Sadhana suladi 82 – Vijayadasaru

Smt.Nandini Sripad

ಶ್ರೀವಿಜಯದಾಸಾರ್ಯ ವಿರಚಿತ
ಸಾಧನ ಸುಳಾದಿ
(ಜನರ ಆಭಾಸ ತಾಳ್ಮೆ, ಪೂರ್ವಿಜರ ಕವನ
ನಿಂದಾವರ್ಜ, ಶ್ರೀಪಾದ ರತಿ.)
ರಾಗ: ಭೈರವಿ

ಧ್ರುವತಾಳ

ಇಂದೆ ಆಭಾಸವಾಗಲಿ ನಾಳೆ ಆಭಾಸವಾಗಲಿ
ಇಂದೆ ನಾಳೆ ಎಂಬೊ ಚಿಂತೆ ಯಾತಕೆ
ಒಂದಕ್ಕನಂತವಾಗಿ ಕಾಲ ಕ್ಷಣದಲಿ
ಮುಂದೆ ಆಭಾಸವಾಗಲಿ ಇಂದೆ
ಪೊಂದಿದವರೆಲ್ಲ ತೊಲತೊಲಗಿ ಪೋಗಲಿ
ವಂದಿಸುವ ಜನ ನಿಂದೆಯ ಮಾಡಲಿ
ಬಂಧು ಬಳಗವು ತೊರೆದು ಬಿಡಲಿ
ಇಂದೆ ಆಭಾಸವಾಗಲಿ
ನಿಂದಲ್ಲಿ ಕುಳಿತಲ್ಲಿ ಎಲ್ಲೆಲ್ಲಿ ಇದ್ದರು
ಮಂದಿಗಳೆಲ್ಲ ತಮಗೆ ಸರಿ ಸರಿ
ಬಂದಂತೆ ಪೇಳಲಿ ಕೇಳಲಿ ಕಿವಿಗೊಟ್ಟು
ಇಂದೆ ಅಭಾಸವಾಗಲಿ
ಕುಂದುಗಳಾರಿಗೆ ಕೊರತೆಗಳಾರಿಗೆ
ನಂದವಾರಿಗೆ ಆನಂದವಾರಿಗೆ
ಸಂದೇಹವಿಲ್ಲ ಸುಖ ಸಂದೋಹ ಎನಗುಂಟು
ಇಂದಿರಾಪತಿ ಒಲಿದದ್ದೆ ವಲ್ಲೆ –
ನೆಂದರೆ ಬಿಡದು ಬರಿದೆ ವ್ಯಾಕುಲ ಮನಕೆ
ತಂದುಕೊಂಡದರಿಂದ ಅಂಥ ಜ್ಞಾನವಲ್ಲದೆ
ಇಂದೆ ಆಭಾಸವಾಗಲಿ ಗಂಧ –
ಗಂಧವೆಲ್ಲ ಸಮವಾಗಿ ಇಪ್ಪೋದು
ಎಂದೆಂದಿಗೆ ಪ್ರಾರಬ್ಧ ತಪ್ಪದು
ಹಂದಿ ಹಸ್ತಿಯ ಜನುಮ ಬರಲಿ ಬರಲಿ
ಮಂದಿಗ್ಯಾತಕೆ ಅವರಿವರ ಚಿಂತೆ
ಅಂದವಾಗಿ ಶ್ರೀಹರಿಯು ಕೊಟ್ಟದು ಉಂಡು
ಚಂದ ಚಂದ ಕರ್ಮ ಮಾಡಬಾರದೆ
ಇಂದೆ ಆಭಾಸವಾಗಲಿ ಸಿಂಧುಶಯನ
ಸಿಂಧುಜನಕ ಕರುಣಾಸಿಂಧು ರಂಗನ ಪಾದ
ದ್ವಂದ್ವಾರವಿಂದ ಇಂದಿರೆ ಕಾಣಳು
ಮಂದಮತಿ ನರನೆಂತು ಕಾಂಬುವಾ
ಎಂದೆಂಬೋ ಸಿದ್ಧವೆ ಪ್ರಸಿದ್ಧ
ಮಂದರಿಗೆ ತಕ್ಕ ಮತಿ ಕೊಡುವನು
ಚಂದಿರವದನ ನಮ್ಮ ವಿಜಯವಿಟ್ಠಲನ್ನ
ಪೊಂದಿ ಕೊಂಡಾಡುವಂಗೆ ಏನಾದರೂ ವಪ್ಪೆ || ೧ ||

ಮಟ್ಟತಾಳ

ವರುಷ ಒಂದೆರಡು ಹನ್ನೆರಡು ಎಂದು
ಪರಿಮಿತವನೆ ಕಟ್ಟಿ ಅನ್ಯರ ಮುಂದುಚ್ಚರಿಸುವ ಬಗೆ ಏನು
ಅರಘಳಿಗೆಯೊಳಗೆ ಮಾನವಗಾಗದ
ಪರಿಪರಿಲಪಹಾಸ ಬಂದೊದಗಲಿ ಇಂದೆ ಸ್ವೀ –
ಕಾರ ಮಾಡುವನಾರು ಒಲ್ಲೆನೆಂಬುವನಾರು
ಪರಮ ಸೌಖ್ಯವೆ ಸರಿ ಪ್ರತಿಕೂಲ ಎನಗಲ್ಲ
ಶರಣರ ಪರಿಪಾಲ ವಿಜಯವಿಟ್ಠಲರೇಯನ
ಚರಣ ನೆನಹು ಒಂದೆ ಮನದೊಳಿದ್ದರೆ ಸಾಕು || ೨ ||

ತ್ರಿವಿಡಿತಾಳ

ಮೊದಲೆ ಫಣಿಯಲಿ ಬೊಮ್ಮ ಬರದು ಇದ್ದ ಬರಹ
ಉದರಿಸಿಕೊಂಡರೆ ಪೋಗುವದೆ
ಕುದಿದು ವ್ಯರ್ಥ ಪರರ ಅತಿಶಯವನೆ ಕಂಡು
ಎದೆ ಬಾಯಿ ಒಣಗಿ ದುಃಶ್ಚಿತ್ತ ವೃತ್ತಿಯಲಿ
ಪದೋಪದಿಗೆ ನಿತ್ಯಯೋಚನೆ ಮಾಡಿ ಇ –
ಲ್ಲದ ಮಾತಿನಿಂದಲಿ ಭ್ರಮಣಗೆಟ್ಟು
ಮುದದಿಂದ ನಮಗಿದ್ದ ದಿನವೆ ಎಣಿಸಿಕೊಳ್ಳದೆ
ವಿಧಿಯು ಬೆನ್ನಿಲಿ ಕಾದುದು ನೋಡದೆ
ಉದರದೊಳಗೆ ಬಿದ್ದ ಅನ್ನ ಸಾರ್ಥಕ ಮಾ –
ಡದೆ ಕೆಡುವರೈ ತಿಳಿಯದಲೆ
ನದಿಯ ಡೊಂಕನೆ ನೋಡಿ ಪಾತ್ರಿಯೊಳಗೆ ಯಿದ್ದ
ಉದಕ ವುಲ್ಲಂಘಿಸಿ ಬರುವನಂತೆ
ಪದಗಳು ಡೊಂಕಾಗಿ ತೊರದೋದಿಪರೆ
ಅದರ ಅನ್ವಯವನ್ನು ತೋರದಿರಲು
ಇದು ಎಲ್ಲಿ ಇಲ್ಲೆಂದು ಕಂಡಂತೆ ಮಾತು ಪೇ –
ಳಿದವಂಗೆ ಏನೆಂಬೆನಯ್ಯಾ ಸತತ
ಪದುಮನಾಭನು ವೊಲಿದು ಪಿರಿಯರಿಂದಲಿ ಅಂದು
ಪದವ ಪೇಳಿಸಿದ್ದು ಸತ್ಯವೆಂದು
ಹೃದಯದಲ್ಲಿ ತಿಳಿದು ಅವರ ಕಿಂಕರನಾಗಿ
ವಿಧಿ ನಿಷೇದ ವಾಕ್ಯ ನುಡಿದದ್ದೆಲ್ಲ
ಪದವಿಗೆ ಪಾವಟಿಗೆ ಎನಗಾಗಲಿ ಅವಗಾ –
ಗದೆ ಪೋದರೆ ಇತ್ತ ಯತ್ನವೇನು
ಕುದುರಿಯ ಮೇಲೆ ಕೋಪದಿ ಪೋಗಿ ರಾಸಭವೇ –
ರಿದ ತೆರದಿ ಕಾಣೋ ದುರುಳರಿಗೆ
ನಿಧಿಯ ಮೇಲೆ ಮುನಿದು ತಿಪ್ಪಿ ಮೇಲಿನ ಬೂದಿ
ಸದನದೊಳಗೆ ತಂದು ಹಾಕಿದಂತೆ
ಇದರಿಂದೇನು ಫಲವಾಗುವದೋ ತಮ್ಮ
ವದನ ಬರಿದಲ್ಲದೆ ಲಾಭವಿಲ್ಲಾ
ಮದನನಯ್ಯನೆ ನಮ್ಮ ವಿಜಯವಿಟ್ಠಲರೇಯನ
ಪದವ ಭಜಿಸಿ ಹದುಳ ಪಡಕೊಂಡವನೆ ಧನ್ಯ || ೩ ||

ಅಟ್ಟತಾಳ

ಜನುಮಾಂತರದಲ್ಲಿ ಮಾಡಿದ ಬಗೆ ಕರ್ಮ
ಉಣಿಸದೆ ಬಿಡನಯ್ಯಾ ದೇವದೇವೋತ್ತಮ
ದಿನದಿನದಲಿ ಜೀವ ಆವಾವದಾದರು
ಉಣಬೇಕು ಉಂಡು ತೀರಿಸದಲೆ ತಪ್ಪದು
ಗುಣವಾಗಲಿ ಆಗದೆ ಪೋಗಲಿ ಬಹು
ಜನರಿಗೆ ವಿರುದ್ಧವಾಗಿ ತೋರಲಿ ನಿತ್ಯ
ತನುಮನ ವಾಕ್ಯದಿಂದಲಿ ಬಂದವೆಲ್ಲ
ಅನುಭವಿಸಬೇಕು ಆರಗೊಡವಿ ಯಾಕೆ
ಮನುಜರು ಭಗವಂತ ಸ್ವಾತಂತ್ರಜ್ಞಾನವ
ಎಣಿಸದೆ ಈ ಪರಿ ಉತ್ತರ ನುಡಿವರು
ದನುಜಮರ್ದನ ಸಿರಿ ವಿಜಯವಿಟ್ಠಲರೇಯನು
ಘನವಾಗಿ ಪಾಲಿಸೆ ನರ ಮುನಿದರೇನು || ೪ ||

ಆದಿತಾಳ

ಆರತಿಶಯವಾಗಿ ಬದುಕಿದರೇನವಗೆ
ಆರು ದುರ್ಜನರಾಗಿ ತಿರುಗಿದರೇನವಗೆ
ಪಾರಮಾರ್ಥಿಕವಾಗಿ ಇರಬಾರದೆಂದೆಡೆ
ಕ್ರೂರರ ಸ್ವಭಾವ ತೊಲಗುವದೇನೊ ವಿ –
ಸ್ತಾರವಾಗಿ ಸಜ್ಜನರಲ್ಲಿ ಇದ್ದರು
ದೂರದೆ ಬಿಡನಯ್ಯಾ ಬುದ್ಧಿ ಪಲ್ಲಟನಾಗಿ
ಶಾರೀರದೊಳು ಸಮಗ್ರ ಕುಹಕತನದಿಂದ
ಧಾರುಣಿಯಲ್ಲಿ ತಿರುಗಿ ಹೊತ್ತು ಪೋಗಾಡುವ
ಪಾರುಮುಟ್ಟನು ಕಾಣೊ ಮುಣಗುವ ಭವವೆಂಬೊ
ವಾರಿಧಿಯೊಳು ಬಿದ್ದು ಭೀತಿ ಬಡುತಲಿ
ಬೇರರಸಿ ಕಿತ್ತಿ ಭವವ ಕಳೆವ ದೇವ
ಭೂರಮಣ ವಿಜಯವಿಟ್ಠಲರೇಯನ
ಸೇರಿಕೊಂಡು ಸಾಧನೆ ಮಾಡದೆ ಬರಿದಾಹ || ೫ ||

ಜತೆ

ಆಭಾಸವಾಗಲಿ ಅಡಿಗಡಿಗೆ ಜನರಿಂದ
ಲಾಭವೆ ಏನಗದು ವಿಜಯವಿಟ್ಠಲನಿಂದ ||


SrIvijayadAsArya viracita
sAdhana suLAdi
(janara ABAsa tALme, pUrvijara kavana
niMdAvarja, SrIpAda rati.)
rAga: Bairavi

dhruvatALa

iMde ABAsavAgali nALe ABAsavAgali
iMde nALe eMbo ciMte yAtake
oMdakkanaMtavAgi kAla kShaNadali
muMde ABAsavAgali iMde
poMdidavarella tolatolagi pOgali
vaMdisuva jana niMdeya mADali
baMdhu baLagavu toredu biDali
iMde ABAsavAgali
niMdalli kuLitalli ellelli iddaru
maMdigaLella tamage sari sari
baMdaMte pELali kELali kivigoTTu
iMde aBAsavAgali
kuMdugaLArige korategaLArige
naMdavArige AnaMdavArige
saMdEhavilla suKa saMdOha enaguMTu
iMdirApati olidadde valle –
neMdare biDadu baride vyAkula manake
taMdukoMDadariMda aMtha j~jAnavallade
iMde ABAsavAgali gaMdha –
gaMdhavella samavAgi ippOdu
eMdeMdige prArabdha tappadu
haMdi hastiya januma barali barali
maMdigyAtake avarivara ciMte
aMdavAgi SrIhariyu koTTadu uMDu
caMda caMda karma mADabArade
iMde ABAsavAgali siMdhuSayana
siMdhujanaka karuNAsiMdhu raMgana pAda
dvaMdvAraviMda iMdire kANaLu
maMdamati naraneMtu kAMbuvA
eMdeMbO siddhave prasiddha
maMdarige takka mati koDuvanu
caMdiravadana namma vijayaviTThalanna
poMdi koMDADuvaMge EnAdarU vappe || 1 ||

maTTatALa

varuSha oMderaDu hanneraDu eMdu
parimitavane kaTTi anyara muMduccarisuva bage Enu
araGaLigeyoLage mAnavagAgada
pariparilapahAsa baMdodagali iMde svI –
kAra mADuvanAru olleneMbuvanAru
parama sauKyave sari pratikUla enagalla
SaraNara paripAla vijayaviTThalarEyana
caraNa nenahu oMde manadoLiddare sAku || 2 ||

triviDitALa

modale PaNiyali bomma baradu idda baraha
udarisikoMDare pOguvade
kudidu vyartha parara atiSayavane kaMDu
ede bAyi oNagi duHScitta vRuttiyali
padOpadige nityayOcane mADi i –
llada mAtiniMdali BramaNageTTu
mudadiMda namagidda dinave eNisikoLLade
vidhiyu bennili kAdudu nODade
udaradoLage bidda anna sArthaka mA –
Dade keDuvarai tiLiyadale
nadiya DoMkane nODi pAtriyoLage yidda
udaka vullaMGisi baruvanaMte
padagaLu DoMkAgi toradOdipare
adara anvayavannu tOradiralu
idu elli illeMdu kaMDaMte mAtu pE –
LidavaMge EneMbenayyA satata
padumanABanu volidu piriyariMdali aMdu
padava pELisiddu satyaveMdu
hRudayadalli tiLidu avara kiMkaranAgi
vidhi niShEda vAkya nuDidaddella
padavige pAvaTige enagAgali avagA –
gade pOdare itta yatnavEnu
kuduriya mEle kOpadi pOgi rAsaBavE –
rida teradi kANO duruLarige
nidhiya mEle munidu tippi mElina bUdi
sadanadoLage taMdu hAkidaMte
idariMdEnu PalavAguvadO tamma
vadana baridallade lABavillA
madananayyane namma vijayaviTThalarEyana
padava Bajisi haduLa paDakoMDavane dhanya || 3 ||

aTTatALa

janumAMtaradalli mADida bage karma
uNisade biDanayyA dEvadEvOttama
dinadinadali jIva AvAvadAdaru
uNabEku uMDu tIrisadale tappadu
guNavAgali Agade pOgali bahu
janarige viruddhavAgi tOrali nitya
tanumana vAkyadiMdali baMdavella
anuBavisabEku AragoDavi yAke
manujaru BagavaMta svAtaMtraj~jAnava
eNisade I pari uttara nuDivaru
danujamardana siri vijayaviTThalarEyanu
GanavAgi pAlise nara munidarEnu || 4 ||

AditALa

AratiSayavAgi badukidarEnavage
Aru durjanarAgi tirugidarEnavage
pAramArthikavAgi irabAradeMdeDe
krUrara svaBAva tolaguvadEno vi –
stAravAgi sajjanaralli iddaru
dUrade biDanayyA buddhi pallaTanAgi
SArIradoLu samagra kuhakatanadiMda
dhAruNiyalli tirugi hottu pOgADuva
pArumuTTanu kANo muNaguva BavaveMbo
vAridhiyoLu biddu BIti baDutali
bErarasi kitti Bavava kaLeva dEva
BUramaNa vijayaviTThalarEyana
sErikoMDu sAdhane mADade baridAha || 5 ||

jate

ABAsavAgali aDigaDige janariMda
lABave Enagadu vijayaviTThalaniMda ||

Leave a Reply

Your email address will not be published. Required fields are marked *

You might also like

error: Content is protected !!