Yeno yento tiliyadu

Composer : Shri Mahipati dasaru

By Smt.Shubhalakshmi Rao

ಎನೊ ಎಂತೊ ತಿಳಿಯದು ತಿಳಿಯದು
ಸ್ವಾನಂದದ ಸುಖದಾಟ |ಪ|

ಒಳಗೊ ಹೊರಗೊ ಬೈಗೊ ಬೆಳಗೊ |
ಕಾಳೊ ಬೆಳದಿಂಗಳವೊ |
ಮಳಿಯೊ ಮಿಂಚೊ ಹೊಳಪೊ ಸೆಳವೊ
ತಿಳಿಯದ ಕಳೆಕಾಂತಿಗಳು |೧|

ಉದಿಯೊ ಅಸ್ತೋ ಆದ್ಯೊ ಅಂತ್ಯೊ |
ಮಧ್ಯೋ ತಾ ತಿಳಿಯದು |
ತುದಿ ಮೊದಲಿಲ್ಲದೆ ಸದಮಲ ಬ್ರಹ್ಮವು |
ಉದಯವಾಗಿಹುದಿಲ್ಲಿ ನೋಡಿ |೨|

ಜೀವವೋ ಭಾವವೋ ಶಿವವೋ ಶಕ್ತಿಯೋ |
ಆವದು ತಾ ತಿಳಿಯದು
ಘವಘವಿಸುವ ಅವಿನಾಶನ ಪ್ರಭೆಯಿದು
ಮಹಿಪತಿ ವಸ್ತು ಮಯವೋ |೩|


eno eMto tiLiyadu tiLiyadu
svAnaMdada suKadATa |pa|

oLago horago baigo beLago |
kALo beLadiMgaLavo |
maLiyo miMco hoLapo seLavo
tiLiyada kaLekAMtigaLu |1|

udiyo astO Adyo aMtyo |
madhyO tA tiLiyadu |
tudi modalillade sadamala brahmavu |
udayavAgihudilli nODi |2|

jIvavO BAvavO SivavO SaktiyO |
Avadu tA tiLiyadu
GavaGavisuva avinASana praBeyidu
mahipati vastu mayavO |3|

Leave a Reply

Your email address will not be published. Required fields are marked *

You might also like

error: Content is protected !!