-
Yeno yento tiliyadu
Composer : Shri Mahipati dasaru ಎನೊ ಎಂತೊ ತಿಳಿಯದು ತಿಳಿಯದುಸ್ವಾನಂದದ ಸುಖದಾಟ |ಪ| ಒಳಗೊ ಹೊರಗೊ ಬೈಗೊ ಬೆಳಗೊ |ಕಾಳೊ ಬೆಳದಿಂಗಳವೊ |ಮಳಿಯೊ ಮಿಂಚೊ ಹೊಳಪೊ ಸೆಳವೊತಿಳಿಯದ ಕಳೆಕಾಂತಿಗಳು |೧| ಉದಿಯೊ ಅಸ್ತೋ ಆದ್ಯೊ ಅಂತ್ಯೊ |ಮಧ್ಯೋ ತಾ ತಿಳಿಯದು |ತುದಿ ಮೊದಲಿಲ್ಲದೆ ಸದಮಲ ಬ್ರಹ್ಮವು |ಉದಯವಾಗಿಹುದಿಲ್ಲಿ ನೋಡಿ |೨| ಜೀವವೋ ಭಾವವೋ ಶಿವವೋ ಶಕ್ತಿಯೋ |ಆವದು ತಾ ತಿಳಿಯದುಘವಘವಿಸುವ ಅವಿನಾಶನ ಪ್ರಭೆಯಿದುಮಹಿಪತಿ ವಸ್ತು ಮಯವೋ |೩| eno eMto tiLiyadu tiLiyadusvAnaMdada suKadATa |pa|…
