Hariya pattada rani

Composer : Shri Gurujagannatha dasaru

By Smt.Shubhalakshmi Rao

ಹರಿಯ ಪಟ್ಟದ ರಾಣಿ ವರದೆ ಕಲ್ಯಾಣಿ
ಉರು ಗುಣಗಣ ಶ್ರೇಣಿ ಕರುಣೀ |ಪ|

ಶಿರದಿ ನಿನ್ನಯ ದಿವ್ಯ ಚರಣಕಮಲಕೆ ನಾನು
ಎರಗಿ ಬಿನ್ನೈಪೆ ತಾಯೆ ಸುಖವೀಯೇ |ಅ.ಪ|

ವನಜಸಂಭವ ಮುಖ್ಯ ಅನಿಮಿಶೇಷರ ಸ್ತೋಮ
ದಿನದಿನ ನೀ ಪೊರೆವೇ ಘನಮಹಿಮಳೆ |
ಮನುಜರಾಧಮನೆಂದು ಮನಸೀಗೆ ನೀ ತಂದು
ಕನಕ ವೃಷ್ಟಿಯ ಸುರಿದು ಪೊರೆಯೇ ಧ್ವರಿಯೇ |೧|

ಸೃಷ್ಟಿಕಾರಣಿ ನೀನೆ ಕಷ್ಟ ತರಿದು ಕೃಪಾ
ದೃಷ್ಟಿಯಿಂದಲಿ ನೋಡಿ ಸಲಹೇ |
ಇಷ್ಟದಾಯಕ ಶಿರಿ ಕೃಷ್ಣನರಸಿಯೆ ನಿನ್ನ
ಇಷ್ಟು ವಿಧದಲಿ ಬೇಡಿಕೊಂಬೆ ಅಂಬೆ |೨|

ಖ್ಯಾತ ಮಹಿಮಳೆ ಎನ್ನ ಮಾತು ಲಾಲಿಸು ದೇವಿ
ಪೋತ ನಾನಲ್ಲೆ ನಿನಗೆ
ದಾತ ಗುರುಜಗನ್ನಾಥ ವಿಠ್ಠಲ ನಿನ್ನ
ನಾಥನಾಗಿ ಭಾಗ್ಯ ಪಡೆದ ಜಸ ಪಡೆದಾ |೩|


hariya paTTada rANi varade kalyANi
uru guNagaNa SrENi karuNI |pa|

Siradi ninnaya divya caraNakamalake nAnu
eragi binnaipe tAye suKavIyE |a.pa|

vanajasaMBava muKya animiSEShara stOma
dinadina nI porevE GanamahimaLe |
manujarAdhamaneMdu manasIge nI taMdu
kanaka vRuShTiya suridu poreyE dhvariyE |1|

sRuShTikAraNi nIne kaShTa taridu kRupA –
dRuShTiyiMdali nODi salahE |
iShTadAyaka Siri kRuShNanarasiye ninna
iShTu vidhadali bEDikoMbe aMbe |2|

KyAta mahimaLe enna mAtu lAlisu dEvi
pOta nAnalle ninage
dAta gurujagannAtha viThThala ninna
nAthanAgi BAgya paDeda jasa paDedA |3|

Leave a Reply

Your email address will not be published. Required fields are marked *

You might also like

error: Content is protected !!