Nodidya ivara

Composer : Shri Lakumeesha ankita

By Smt.Shubhalakshmi Rao

ನೋಡಿದ್ಯಾ ಇವರ ಪಾದವ ಕೊಂಡಾಡಿದ್ಯಾ [ಪ]

ರೂಢಿಯೊಳು ವಿಬುಧೇಂದ್ರರ್ ನೀಡಿದ ಜಲಜಕ್ಕೆ
ಮಾಡಿ ಭಕ್ತಿಯ ದಿವ್ಯ ಗಾಢದುಣಿಸಿದರ [ಅ.ಪ]

ಜಿತ್ತಪ್ಪ ನಾಮದಿ ಮೆರೆದು | ಸತತ
ಸತ್ಪಥ ಗತಿಗಳ ಮರೆದು | ಭೂಮಿ
ಉತ್ತಿ ಬಿತ್ತುವ ಕೃಷಿ ಅರಿದೂ | ಈತ
ನಿತ್ಯ ಕರ್ಮಗಳೆಲ್ಲ ತೊರದೂ | ಆಹಾ
ನಿತ್ಯ ಸುಭೋಜನದ ಹೊತ್ತಿಗೆ | ಗೂಟದಿ
ಸುತ್ತಿಟ್ಟ ಜನಿವಾರ ಧರಿಸಿದ ಮಹಿಮರ [೧]

ವಿಬುಧೇಂದ್ರರಿವರಲ್ಲಿ ಬರುತಾ | ಇರೆ
ಸುಭಗಿನಿ ನಮಿಸಿ ಬೇಡುತ್ತಾ | ಈತ
ಶುಭ ಪಥವನರಿಯನೆಂದಳು ತಾ | ಇರೆ
ಪ್ರಭು ನರಹರಿ ಜಲಜ ಕೊಡುತಾ | ಆಹಾ
ಕಭಲೋಕ ಪತಿ ಈತ ಅಬುಜಾಂಘ್ರಿ ಪೂಜಿಸಿ
ವಿಭವದುಣಿಸೋ ಎನ್ನೆ ಪ್ರಬಲರುಣಿಸಿದರ [೨]

ಗುರು ವಿಬುಧೇಂದ್ರರು ಬಂದು | ಮತ್ತೆ
ಹರುಷದಿ ಸಂಚಾರದಂದು | ಈತನ
ಕರೆಸೆ ಹರಿ ಉಂಡನೆಂದು | ಕೇಳಿ
ಹರಿಗುಣಿಸು ನೋಡ್ವೆನೆಂದು | ಆಹಾ
ಭರದಿತ್ತ ಆಜ್ಞೆಗೆ ಸಾಲಿಗ್ರಾಮುಣದಿರೆ
ಹರಣಕ್ಕೆ ಗುಂಡತ್ತ ಹರಿ ಉಣ್ಣೆ ತೋರಿದರ [೩]

ವಿಬುಧೇಂದ್ರರಾಶ್ರಮ ಕೊಡುತಾ | ಇರೆ
ಶುಭನಾಮ ಜಿತಾಮಿತ್ರರೆನುತಾ | ನಿನಗೆ
ಕುಭಲೋಕಪತಿ ಒಲಿದನೆನುತಾ | ಸತತ
ಅಬುಜಾಕ್ಷನ ಭಜಿಸೆನುತಾ | ಆಹಾ
ಸಬಲ ಆಶಿಷ ಮಾಡೆ ಅಬುಜೋದ್ಭವ ಭಾವಿ
ಪ್ರಬಲ ಶಾಸ್ತ್ರವ ಭೂಮಿವಿಬುಧರಿಗೊರೆದರ [೪]

ನದಿ ಕೃಷ್ಣಯ ಮಧ್ಯದಲ್ಲಿ | ಪಾಠ
ಬುಧರಿಗೆ ಪೇಳ್ತಿರೆ ಅಲ್ಲಿ ಪೂರ್ಣ
ಒದಗೆ ಪ್ರವಾಹವು ಅಲ್ಲಿ | ಗುರು
ಬದಿಯ ಬಿಟ್ಟು ದಂಡೆಯಲ್ಲಿ | ಆಹಾ
ಬೆದರಿ ಶಿಷ್ಯರು ಬರೆ ಸಪ್ತಾಹ ನದಿ ಸೂಸೆ
ಮುದದಿ ಲಕುಮೀಶನ ಗೋನದಿ ಧ್ಯಾನಿಪರ [೫]


nODidyA ivara pAdava koMDADidyA [pa]

rUDhiyoLu vibudhEMdrar nIDida jalajakke
mADi Baktiya divya gADhaduNisidara [a.pa]

jittappa nAmadi meredu | satata
satpatha gatigaLa maredu | BUmi
utti bittuva kRuShi aridU | Ita
nitya karmagaLella toradU | AhA
nitya suBOjanada hottige | gUTadi
suttiTTa janivAra dharisida mahimara [1]

vibudhEMdrarivaralli barutA | ire
suBagini namisi bEDuttA | Ita
SuBa pathavanariyaneMdaLu tA | ire
praBu narahari jalaja koDutA | AhA
kaBalOka pati Ita abujAMghri pUjisi
viBavaduNisO enne prabalaruNisidara [2]

guru vibudhEMdraru baMdu | matte
haruShadi saMcAradaMdu | Itana
karese hari uMDaneMdu | kELi
hariguNisu nODveneMdu | AhA
Baraditta Aj~jege sAligrAmuNadire
haraNakke guMDatta hari uNNe tOridara [3]

vibudhEMdrarASrama koDutA | ire
SuBanAma jitAmitrarenutA | ninage
kubhalOkapati olidanenutA | satata
abujAkShana BajisenutA | AhA
sabala ASiSha mADe abujOdBava BAvi
prabala SAstrava BUmivibudharigoredara [4]

nadi kRuShNaya madhyadalli | pATha
budharige pELtire alli pUrNa
odage pravAhavu alli | guru
badiya biTTu daMDeyalli | AhA
bedari SiShyaru bare saptAha nadi sUse
mudadi lakumISana gOnadi dhyAnipara [5]

Leave a Reply

Your email address will not be published. Required fields are marked *

You might also like

error: Content is protected !!