Prarthana suladi 63 – Vijayadasaru

Smt.Nandini Sripad

ಶ್ರೀವಿಜಯದಾಸಾರ್ಯ ವಿರಚಿತ
ಪ್ರಾರ್ಥನಾ ಸುಳಾದಿ
(ಉತ್ತುಮ ಭಕ್ತರ ಕೂಡಾಡುವ
ಮತಿ ಕೊಡೆಂದು ಪ್ರಾರ್ಥನೆ.)
ರಾಗ: ವರಾಳಿ

ಧ್ರುವತಾಳ

ಇದು ನಿನಗೆ ಆರಾಧನೆ ಇದು ನಿನಗೆ ಪೂಜೆಯೆ
ಇದು ನಿನಗೆ ಭಜನಿಯೆ ಇದು ನಿನಗೆ ಅರ್ಚನೆ
ಇದು ನಿನಗೆ ವಂದನೆ ಇದು ನಿನಗುಪಚಾರ
ಇದರಿಂದ ನಿನಗಿಂದು ಅಧಿಕ ಮನ್ನಣೆ ಬಂದು
ಇದು ಏನು ಆದಾನಾದಿ ಕರ್ತ ಕಾರ್ಯ
ಮುದದಿಂದ ವಿದುರನ್ನ ಸದನದಲಿ ಬಂದು ಕುಡತಿ
ಮೆದಿಯೆ ಪಾಲಿಗೆ ಕ್ಷುಧಿಯ ಕಳೆದು ಮಹ
ಉದಧಿಯ ಮಾಡಿ ತೋರಿದ ಭಕ್ತರ ಪ್ರೀಯ
ಮೊದಲಿಗೆ ಪದುಮಸದನೆ ವಿಧಿ ಶಿವ ಉಳಿದವರು
ಸದಮಲ ತೃಪ್ತನೆಂದು ಪದೊಪದಿಗೆ ಪೊಗಳೆ
ಹೃದಯದೊಳಗಾನಂದ ಉದಧಿ ತರಂಗದಲ್ಲಿ
ಕದಲಲಾರದೆ ಮೋದದಲಿ ಈಸುತಿಪ್ಪದು
ಉದರಗೋಸುಗ ಎರಡು ಪದಗಳ ಪೇಳಿಕೊಂಡು
ಬದುಕುವ ಮನುಜ ಇತ್ತಲದರಿಂದಲೇನಾಹದೊ
ಪದುಮಗರ್ಭನ ಪೆತ್ತ ವಿಜಯವಿಟ್ಠಲರೇಯ
ಉದಧಿಯನು ಮಥಿಸಿ ಸುಧೆಯ ನೆರೆದ ದೇವ || ೧ ||

ಮಟ್ಟತಾಳ

ಜಲಜನಾಭನ ಸೇವೆ ಬಲು ಸುಲಭಾ ಬಲು ಸುಲಭ
ಕಲಿಯುಗದೊಳಗೆಂದು ತಿಳಿದು ಸಜ್ಜನರು
ತಿಳಿದು ಪೇಳಲು ಅದೆ ನಿಜವೆಂದು
ಸಲೆ ನಂಬಿದೆನಯ್ಯಾ ಸಲೆ ನಂಬಿದೆನಯ್ಯಾ
ಜಲಜ ತುಲಸಿ ನಾಮಾವಳಿ ಹರಿವಾಸರ
ಹಲವು ಬಗೆಯಿಂದ ತಿಳಿದು ಮಾಡಲು ಮಹ –
ಫಲವಾಹುದು ಗತಿಗೆ ಅಳಿಯದು ಸತ್ಪುಣ್ಯ ನಿಲವರವಕ್ಕುವದು
ಒಲಿಸಿದವರ ಮುಂದೆ ಸುಳಿವ ವಿಜಯವಿಟ್ಠಲ
ಬಳಲಿಸುವ ಭವದ ಸುಳಿಯಿಂದಲಿ ತೆಗಿಯೊ || ೨ ||

ತ್ರಿವಿಡಿತಾಳ

ಜಲದೊಳಗೆ ಭಾಂಡವ ಮುಳುಗಿಸಿ ಬರಿ ಕೈಯ್ಯಾ
ಜಲ ಪೋಗಿ ಬರಿದೆನಿಸುವದೇನೊ ಎಂದಿಗೂ
ಜಲಜನಾಭನೆ ನಿನ್ನ ಚಲುವ ಚರಣವ ಹಂ –
ಬಲ ಮಾಡಿ ಕಲಕಾಲ ನಂಬೀದ ಮನುಜಂಗೆ
ಅಳಿಯಬಲ್ಲದೆ ಜ್ಞಾನ ದಿನ ಪ್ರತಿದಿನದಲ್ಲಿ
ಬೆಳೆವದು ಒಂದಕ್ಕಾನಂತ ವೆಗ್ಗಳವಾಗಿ
ತೊಲಗದೆ ಇಹುದು ಪೊಂದಿ ಪ್ರಕಾಶಿಸುತ
ಬೆಳಗುವಂದಕೆ ತರಲು ಹಲವು ದ್ರವ್ಯಗಳು ಕಂ –
ಗಳಿಗೆ ತೋರಿದಂತೆ ನಿನ್ನ ಕರುಣರಸ
ಪ್ರಳಯರಹಿತ ನಮ್ಮ ವಿಜಯವಿಟ್ಠಲ ಎನಗೆ
ಸುಲಭ ಸೇವೆಯಿದು ಇನ್ನೊಂದು ಪಾಲಿಸೊ || ೩ ||

ಅಟ್ಟತಾಳ

ನಿನ್ನವನೆನಿಪುದು ಎರೆದ ನಿರ್ಮಳ ತೀರ್ಥ
ನಿನ್ನವರು ನಿನಗಿತ್ತ ಕುಸುಮ ತುಲಸಿ
ನಿನ್ನವರೆನಿಪರು ಎತ್ತಿದ ಧೂಪವು
ನಿನ್ನವರು ನಿನಗಿತ್ತ ಚರುವನ್ನ
ನಿನ್ನವರು ನಿನಗೆತ್ತಿದ ಆರುತಿ
ನಿನ್ನವರು ನಿನಗೆ ಮಾಡಿದ ಪೂಜೆ
ಕಣ್ಣಿನಿಂದಲಿ ನೋಡಿ ಸಂತೋಷಬಟ್ಟು ಪಾ –
ವನ್ನನಾಗುವಂತೆ ಕರುಣಿಸು ದೇವೇಶ
ಪನ್ನಗಮಥನ ಶ್ರೀವಿಜಯವಿಟ್ಠಲರೇಯ
ಎನ್ನ ಸಾಧನ ಯಿನಿತಲ್ಲದೆ ಮಿಗಿಲಿಲ್ಲ || ೪ ||

ಆದಿತಾಳ

ಒಂದು ದಿವಸದೊಳಗೆ ಮಂದಮತಿ ನಾನು
ಬಿಂದು ಜಲ ತುಲಸಿ ತಂದು ಏರಿಸಿ ಗೋ –
ವಿಂದ ನಿನ್ನ ದಿವಸಾನಂದವಾಗಿ ಚರಿಸಾ
ಲಂದವಾಗಿದನೆ ಬೇಕೆಂದು ಕೈಕೊಳುತ ಭವ –
ಬಂಧನ ಪರಿಹರಿಸಿ ಒಂದಕ್ಕೊಂದು ಅಧಿಕವೆನಿಸಲಿಬೇಕು
ತಂದೆ ನಿನ್ನಯ ಪಾದದ್ವಂದ್ವ ಸ್ಮರಣೆಯಿತ್ತು
ಮಂದರಧರದೇವ ವಿಜಯವಿಟ್ಠಲ ನೀನೆ
ಬಂದು ಬಾಂಧವನಾಗೆ ಸಂದೇಹ ಪರಿಹಾರ || ೫ ||

ಜತೆ

ಉತ್ತಮರ ಕೂಡಾಡುವ ಮತಿಯಿತ್ತು
ಉತ್ತಮಗತಿ ಈಯೋ ವಿಜಯವಿಟ್ಠಲರೇಯ ||


SrIvijayadAsArya viracita
prArthanA suLAdi
(uttuma Baktara kUDADuva
mati koDeMdu prArthane.)
rAga: varALi

dhruvatALa

idu ninage ArAdhane idu ninage pUjeye
idu ninage Bajaniye idu ninage arcane
idu ninage vaMdane idu ninagupacAra
idariMda ninagiMdu adhika mannaNe baMdu
idu Enu AdAnAdi karta kArya
mudadiMda viduranna sadanadali baMdu kuDati
mediye pAlige kShudhiya kaLedu maha
udadhiya mADi tOrida Baktara prIya
modalige padumasadane vidhi Siva uLidavaru
sadamala tRuptaneMdu padopadige pogaLe
hRudayadoLagAnaMda udadhi taraMgadalli
kadalalArade mOdadali Isutippadu
udaragOsuga eraDu padagaLa pELikoMDu
badukuva manuja ittaladariMdalEnAhado
padumagarBana petta vijayaviTThalarEya
udadhiyanu mathisi sudheya nereda dEva || 1 ||

maTTatALa

jalajanABana sEve balu sulaBA balu sulaBa
kaliyugadoLageMdu tiLidu sajjanaru
tiLidu pELalu ade nijaveMdu
sale naMbidenayyA sale naMbidenayyA
jalaja tulasi nAmAvaLi harivAsara
halavu bageyiMda tiLidu mADalu maha –
PalavAhudu gatige aLiyadu satpuNya nilavaravakkuvadu
olisidavara muMde suLiva vijayaviTThala
baLalisuva Bavada suLiyiMdali tegiyo || 2 ||

triviDitALa

jaladoLage BAMDava muLugisi bari kaiyyA
jala pOgi baridenisuvadEno eMdigU
jalajanABane ninna caluva caraNava haM –
bala mADi kalakAla naMbIda manujaMge
aLiyaballade j~jAna dina pratidinadalli
beLevadu oMdakkAnaMta veggaLavAgi
tolagade ihudu poMdi prakASisuta
beLaguvaMdake taralu halavu dravyagaLu kaM –
gaLige tOridaMte ninna karuNarasa
praLayarahita namma vijayaviTThala enage
sulaBa sEveyidu innoMdu pAliso || 3 ||

aTTatALa

ninnavanenipudu ereda nirmaLa tIrtha
ninnavaru ninagitta kusuma tulasi
ninnavareniparu ettida dhUpavu
ninnavaru ninagitta caruvanna
ninnavaru ninagettida Aruti
ninnavaru ninage mADida pUje
kaNNiniMdali nODi saMtOShabaTTu pA –
vannanAguvaMte karuNisu dEvESa
pannagamathana SrIvijayaviTThalarEya
enna sAdhana yinitallade migililla || 4 ||

AditALa

oMdu divasadoLage maMdamati nAnu
biMdu jala tulasi taMdu Erisi gO –
viMda ninna divasAnaMdavAgi carisA
laMdavAgidane bEkeMdu kaikoLuta Bava –
baMdhana pariharisi oMdakkoMdu adhikavenisalibEku
taMde ninnaya pAdadvaMdva smaraNeyittu
maMdaradharadEva vijayaviTThala nIne
baMdu bAMdhavanAge saMdEha parihAra || 5 ||

jate

uttamara kUDADuva matiyittu
uttamagati IyO vijayaviTThalarEya ||

Leave a Reply

Your email address will not be published. Required fields are marked *

You might also like

error: Content is protected !!