Composer : Shri Shripadarajaru
ವಂದನೆ ಮಾಡಿರೈ ಯತಿಕುಲ ಚಂದ್ರನ ಪಾಡಿರೈ || ಪ. ||
ಬಂದ ದುರಿತಗಳ ಹಿಂದೆ ಕಳೆದು ಆ-
ನಂದ ಪಡುವ ವಿಭುದೇಂದ್ರ ಕರೋಧ್ಭವರ ||ಅ.ಪ.||
ರಘುಕುಲ ವರ ಪುತ್ರ,
ರಾಮನ ಚರಣ ಕರುಣಾಪಾತ್ರ,
ನಿಗಮೋಕ್ತಿಯ ಸೂತ್ರ ಪಾಠವ ಪಠಿಸುವ,
ಸುಗುಣ ಜಿತಾಮಿತ್ರ,
ನಗಧರ ಶ್ರೀ ಪನ್ನಗ ಶಯನನ ಗುಣ,
ಪೊಗಳುವ ಅಪಾರ ಅಗಣಿತ ಮಹಿಮರ (೧)
ವರಮಹಾತ್ಮೆ ತಿಳಿಸಿ,
ಮೊದಲಿಂದೀ ಪರಿಯಂದದಿ ಚರಿಸಿ,
ನಿರುತ ಮನವ ನಿಲಿಸಿ,
ಶ್ರೀಹರಿ ಕರಿವರದನ ಒಲಿಸಿ,
ಧರೆ ಜನರಿಗೆ ಅರಿಯದೆ ಮರೆಯಾಗುತ,
ಹರುಷದಿ ಗೋನದ ತರವಲ್ಲಿರುವವರ (೨)
ಮುದದಿ ಕೃಷ್ಣಾ ತಟಿಯ,
ಮಧ್ಯದಿ ಸದನದ ಈ ಪರಿಯ,
ಸತತಮಲ ಯತಿವರ್ಯ ತಪ
ಮೌನದಲಿ ಇದ್ದು,
ಒದಗಿ ನದಿಯು ಸೂ -ಸುತ ಬರಲೇಳುದಿನ,
ಕುದಯಾದವರ ಸುಪದ ಕಮಲಂಗಳ (೩)
ಮಾಸ ಮಾರ್ಗಶೀರ್ಷಾ
-ರಾಧನೆಗಶೇಷದಿನ ಅಮಾವಾಸ್ಯ,
ದಾಸರು ಪ್ರತಿವರುಷ,
ಮಾಳ್ಪರು ಲೇಸೆನಲು ಶ್ರಿತಿ ಗೋಷ,
ಕಾಶಿಯ ಕ್ಷೇತ್ರ ಈ ಸ್ಥಳ ಮಿಗಿಲೈ,
ದಾಸರಿಗೆ ಈ ಭೂಸುರ ಪದಂಗಳ (೪)
ಮಧ್ವ ಶಾಸ್ತ್ರ ಗ್ರಂಥ,
ಸಾರದ ಪದ್ಧತಿ ತಿಳಿದಂಥ,
ಅದ್ವೈತ ಪಂಥ,
ಮುರಿದು ಉದ್ಧರಿಸಿದಂಥ,
ರುದ್ರ ವಂದ್ಯ ಮೂರುತಿ ರಂಗವಿಠಲನ,
ಪದ ಪದ್ಮಾರಾಧಕ ಪ್ರಸಿದ್ಧ ಮುನೀಂದ್ರರ (೫)
vaMdane mADirai yatikula caMdrana pADirai || pa. ||
baMda duritagaLa hiMde kaLedu A-
naMda paDuva viBudEMdra karOdhBavara ||a.pa.||
raGukula vara putra,
rAmana caraNa karuNApAtra,
nigamOktiya sUtra pAThava paThisuva,
suguNa jitAmitra,
nagadhara SrI pannaga Sayanana guNa,
pogaLuva apAra agaNita mahimara (1)
varamahAtme tiLisi,
modaliMdI pariyaMdadi carisi,
niruta manava nilisi,
SrIhari karivaradana olisi,
dhare janarige ariyade mareyAguta,
haruShadi gOnada taravalliruvavara (2)
mudadi kRuShNA taTiya,
madhyadi sadanada I pariya,
satatamala yativarya tapa
maunadali iddu,
odagi nadiyu sU -suta baralELudina,
kudayAdavara supada kamalaMgaLa (3)
mAsa mArgaSIrShA
-rAdhanegaSEShadina amAvAsya,
dAsaru prativaruSha,
mALparu lEsenalu Sriti gOSha,
kASiya kShEtra I sthaLa migilai,
dAsarige I BUsura padaMgaLa (4)
madhva SAstra graMtha,
sArada paddhati tiLidaMtha,
advaita paMtha,
muridu uddharisidaMtha,
rudra vaMdya mUruti raMgaviThalana,
pada padmArAdhaka prasiddha munIMdrara (5)
Leave a Reply