Composer: Shri Purandara dasaru
ಪಾಪಿ ಬಲ್ಲನೆ ಪರರ ಸುಖ ದುಃಖವ
ಕೋಪಿ ಬಲ್ಲನೆ ಶಾಂತ ಸುಗುಣದ ಘನವ || ಪ ||
ಕತ್ತೆ ಬಲ್ಲುದೆ ಹೊತ್ತ ಕಸ್ತೂರಿಯ ಪರಿಮಳವ
ಮೃತ್ಯು ಬಲ್ಲಳೆ ವೇಳೆ ಹೊತ್ತೆಂಬುದ |
ತೊತ್ತು ಬಲ್ಲಳೆ ಮಾನಾಪಮಾನವೆಂಬುದನು
ಮತ್ತೆ ಬಲ್ಲುದೆ ಬೆಕ್ಕು ಹರಿಯ ಮೀಸಲವ ||೧||
ಹೇನು ಬಲ್ಲುದೆ ಮುಡಿದ ಹೂವಿನ ಪರಿಮಳವ
ಶ್ವಾನ ಬಲ್ಲುದೆ ರಾಗ ಭೇದಂಗಳ |
ಮೀನು ಬಲ್ಲುದೆ ನೀರು ಸೌಳು ಸ್ವಾದೆಂಬುದನು
ಹೀನ ಬಲ್ಲನೆ ಸುಗುಣ ದುರ್ಗುಣವನು ||೨||
ಬಾಳೆ ಬಲ್ಲುದೆ ಮರಳಿ ಫಲವಾಗೊ ಸುದ್ದಿಯನು
ಸೂಳೆ ಬಲ್ಲಳೆ ಗೆಳೆಯಗಿಹ ಬಡತನ |
ಕೇಳ ಬಲ್ಲನೆ ಕಿವುಡನೇಕಾಂತ ಮಾತುಗಳ
ಹೇಳ ಬಲ್ಲನೆ ಮೂಕ ಕನಸು ಕಂಡುದನು || ೩ ||
ಕಾಗೆ ಬಲ್ಲುದೆ ಒಳ್ಳೆ ಕೋಗಿಲೆಯ ಸ್ವರವನು
ಗೂಗೆ ಬಲ್ಲುದೆ ಹಗಲ ಹರಿದಾಟವ |
ಜೋಗಿ ಬಲ್ಲನೆ ಮನೆಯೊಳಿಲ್ಲ ಉಂಟೆಂಬುದನು
ರೋಗಿ ಬಲ್ಲನೆ ಮೃಷ್ಟಾನ್ನದ ರುಚಿಯನು || ೪ ||
ಹೇಡಿ ಬಲ್ಲನೆ ರಣದ ಸಾಹಸದ ಶೌರ್ಯವನು
ಕೋಡಗವು ಬಲ್ಲುದೆ ರತ್ನದ ಬೆಲೆಯನು |
ಬೇಡಿದುದ ಕೊಡಲು ಪುರಂದರ ವಿಠಲನಲ್ಲದೆ
ನಾಡದೈವಗಳೇನು ಕೊಡಬಲ್ಲವೋ ||೫||
pApi ballane parara suKa duHKava
kOpi ballane SAMta suguNada Ganava || pa ||
katte ballude hotta kastUriya parimaLava
mRutyu ballaLe vELe hotteMbuda |
tottu ballaLe mAnApamAnaveMbudanu
matte ballude bekku hariya mIsalava ||1||
hEnu ballude muDida hUvina parimaLava
SvAna ballude rAga BEdaMgaLa |
mInu ballude nIru sauLu svAdeMbudanu
hIna ballane suguNa durguNavanu ||2||
bALe ballude maraLi PalavAgo suddiyanu
sULe ballaLe geLeyagiha baDatana |
kELa ballane kivuDanEkAMta mAtugaLa
hELa ballane mUka kanasu kaMDudanu || 3 ||
kAge ballude oLLe kOgileya svaravanu
gUge ballude hagala haridATava |
jOgi ballane maneyoLilla uMTeMbudanu
rOgi ballane mRuShTAnnada ruciyanu || 4 ||
hEDi ballane raNada sAhasada Sauryavanu
kODagavu ballude ratnada beleyanu |
bEDiduda koDalu puraMdara viThalanallade
nADadaivagaLEnu koDaballavO ||5||
Leave a Reply