಧಿಸಿದೆ ಭೂರಿ ಭಕುತಿ ಭರಿತನಾಗಿ | ದಾಸರಯ್ಯಾ (೧)

ರಂಗನೊಲಿಮೆ ಭಾಗವತರೆಂದು ಹರುಷದಿ | ದಾಸರಾಯಾ | ಗುರು
ಪುಂಗವ ಸುಮತೀಂದ್ರ ರಾಯ ಕರೆದ ನಿನ್ನ | ದಾಸರಾಯಾ |
ಸಂಗೀತ ರಸನ ಪಾನಮಾಡಿ ಹರುಷದಿ | ದಾಸರಾಯಾ | ಹರಿ |
ಡಿಂಗರೊಳುತ್ತುಂಗ-ನೆನಿಸಿಕೊಂಡೆ ದಾಸರಾಯ (೨)

ಕುಶಲಗಾನವ ಕೇಳಿ ಗುರುಸತ್ಯ ಪೂರ್ಣರು | ದಾಸರಾಯಾ | ಪರಾ
ವಸುನಾಮ ಗಂಧರ್ವನವತಾರ ನೀನೆಂದು | ದಾಸರಾಯಾ |
ಪೆಸರಿಟ್ಟರಂದು ವಿದ್ವಜ್ಜನ ಮೆಚ್ಚಲು ದಾಸರಾಯಾ | ಎನ
ಗೊಶವಹುದೇ ನಿಮ್ಮ ಮಹಿಮೆ ಕೊಂಡಾಡಲು | ದಾಸರಾಯಾ | (೩)

ಚರಿಸಿದೆ ಪುಣ್ಯ ಕ್ಷೇತ್ರಗಳ ಭಕುತಿಯಿಂದ | ದಾಸರಾಯಾ | ಪ್ರತಿ |
ವರುಷ ಬಿಡದೆ ಶೇಷಗಿರಿಯವಾಸನ | ದಾಸರಾಯಾ |
ಚರಣಾಬ್ಜ ಯುಗಲರ ನೂರಬ್ಧ ಪರಿಯಂತ | ದಾಸರಾಯಾ | ಪರಿ
ಚರಿಯವ ಕೈಕೊಂಡು ಪಡೆದೆ ಮಂಗಳಗತಿ ದಾಸರಾಯ (೪)

ಮುನಿಯು ಉಪೇಂದ್ರ ರಾಯರು ನಿಮ್ಮ ಚರಿತೆಯ | ದಾಸರಾಯಾ | ಕೇಳಿ
ಸಾನುರಾಗದಿ ಸರ್ವ ಮಂತ್ರೋಪದೇಶವ | ದಾಸರಾಯಾ |
ಆನುಪೂರ್ವಕಮಾಡಿ ಅತಿ ಸಂತೋಷದಿ | ದಾಸರಾಯಾ | ಕೊಟ್ಟರು
ಶ್ರೀ ನರಸಿಂಹ ಪ್ರತಿಮೆ ಸಾಲಗ್ರಾಮ | ದಾಸರಾಯಾ | (೫)

ಕಿಂಕರನೆನಿಸಿ ಪರಂದರ ದಾಸರೆ | ದಾಸರಾಯಾ | ಅವರಿಂ
ದಂಕಿತ ವಹಿಸಿ ನಿಶ್ಯಂಕೆಯಿಂದ ನೀನು ದಾಸರಾಯಾ |
ಪೊಂಕವ ಪೊಗಳುತ ಪೊಡವಿಯೊಳು ಚರಿಸಿದೆ | ದಾಸರಾಯಾ | ಭವ
ಪಂಕವ ದಾಟ ಪರೇಶನನೈದಿದೆ | ದಾಸರಾಯಾ (೬)

ಜನನವಾರಭ್ಯ ವಸಾನದ ಪರಿಯಂತ | ದಾಸರಾಯಾ | ಹೀನ
ಮನುಜಗೆ ಕರ ಒಡ್ಡಲೊಲ್ಲೆನೆಂಬುವ ಛಲ | ದಾಸರಾಯಾ |
ನಿನಗೆ ಸಲ್ಲಿತು ನಿಜ ಭಾಗವತರ ಪ್ರಿಯ | ದಾಸರಾಯಾ | ನಿಮ್ಮಾ
ಅನುಭವೋಪಾಸನೆ ಏನು ತಿಳಿಯದು ದಾಸರಾಯಾ (೭)

ಇರಳು ಹಗಲು ನಿಮ್ಮ ಚರಣ ಕಮಲ ಧ್ಯಾನ ದಾಸರಾಯಾ |
ಸ್ನಾನ ವರ ಮಂತ್ರ ಜಪ ತಪ ವಿಹಿತಾಚರಣೆಗಳು | ದಾಸರಾಯಾ
ಪೆರತೊಂದು ಸಾಧನ ಮನ ವಾಕ್ಕಾಯಗಳಲಿ | ದಾಸರಾಯಾ |
ನಾನೊಂದರಿಯೆ ದಯಾಬ್ಧಿ ಉದ್ಧರಿಸೆನ್ನ ಭವದಿಂದ ದಾಸರಾಯಾ (೮)

ನಾರಾಯಣಾತ್ಮಜ ಅನಂತಾರ್ಯರುದರದಿ ದಾಸರಾಯಾ | ಪುಟ್ಟಿ |
ನೂರೊಂದು ಕುಲಗಳುದ್ಧಾರ ಮಾಡಿದೆ | ದಾಸರಾಯಾ |
ಕಾರುಣ್ಯನಿಧಿ ಜಗನ್ನಾಥವಿಠಲ | ದಾಸರಾಯಾ | ನಿಮ್ಮ
ಚಾರು ಚರಿತ್ರೆಯ ತುತಿಸಿ ಪಾವನನಾದೆ | ದಾಸರಾಯಾ (೯)


naMbide ninna pAdAMbuja narasiMha |
dAsarAyA enna |
beMbiDadale kAyO bahu pariyiMda dAsarAyA [pa]

IrELu varuShavAraMBisi pratidina | dAsarAya jAvu
mUrugaLalli mukuMdana caraNava | dAsarAyA |
cAru manAbjadi bahiradi bage bage | dAsarAyA |
biDadArAdhiside BUri Bakuti BaritanAgi | dAsarayyA (1)

raMganolime BAgavatareMdu haruShadi | dAsarAyA | guru
puMgava sumatIMdra rAya kareda ninna | dAsarAyA |
saMgIta rasana pAnamADi haruShadi | dAsarAyA | hari |
DiMgaroLuttuMga-nenisikoMDe dAsarAya (2)

kuSalagAnava kELi gurusatya pUrNaru | dAsarAyA | parA
vasunAma gaMdharvanavatAra nIneMdu | dAsarAyA |
pesariTTaraMdu vidvajjana meccalu dAsarAyA | ena
goSavahudE nimma mahime koMDADalu | dAsarAyA | (3)

cariside puNya kShEtragaLa BakutiyiMda | dAsarAyA | prati |
varuSha biDade SEShagiriyavAsana | dAsarAyA |
caraNAbja yugalara nUrabdha pariyaMta | dAsarAyA | pari
cariyava kaikoMDu paDede maMgaLagati dAsarAya (4)

muniyu upEMdra rAyaru nimma cariteya | dAsarAyA | kELi
sAnurAgadi sarva maMtrOpadESava | dAsarAyA |
AnupUrvakamADi ati saMtOShadi | dAsarAyA | koTTaru
SrI narasiMha pratime sAlagrAma | dAsarAyA | (5)

kiMkaranenisi paraMdara dAsare | dAsarAyA | avariM
daMkita vahisi niSyaMkeyiMda nInu dAsarAyA |
poMkava pogaLuta poDaviyoLu cariside | dAsarAyA | Bava
paMkava dATa parESananaidide | dAsarAyA (6)

jananavAraBya vasAnada pariyaMta | dAsarAyA | hIna
manujage kara oDDalolleneMbuva Cala | dAsarAyA |
ninage sallitu nija BAgavatara priya | dAsarAyA | nimmA
anuBavOpAsane Enu tiLiyadu dAsarAyA (7)

iraLu hagalu nimma caraNa kamala dhyAna dAsarAyA |
snAna vara maMtra japa tapa vihitAcaraNegaLu | dAsarAyA
peratoMdu sAdhana mana vAkkAyagaLali | dAsarAyA |
nAnoMdariye dayAbdhi uddharisenna BavadiMda dAsarAyA (8)

nArAyaNAtmaja anaMtAryarudaradi dAsarAyA | puTTi |
nUroMdu kulagaLuddhAra mADide | dAsarAyA |
kAruNyanidhi jagannAthaviThala | dAsarAyA | nimma
cAru caritreya tutisi pAvananAde | dAsarAyA (9)

Leave a Reply

Your email address will not be published. Required fields are marked *

You might also like

error: Content is protected !!