Composer : Shri Mahipati dasaru
ಗುರು ದೈವದೊಲವೆನಗೆ ಬಲವೆ ಬಲವು
ಏರಿ ಬಿನುಗು ದೈವದ ಬಲವು ಯಾತಕೆ ಹಲವು ||ಅ.ಪ||
ಗುರು ನಯನದೊಲವೆನಗೆ ನವನಿಧಾನದ ಬಲವು
ಗುರು ಅಭಯದೊಲುಮೆ ನವಗ್ರಹದ ಬಲವು
ಗುರು ಅನುಗ್ರಹದೊಲವು ಎನಗೆ ಅನುದಿನ ಬಲವು
ಗುರು ಒಲುಮೆ ಎನಗೆ ಸಿರಿ ಸಕಲ ಬಲವು [೧]
ಗುರು ದಯದೊಲವೆನಗೆ ತಾಯಿ ತಂದೆಯ ಬಲವು
ಗುರು ಕರುಣದೊಲವೆನಗೆ ಬಾಹು ಬಲವು
ಗುರು ಭೋದದೊಲವೆನಗೆ ಬಂಧು ಬಳಗದ ಬಲವು
ಗುರು ಧರ್ಮದೊಲವೆನಗೆ ಸರ್ವ ಬಲವು [೨]
ಗುರು ಪ್ರಭೆದೊಲವೆನಗೆ ಅನುಭವಾಶ್ರಯ ಬಲವು
ಗುರು ಜ್ಞಾನ ದೊಲವು ಘನ ದೈವ ಬಲವು
ಗುರು ನಾಮ ದೊಲವೆನಗೆ ಪಕ್ಷವಾಹಿಹ್ಯ ಬಲವು
ತರಳ ಮಹಿಪತಿ ಸ್ವಾಮಿ ಬಲವೆ ಬಲವು [೩]
guru daivadolavenage balave balavu
Eri binugu daivada balavu yaatake halavu ||a.pa||
guru nayanadolavenage navanidhAnada balavu
guru abhayadolume navagrahada balavu
guru anugrahadolavu enage anudina balavu
guru olume enage siri sakala balavu [1]
guru dayadolavenage taayi taMdeya balavu
guru karuNadolavenage baahu balavu
guru bhOdadolavenage baMdhu baLagada balavu
guru dharmadolavenage sarva balavu [2]
guru prabhedolavenage anubhavaashraya balavu
guru j~jAna dolavu ghana daiva balavu
guru naama dolavenage pakShavaahihya balavu
taraLa mahipati svAmi balave balavu [3]
Leave a Reply