Composer : Shri Abhinavapranesha vittala
Shri Suyameendra Teertharu – 1933-1967
Aradhana – Pushya Shukla Dwiteeya
Vrundavana – Mantralaya
suKatIrthamataabdhIMduM sudhIMdrasutasEvakaM |
sudhaaparimaLaasaktaM suyamIMdraguruM bhajE |
सुखतीर्थमताब्धींदुं सुधींद्रसुतसेवकं ।
सुधापरिमळासक्तं सुयमींद्रगुरुं भजे ।
ತೆರಳಿದರು ತೆರಳಿದರು ಹರಿಯ ಪುರಕೆ |
ವರ ಸುವ್ರತಿಗಳಾದ ಸುಯಮೀಂದ್ರ ಗುರುವರರು || ಪ. ||
ಗುರು ರಾಘವೇಂದ್ರ ರಾಯರ ದಿವ್ಯ ಪೀಠದಲಿ |
ವರುಷ ವೇದಾಂತ ಸಾಮ್ರಾಟರೆನಿಸಿ |
ಮರುತ ಮತ ಸಿಂಧುವನು ಧರೆಯೊಳೆಲ್ಲವ ಮೆರೆಸಿ |
ಶರಣ ಜನ ಮಂದಾರನೆನಿಸಿ ಶೋಭಿಸಿದವರು || ೧ ||
ಪ್ರಾಣ ಮತ ಶರಧಿಗೆ ಯಾಮೀರರೆಂದೆನಿಪ |
ಜ್ಞಾನಿ ವರ್ಯರು ಹರಿಯ ಕರೆಯಾಲಿಸೀ |
ಧೇನಿಸುತ ಗುರು ಚರಣ ರಾಜ ನಗರವ ತ್ಯಜಿಸಿ |
ಸಾನುರಾಗದಿ ಮಂತ್ರ ಮಂದಿರಕೆ ಬಂದವರು || ೨ ||
ಪರಿಭವಾಬ್ಧಿದ ಪುಷ್ಯ ಗುರುವಾರ ಸೀತ ದ್ವಿತೀಯಾ |
ಪರಿಮಳಾಚಾರ್ಯರ ಚರಣ ಸನ್ನಿಧಿಯಲ್ಲಿ |
ಶರ ಧನುರ್ಧಾರಿ ಶ್ರೀ ಮೂಲರಾಮನ ತುತಿಸಿ |
ಶರಜಾಧವಭಿನವ ಪ್ರಾಣೇಶವಿಠ್ಠಲೆನುತ || ೩ ||
teraLidaru teraLidaru hariya purake |
vara suvratigaLAda suyamIMdra guruvararu || pa. ||
guru rAGavEMdra rAyara divya pIThadali |
varuSha vEdAMta sAmrATarenisi |
maruta mata siMdhuvanu dhareyoLellava meresi |
SaraNa jana maMdAranenisi SOBisidavaru || 1 ||
prANa mata Saradhige yAmIrareMdenipa |
j~jAni varyaru hariya kareyAlisI |
dhEnisuta guru caraNa rAja nagarava tyajisi |
sAnurAgadi maMtra maMdirake baMdavaru || 2 ||
pariBavAbdhida puShya guruvAra sIta dvitIyA |
parimaLAcAryara caraNa sannidhiyalli |
Sara dhanurdhAri SrI mUlarAmana tutisi |
SarajAdhavaBinava prANESaviThThalenuta || 3 ||
Leave a Reply