Indina dina sudinavayitu

Composer : Shri Purandara dasaru

By Smt.Shubhalakshmi Rao

Shri Surendra Tirtha – 1504 – 1575
Ashrama Gurugalu : Sri Raghunandana Teertharu
Ashrama Shishyaru : Sri Vijayeendra Theertharu
Aradhana Tithi : Pushya Shukla Dwadashi
यश्चकारोपवासेन त्रिवारं भूप्रदक्षिणम् ।
तस्मै नमो यतीन्द्राय श्रीसुरेन्द्रतपस्विने ॥
ಯಶ್ಚಕಾರೋಪವಾಸೇನ ತ್ರಿವಾರಂ ಭೂಪ್ರದಕ್ಷಿಣಮ್ |
ತಸ್ಮೈ ನಮೂ ಯತೀಂದ್ರಾಯ ಶ್ರೀಸುರೇಂದ್ರ ತಪಸ್ವಿನ್ ||


ಇಂದಿನ ದಿನ ಸುದಿನವಾಯಿತು |ಪ|
ಇಂದಿರೇಶ ಮೂಲರಾಮಚಂದ್ರನ ಪದಕಮಲಗಳ-ಸು-
| ರೇಂದ್ರತೀರ್ಥ ತೋರಿಸೆ |ಅ.ಪ|

ಈತನ ಪದಕಮಲಗಳ ವಿಧಾತ ತನ್ನ ಸದನದೊಳಗೆ |
ಸೀತೆಯ ಸಹ ಪೂಜಿಸಿ ನರನಾಥ ಇಕ್ಷ್ವಾಕುನಿಗೆ ಇತ್ತ |
ಆತನನೂಸರಿಸಿದ ನೃಪರು ಪ್ರೀತಿಯಿಂದಲರ್ಚಿಸಿ ರಘು- |
ನಾಥ ವೇದಗರ್ಭಗಿತ್ತ ನಾಥನ ಮೂರ್ತಿಯನು ಕಂಡು [೧]

ಗಜಪತಿಯ ಭಂಡಾರದಲಿ ಅಜನು ಪೂಜಿತನಾಗಿ ಭೂ – |
ಮಿಜೆ ಸಹಿತ ಶ್ರೀರಾಮನಿರಲು ನಿಜಜ್ಞಾನದಿಂದ ತಿಳಿದಾಗ ||
ಸುಜನ ಗುರುವೆಂದೆನಿಸುವ ನಮ್ಮ ಭಜಕ ಪಾಲಕ ನರಹರಿಮುನಿಪ
ಈ ಜಗವರಿಯೆ ಶ್ರೀ ಅಂಬುಜ ಲೋಚನ ಮೂರುತಿಯ ಕಂಡು [೨]

ಅಂದವುಳ್ಳ ಮೂಲರಾಮಚಂದ್ರನ ಪದಯುಗಳನು |
ವೃಂದಾರಕೇಂದ್ರವೆನಿಸುವಾನಂದ ತೀರ್ಥ ಮುನಿಗಳ
ನಂದದಿಂದಲರ್ಚಿಸಿ ನಮ್ಮನು ಹೊಂದಿದ ಶಿಶ್ಯರ ಕರದ
ದಯದಿಂದ ನಿಜಾನ್ವಯದೊಳಿಟ್ಟ
ಪುರಂದರ ವಿಠಲನ ಕಂಡು [೩]


iMdina dina sudinavAyitu |pa|
iMdirESa mUlarAmacaMdrana padakamalagaLa-su-
| rEMdratIrtha tOrise |a.pa|

Itana padakamalagaLa vidhAta tanna sadanadoLage |
sIteya saha pUjisi naranAtha ikShvAkunige itta |
AtananUsarisida nRuparu prItiyiMdalarchisi raGu- |
nAtha vEdagarBagitta nAthana mUrtiyanu kaMDu [1]

gajapatiya BaMDAradali ajanu pUjitanAgi BU – |
mije sahita shrIrAmaniralu nijaj~jAnadiMda tiLidAga ||
sujana guruveMdenisuva namma bhajaka pAlaka naraharimunipa
ee jagavariye shrI aMbuja lOchana mUrutiya kaMDu [2]

aMdavuLLa mUlarAmacaMdrana padayugaLanu |
vRuMdArakEMdravenisuvAnaMda tIrtha munigaLa
naMdadiMdalarchisi nammanu hoMdida shishyara karada
dayadiMda nijAnvayadoLiTTa
puraMdara viThalana kaMDu [3]

Leave a Reply

Your email address will not be published. Required fields are marked *

You might also like

error: Content is protected !!