Sadhana suladi 85 – Vijayadasaru

Smt.Nandini Sripad

ಶ್ರೀವಿಜಯದಾಸಾರ್ಯ ವಿರಚಿತ
ಸಾಧನ ಸುಳಾದಿ – ೮೫
(ಪರನಾರಿ ಸಂಗ ವರ್ಜ್ಯ, ಇಂದ್ರಿಯ ಜಯ ವಿಷಯ)
ರಾಗ: ಸಾವೇರಿ

ಧ್ರುವತಾಳ

ಹೆಣ್ಣಿನ ಬಣ್ಣ ನೋಡಿ ಕಣ್ಣಾಗೆಡದಿರಿ
ಹೆಣ್ಣು ಹೆಡತಲೆ ಮೃತ್ಯು ಕಾಣೊ
ಅನಂತ ಬಗೆಯಿಂದ ಜನ್ಮ ಜನ್ಮದಲ್ಲಿದ್ದ
ಪುಣ್ಯರಾಸಿಗಳೆಲ್ಲ ಹ್ರಾಸ ಕಾಣೋ
ಹೆಣ್ಣು ಹೊನ್ನು ಮಣ್ಣು ನಿನ್ನಾದೆನ್ನದಿರೋ
ಮುನ್ನೆ ದಾಯಾದಿಗಳುಂಟೊ ಒಳಗೊಳಗೆ
ಹೆಣ್ಣಿನ ಮನದಲ್ಲಿ ಹಗಲುಗತ್ತಲೆ ಇಪ್ಪದು
ನಿನ್ನೊಳು ನೀ ತಿಳಿದು ನೆಚ್ಚದಿರೋ
ತನ್ನ ಮೊದಲು ಮಾಡಿ ಮಾವ ಅತ್ತೆ ಗಂಡ ತಾಯಿ
ಅಣ್ಣ ತಮ್ಮ ಮಿಕ್ಕಾದ ಬಾಂಧವರ
ಚನ್ನಾಗಿ ಹಿಂಸೆ ಮಾಡಿ
ಥೈ ಎಂದು ಧೈರ್ಯದಲ್ಲಿ ತಿರುಗುವಳು
ಬಣ್ಣಣಿ ಬಾಯಲ್ಲಿ ಹೇಳಲಳವೆ
ಬಣ್ಣಿಸಿ ರಂಭಿಸಿ ನಿನ್ನ ಕರದುಕ್ಕಿನ
ಕಣ್ಣೀಲಿ ಕುಟ್ಟಿ ಸುಖವ ಬಡಿಸೀ
ತಿನ್ನ ಹಾಕುವಳು ತಿಕ್ತಾದಿ ರಸದಿಂದ
ಖಿನ್ನವಿಲ್ಲದಂತೆ ವಿಟಪುರುಷಗೆ ಅನು –
ಗುಣ್ಯಳಾಗಿ ಇಪ್ಪಳೊ ಪೆದರದಂತೆ
ಕಣ್ಣೊಳೊಬ್ಬ ಚನ್ನಿಗನ್ನ ಇಟ್ಟು
ಅನ್ಯಾಯವೆನಿಸಳು ನೋಳ್ಪರಿಗೆ
ಅಣ್ಣ ತಮ್ಮ ತಂದೆ ಮಾವ ಮೈದುನ ಭಾವ
ತನ್ನ ನಂದನ ಅಳಿಯ ಗೋತ್ರಜರು
ಚನ್ನಾಗಿ ಚನ್ನಿಗರಾಗಿ ಸುಳಿದಾಡಲು
ಮನುಮಥನಪೇಕ್ಷ ಮಾಡುವಳು
ಸಣ್ಣವ ಪ್ರಾಯ ವೃದ್ಧ ಚಾಂಡಾಲಾದಿ ಜಾತಿಯ
ಉನ್ಮಾದ ಪಿಡಿಸಿ ಪೀಡಿಪಳೊ
ವಿಣ್ಮೂತ್ರ ಮಲಿನ ಹೊಲಸು ಮಲ ಶ್ಲೇಷ್ಮ
ಕೆನ್ನೀರು ತ್ವಕು ಚರ್ಮ ಅಸ್ಥಿ ಮಜ್ಜಾ
ಘನ್ನ ಮಾಂಸ ಮೇಧ ನರದ ಬಳ್ಳಿಗಳು ವಾ –
ಸನೆ ಬೆವರು ಕಫ ರೋಮ ಭರಿತಾ
ಅನ್ನದಿಂದಲ್ಲಿ ಇವಳು ಚಿತ್ರ ವಿಚಿತ್ರ ಲಾ –
ವಣ್ಯವಾಗಿ ತೋರುವಳು ಇಲ್ಲದಿರೆ ಬರಿದೆ
ಹೆಣ್ಣು ಕುಣುಪ ಸಮವೆಂದು ತಿಳಿದ ಮನುಜ
ಧನ್ಯ ಧನ್ಯನವನೊ ಧಾರುಣಿಯೊಳಗೆಲ್ಲ
ಗಣ್ಯ ಗತಿಯೊ ಅನ್ಯ ಸ್ತ್ರೀಯರ ಒಲಮಿಯು
ತಣ್ಣನ ಪಾವಕನು ತತ್ಕಾಲಕ್ಕೆ
ಎಣ್ಣಿಯೊಳಗೆ ನೊಣ ಬಿದ್ದಂತೆ ದೀವಿಗಿ
ಹಣ್ಣೆಂದು ಕ್ರಿಮಿಗಳು ಬಂದು ಎರಗಿದಂತೆ
ಉಣ್ಣದಿರು ಈ ಭವಣಿ ಉದ್ಧಂಡತನ ಬೇಡ
ನಿನ್ನ ಕುಲಕ್ಕೆ ಕೀರ್ತಿ ಬರಲಿ ವೇಗಾ
ಚನ್ನಿಗರಾಯ ವಿಜಯವಿಟ್ಠಲರೇಯನ ಕಾ –
ರುಣ್ಯ ಪಡೆದು ಮಹಾಧೈರ್ಯ ಮಾಡೋ || ೧ ||

ಮಟ್ಟತಾಳ

ಜನನಿ ತನುಜೆ ಅತ್ತಿಗೆ ನಾದಿನಿ ಅತ್ತೆ ಮಿಕ್ಕಾ –
ಜನರ ಸಂಗಡೆವ್ವನದಲ್ಲಿ ನೀನು
ಕನಸಿನೊಳಗೆ ಏಕಾಸನದಲ್ಲಿರದಿರು
ಮುನಿಗಳಿಗಾದರು ಮನಸು ಹಿಡಿವದು ಬಲು ಕಠಿಣ ಕಾಣೊ ಮರುಳೆ
ವನುತೆಯರ ಕಂಪನೆ ಕುಡಿಯದಿರು
ಮನಸು ನಿನ್ನಾಧೀನವಾದರು ಒಂದು
ಕ್ಷಣಾತುರವೆಂದು ಎನದಿರು ಪ್ರತಿದಿನ
ಪಣವ ಮಾಡಿದರು ಗುಣವಂತಳು ಎಂದೂ
ನೆನೆ ನೆನೆದು ಯೋಚನೆಯೊಳಗಾಗದಿರು
ಧನವುಳ್ಳನಕ ನಿನ್ನನು ಸೇವಿಸುವಳು
ಜನನಿಗಿಂತ ಮಿಗಿಲೆನಿಪಳು ಹಿತದಲ್ಲಿ
ಧನ ರಹಿತನಾಗೆ ತೃಣಕಿಂತಲಿ ನೀ –
ಚನ ಮಾಡಿ ತನ್ನ ಮನಿಯ ಮುಂದಣ ಭೃ –
ತ್ಯನ ತೆರದಿ ಉದಾಸೀನದಿಂದಲಿ ಮಾತನು ಪೇಳುವಳು ವಂ –
ಚನಿಯಲ್ಲಿ ಅನುಗಾಲ ಕುಣಿಸುವಳೊ ಕಡಿಗೆ
ಹೆಣ ಮನುಜನ ಮಾಡಿ ಘನ್ನ ಗುಣಗಣ ಸರ್ವ ಸ –
ಜ್ಜನರ ನಡತಿಗಳು ನಾಶನ ಕಣೊದಾಗುವವು ಯಾ –
ತನಗೆಡೆ ಮಾಡಿ ಅನಳನ ಮುಂದೆ ಬೆಣ್ಣೆಯನು
ಮಣಿಯ ಅಯಸ್ಕಾಂತ ಬಳಿಯ ಕಬ್ಬಿಣವ
ತಂದಿಡಲು ಸುಮ್ಮನೆ ಇರಬಲ್ಲದೆ
ವನಧಿಶಯನ ನಮ್ಮ ವಿಜಯವಿಟ್ಠಲ ಮೋ –
ಹನ ಮೂರುತಿಯ ಸ್ಮರಣೆಯ ಬಿಡದಿರು || ೨ ||

ತ್ರಿವಿಡಿತಾಳ

ಸ್ತ್ರೀಯರ ಮೋಹಕ್ಕೆ ಸೌಭರಿ ಮಹಾ‌ಋಷಿ
ರಾಯನಲ್ಲಿಗೆ ಪೋಗಿ ಬೇಡಿಕೊಂಡಾ
ರಾಯ‌ಋಷಿ ವಿಶ್ವಾಮಿತ್ರ ಕಾಮನುಪಹತಿಗೆ
ನಾಯಿಯಂದದಿ ಪೋದಾ ಸ್ವರ್ಗದೆಡಿಗೇ
ಕಾಯಾ ಕೆಡಿಸಿಕೊಂಡ ಇಂದ್ರನು ಮದದಿಂದ
ಹಾಯಿದು ಚಂದ್ರನು ತನ್ನ ಕಳೆಗುಂದಿದ
ನ್ಯಾಯವಿಲ್ಲದೆ ತಿಲೋತ್ತಮಿಯ ಗೋಸುಗವಾಗಿ
ಸಾಯಬಟ್ಟರು ಒಡಹುಟ್ಟಿದವರು
ಬಾಯಿ ಕೊಬ್ಬಿನಲ್ಲಿ ಕೀಚಕ ಕುಲದೊಡನೆ
ಆಯುದಿಂದಲಿ ಪೋದ ದುಃಖದಲ್ಲಿ
ರಾಯ ರಾಯರು ಮಹಾ ಧೈರ್ಯಶಾಲಿಗಳಾಗಿ
ಬಾಯಿ ಬಿಡುವರು ಹೆಣ್ಣಿನ ಕಾಣುತ್ತ
ಮಾಯಾದೊಳಗೆ ಬಿದ್ದು ಕಡೆ ಗೆದ್ದವನಿಲ್ಲ
ಛಾಯಾ ಸೋಂಕಲು ಲೋಕ ಮರುಳಾಹೋದು
ಕಾಯಜನು ಹೊಲ್ಲ ಎಂದೆಂದಿಗೆ ಬಿಡದೇ
ದಾಯಿಗನಾಗಿ ಬೆಂಬಿಡದಲಿಪ್ಪ
ಸಾಯಕ ಹೊಡೆದು ರುದ್ರನ ತಪಗೆಡಿಸಿದ
ತಾಯಿ ಮಕ್ಕಳ ನೋಡಾ ಒಬ್ಬನಿರೇ
ಕಾಯಿದುಕೊಳಲಾಗಿ ಅಂಗಜನಬಾಧೆ
ಸ್ತ್ರೀಯರ ಶೋಭನ ಸ್ವಭಾವ ವಿಶೇಷವು
ವಾಯು ಇದ್ದಾಗಲೆ ಇನಿತೆಂದು ತಿಳಿದು ಉ –
ಪಾಯ ಚಿಂತಿಸೋ ಮುಂದಿನ ಗತಿ ಮಾರ್ಗಕೆ
ಪ್ರಾಯ ಎರಡು ದಿವಸ ಅದರೊಳು ಈ ಸುಖ
ಹೇಯವು ಸ್ಥಿರವಲ್ಲ ಕಾಣೊ ಅರ್ಕಶಾಕ ಅರೆದು
ನೋಯ ಮಾಡಿ ಅದರ ಕ್ಷೀರ ಕುಡಿದಂತೆ
ಪ್ರಯಾಸ ಬಡದಿರೂ ಬರಿದೆ ಬಳಲೀ
ತೋಯ ನದಿಯೊಳಗೆ ಸೂಸಿದಂತೆ ಇದರೊಳು
ಪ್ರೀಯವಾಗದು ಕಾಲ ಹೋದ ಮೇಲೆ
ಮಾಯವಲ್ಲದೆ ಲೇಶ ಗತಿಗೆ ಸಾಧನವಲ್ಲ
ತೋಯಿಸದಿರು ಪಾಪದಲ್ಲಿ ದೇಹವ
ಆ ಯಮರಾಯನು ನಿನ್ನಯ ಕುಲ ನೀ –
ಕಾಯವ ಎಳೆದೊಯ್ದು ಭಂಗ ಬಡಿಸೀ
ಪೂಯಾಸ ಮಿಗಿಲಾದ ನರಕದಲ್ಲಿ ಇಟ್ಟು
ಶ್ರೇಯಸ್ಸು ಕೆಡಿಸುವ ಬಲು ಜನುಮದ
ಶ್ರೀಯರಸ ರಂಗ ವಿಜಯವಿಟ್ಠಲರೇಯನ
ಗಾಯಕನಾಗಿ ಸಂತತದಿ ಸುಖಿಸೋ || ೩ ||

ಅಟ್ಟತಾಳ

ಶ್ರುತಿ ಶಾಸ್ತ್ರ ಪುರಾಣ ನಾನಾತೀರ್ಥ ಧರ್ಮ
ವ್ರತಗಳು ಚರಿಸಿ ಪುಣ್ಯವಂತನಾದರು
ಗತಿಗೆ ವಿರೋಧವಾಗಿದ್ದ ಕರ್ಮ ಅನ್ಯ –
ಸತಿಯರ ಒಲಿಮಿಗೆ ಸೋಲಲು ಸತ್ಕರ್ಮ
ಗತವಾಗಿ ಪೋಗೋದು ಏನೆಂಬೆ ಸೋಜಿಗ
ಕ್ಷಿತಿಯೊಳು ಕಲಿಗೆ ಕೇವಲ ಆಶ್ರಯವೆನ್ನಿ
ಹಿತವಾಗಿ ಪೇಳುವೆ ಕಣ್ಣಿನಿಂದಲಿ ಕಾ –
ಣುತಲೆ ಮದ್ಯಪಾನ ಮಾಡಿದಕಿಂತ
ಅತಿಶಯವಾದ ಮಂದಮದ ಹೆಚ್ಚೋದು
ಪ್ರತಿಲೋಮ ಅನುಲೋಮರುದ್ಭವರಾಗಿ ಶಾ –
ಶ್ವಿತದಲ್ಲಿ ಬೆಳೆಯಲು ಮುಕುತಿಯ ಮಾರ್ಗಕ್ಕೆ
ಪ್ರತಿಕೂಲವಲ್ಲದೆ ಶೋಭನವಂದಿಲ್ಲ
ಯತಿಯಾದರೇನು ಮೋಕ್ಷಮಾರ್ಗಕ್ಕೆ ಸಲ್ಲ
ಮತಿವಂತರು ಕೇಳಿ ಮರಿಯದಿರೀ ಪರ –
ಸತಿಯರ ಕೂಟ ಕಾಳಕೂಟದ ಲೇಪ
ತತುಕಾಲಕೆ ದುರ್ವ್ಯಸನ ಸೀತಳವಾದ
ಹುತವಹನಂತೆ ತೋರುವದು ಆ ತರುವಾಯ
ಖತಿಗೊಳಿಸುವದು ಇಹಪರದಲಿ ಬಂದು
ಅತಿ ಕಾಮಾತುರ ನೀನಾದಡೆ ನಿಜ ಸು –
ಸತಿಯಲ್ಲಿ ರಮಿಸೋದು ಇದಕೆ ವಿವರ ಉಂಟು
ಋತುಕಾಲ ನಿಷಿದ್ಧ ಅನಿಷಿದ್ಧ ದಿನವೆಂದು
ಮಿತವುಂಟು ಉತ್ತಮ ಮಧ್ಯಂತರವೆಂಬೋದು
ಹಿತವಾಹೋದಂಗಕ್ಕೆ ಕುಲಕ್ಕೆ ಭೂಷಣ ಕೀ –
ರುತಿ ಬಪ್ಪದು ಗುರುಹಿರಿಯರ ಸಮ್ಮತ
ಸುತ ಸುತರಾದ್ಯರು ವಂಶಜರೆನಿಪರು
ಪಿತ ಪಿತಾಮಹ ಪ್ರಪಿತಾಮಹ ಮಾತಾಮಹ
ತತಿಗಳು ಇವರಿತ್ತ ದಾನಾದಿಗಳಿಂದ
ಕೃತ ಕಾರ್ಯರಾಗಿ ತಾವೆಲ್ಲ ತಮ್ಮ ಯೋ –
ಗ್ಯತದನಿತು ಗತಿಯಲ್ಲಿ ಹರಿಭಕ್ತಿಯಲ್ಲಿಪ್ಪರು
ಪತಿತಪಾವನ ಶಿರಿ ವಿಜಯವಿಟ್ಠಲಗೆ ಅ –
ರ್ಪಿತವಾಗುವಂತೆ ನಿಜರಾಣಿಯ ಪ್ರೀತಿಬಡಿಸೊ || ೪ ||

ಆದಿತಾಳ

ಹಣಿ ಬೆವರುತಲಿರೆ ಮಣಿದು ಏಳುತಲಿರೆ
ಕುಣಿದಾಡುತಲಿರೆ ತನುವು ಮುಚ್ಚದಲಿರೆ
ಮನೆಯೊಳಗೊಬ್ಬಳಿರೆ ಧನಿಕನ ಸಂಗವಿರೆ
ಹೆಣಲು ಬಿಚ್ಚಿಕೊಂಡಿರೆ ಜನರು ಹಳಿಯುತಿರೆ
ಹಣವ ಬೇಡುತಲಿರೆ ಮುನಿದು ಪೋಗುತಲಿರೆ
ಕೊನೆ ನೋಟ ನೋಡುತಿರೆ ಋಣವ ಮಾಡುತಲಿರೆ
ಅನದೆ ಹಾರುತಲಿರೆ ಕನಿಕರವಿಲ್ಲದಿರೆ
ಕನಕ ಬಯಸುತಿರೆ ಉಣುತ ಏಳುತಲಿರೆ
ನುಣುಪು ತಿದ್ದುತಲಿರೆ ಇನಿತುಳ್ಳ ನಾರಿಯ
ಗುಣಗಳ ತಿಳಿದು ಒಬ್ಬನೆ ಇರಲಾಗದು ಜನ ವಿರಹಿತನಾಗಿ
ನಿನಗೆ ನೀನೇ ತಿಳಿದು ವನಿತೇರ ಮರೆ ಮೋಸ –
ವೆಣಿಸಿದ ಕಾಲಕ್ಕೂ ಅನಿಮಿಷರಿಗರಿದು
ದ್ಯುಣಕವಾದರು ಸ್ತ್ರೀಜನ ಸಂಗವಾದರೆ
ಗುಣವೆ ಕದುವಳು ಲೋಚನದಿಂದಲಿ ಸೆಳೆದು
ಎನಿತುಕೊಟ್ಟರು ತಾನು ದಣಿಯಳು ಇವನ
ದಣಿಸೋಳು ಮುಂದಣ ಮಾರ್ಗ ತೋರದಂತೆ
ಫಣಿಶಾಯಿ ವಿಜಯವಿಟ್ಠಲರೇಯನ ನಾಮವ
ನೆನೆದು ಏಕಾಂತದಲ್ಲಿ ನಿರ್ಮಲ ನೀನಾಗೊ || ೫ ||

ಜತೆ

ಸೊಲ್ಲು ಎತ್ತಲಿ ಸಲ್ಲ ಪರನಾರಿಯರ ಕೂಡ
ನಿಲ್ಲದು ಸುಕೃತ ವಿಜಯವಿಟ್ಠಲ ಮುನಿವ ||


SrIvijayadAsArya viracita
sAdhana suLAdi – 85
(paranAri saMga varjya, iMdriya jaya viShaya)
rAga: sAvEri

dhruvatALa

heNNina baNNa nODi kaNNAgeDadiri
heNNu heDatale mRutyu kANo
anaMta bageyiMda janma janmadallidda
puNyarAsigaLella hrAsa kANO
heNNu honnu maNNu ninnAdennadirO
munne dAyAdigaLuMTo oLagoLage
heNNina manadalli hagalugattale ippadu
ninnoLu nI tiLidu neccadirO
tanna modalu mADi mAva atte gaMDa tAyi
aNNa tamma mikkAda bAMdhavara
cannAgi hiMse mADi
thai eMdu dhairyadalli tiruguvaLu
baNNaNi bAyalli hELalaLave
baNNisi raMBisi ninna karadukkina
kaNNIli kuTTi suKava baDisI
tinna hAkuvaLu tiktAdi rasadiMda
KinnavilladaMte viTapuruShage anu –
guNyaLAgi ippaLo pedaradaMte
kaNNoLobba canniganna iTTu
anyAyavenisaLu nOLparige
aNNa tamma taMde mAva maiduna BAva
tanna naMdana aLiya gOtrajaru
cannAgi cannigarAgi suLidADalu
manumathanapEkSha mADuvaLu
saNNava prAya vRuddha cAMDAlAdi jAtiya
unmAda piDisi pIDipaLo
viNmUtra malina holasu mala SlEShma
kennIru tvaku carma asthi majjA
Ganna mAMsa mEdha narada baLLigaLu vA –
sane bevaru kaPa rOma BaritA
annadiMdalli ivaLu citra vicitra lA –
vaNyavAgi tOruvaLu illadire baride
heNNu kuNupa samaveMdu tiLida manuja
dhanya dhanyanavano dhAruNiyoLagella
gaNya gatiyo anya strIyara olamiyu
taNNana pAvakanu tatkAlakke
eNNiyoLage noNa biddaMte dIvigi
haNNeMdu krimigaLu baMdu eragidaMte
uNNadiru I BavaNi uddhaMDatana bEDa
ninna kulakke kIrti barali vEgA
cannigarAya vijayaviTThalarEyana kA –
ruNya paDedu mahAdhairya mADO || 1 ||

maTTatALa

janani tanuje attige nAdini atte mikkA –
janara saMgaDevvanadalli nInu
kanasinoLage EkAsanadalliradiru
munigaLigAdaru manasu hiDivadu balu kaThiNa kANo maruLe
vanuteyara kaMpane kuDiyadiru
manasu ninnAdhInavAdaru oMdu
kShaNAturaveMdu enadiru pratidina
paNava mADidaru guNavaMtaLu eMdU
nene nenedu yOcaneyoLagAgadiru
dhanavuLLanaka ninnanu sEvisuvaLu
jananigiMta migilenipaLu hitadalli
dhana rahitanAge tRuNakiMtali nI –
cana mADi tanna maniya muMdaNa BRu –
tyana teradi udAsInadiMdali mAtanu pELuvaLu vaM –
caniyalli anugAla kuNisuvaLo kaDige
heNa manujana mADi Ganna guNagaNa sarva sa –
jjanara naDatigaLu nASana kaNodAguvavu yA –
tanageDe mADi anaLana muMde beNNeyanu
maNiya ayaskAMta baLiya kabbiNava
taMdiDalu summane iraballade
vanadhiSayana namma vijayaviTThala mO –
hana mUrutiya smaraNeya biDadiru || 2 ||

triviDitALa

strIyara mOhakke sauBari mahA^^RuShi
rAyanallige pOgi bEDikoMDA
rAya^^RuShi viSvAmitra kAmanupahatige
nAyiyaMdadi pOdA svargadeDigE
kAyA keDisikoMDa iMdranu madadiMda
hAyidu caMdranu tanna kaLeguMdida
nyAyavillade tilOttamiya gOsugavAgi
sAyabaTTaru oDahuTTidavaru
bAyi kobbinalli kIcaka kuladoDane
AyudiMdali pOda duHKadalli
rAya rAyaru mahA dhairyaSAligaLAgi
bAyi biDuvaru heNNina kANutta
mAyAdoLage biddu kaDe geddavanilla
CAyA sOMkalu lOka maruLAhOdu
kAyajanu holla eMdeMdige biDadE
dAyiganAgi beMbiDadalippa
sAyaka hoDedu rudrana tapageDisida
tAyi makkaLa nODA obbanirE
kAyidukoLalAgi aMgajanabAdhe
strIyara SOBana svaBAva viSEShavu
vAyu iddAgale initeMdu tiLidu u –
pAya ciMtisO muMdina gati mArgake
prAya eraDu divasa adaroLu I suKa
hEyavu sthiravalla kANo arkaSAka aredu
nOya mADi adara kShIra kuDidaMte
prayAsa baDadirU baride baLalI
tOya nadiyoLage sUsidaMte idaroLu
prIyavAgadu kAla hOda mEle
mAyavallade lESa gatige sAdhanavalla
tOyisadiru pApadalli dEhava
A yamarAyanu ninnaya kula nI –
kAyava eLedoydu BaMga baDisI
pUyAsa migilAda narakadalli iTTu
SrEyassu keDisuva balu janumada
SrIyarasa raMga vijayaviTThalarEyana
gAyakanAgi saMtatadi suKisO || 3 ||

aTTatALa

Sruti SAstra purANa nAnAtIrtha dharma
vratagaLu carisi puNyavaMtanAdaru
gatige virOdhavAgidda karma anya –
satiyara olimige sOlalu satkarma
gatavAgi pOgOdu EneMbe sOjiga
kShitiyoLu kalige kEvala ASrayavenni
hitavAgi pELuve kaNNiniMdali kA –
Nutale madyapAna mADidakiMta
atiSayavAda maMdamada heccOdu
pratilOma anulOmarudBavarAgi SA –
Svitadalli beLeyalu mukutiya mArgakke
pratikUlavallade SOBanavaMdilla
yatiyAdarEnu mOkShamArgakke salla
mativaMtaru kELi mariyadirI para –
satiyara kUTa kALakUTada lEpa
tatukAlake durvyasana sItaLavAda
hutavahanaMte tOruvadu A taruvAya
KatigoLisuvadu ihaparadali baMdu
ati kAmAtura nInAdaDe nija su –
satiyalli ramisOdu idake vivara uMTu
RutukAla niShiddha aniShiddha dinaveMdu
mitavuMTu uttama madhyaMtaraveMbOdu
hitavAhOdaMgakke kulakke BUShaNa kI –
ruti bappadu guruhiriyara sammata
suta sutarAdyaru vaMSajareniparu
pita pitAmaha prapitAmaha mAtAmaha
tatigaLu ivaritta dAnAdigaLiMda
kRuta kAryarAgi tAvella tamma yO –
gyatadanitu gatiyalli hariBaktiyallipparu
patitapAvana Siri vijayaviTThalage a –
rpitavAguvaMte nijarANiya prItibaDiso || 4 ||

AditALa

haNi bevarutalire maNidu ELutalire
kuNidADutalire tanuvu muccadalire
maneyoLagobbaLire dhanikana saMgavire
heNalu biccikoMDire janaru haLiyutire
haNava bEDutalire munidu pOgutalire
kone nOTa nODutire RuNava mADutalire
anade hArutalire kanikaravilladire
kanaka bayasutire uNuta ELutalire
nuNupu tiddutalire inituLLa nAriya
guNagaLa tiLidu obbane iralAgadu jana virahitanAgi
ninage nInE tiLidu vanitEra mare mOsa –
veNisida kAlakkU animiSharigaridu
dyuNakavAdaru strIjana saMgavAdare
guNave kaduvaLu lOcanadiMdali seLedu
enitukoTTaru tAnu daNiyaLu ivana
daNisOLu muMdaNa mArga tOradaMte
PaNiSAyi vijayaviTThalarEyana nAmava
nenedu EkAMtadalli nirmala nInAgo || 5 ||

jate

sollu ettali salla paranAriyara kUDa
nilladu sukRuta vijayaviTThala muniva ||

Leave a Reply

Your email address will not be published. Required fields are marked *

You might also like

error: Content is protected !!