Composer : Shri Harapanahalli Bheemavva
ಉಡಿಯ ತುಂಬಿರೆ ನಮ್ಮ ಉಡುರಾಜಮುಖಿಗೆ
ಕಡಲೆ ಕೊಬ್ಬರಿ ಬಟ್ಟಲೊಳು ಬಾಳೆ ಫಲಗಳ ||ಪ||
ಜಂಬು ನೇರಲಗೋನೆ ಜಾಂಬೂ ಫಲಗಳು
ನಿಂಬೆ ದಾಳಿಂಬ್ರ ಔದುಂಬ್ರ ಫಲಗಳು ||೧||
ಉತ್ತತ್ತಿ ದ್ರಾಕ್ಷಿ ಕಿತ್ತಳೆ ಸೀತಾ ಫಲವು
ಅಕ್ಕಿ ಅಂಜೂರ ಉತ್ತತ್ತಿ ಫಲಗಳು||೨||
ಶ್ರೇಷ್ಠ ಭೀಮೇಶ ಕೃಷ್ಣನ ಪಟ್ಟದರಸಿಗೆ
ಹಚ್ಚಿ ಕುಂಕುಮ ವೀಳ್ಯ ಕೊಟ್ಟು ರುಕ್ಮಿಣಿಗೆ ||೩||
uDiya tuMbire namma uDurAjamuKige
kaDale kobbari baTTaloLu bALe PalagaLa ||pa||
jaMbu nEralagOne jAMbU PalagaLu
niMbe dALiMbra auduMbra PalagaLu ||1||
uttatti drAkShi kittaLe sItA Palavu
akki aMjUra uttatti PalagaLu||2||
SrEShTha BImESa kRuShNana paTTadarasige
hacci kuMkuma vILya koTTu rukmiNige ||3||
Leave a Reply