Composer : Shri Indiresha ankita
ಮಂಗಳಂ ನರಸಿಂಹ ದೇವರಿಗೆ || ಪ ||
ಪನ್ನಂಗ ಶಯನಗೆ |
ಮಂಗಳಂ ನರಸಿಂಹ ದೇವರಿಗೆ || ಅ. ಪ ||
ಘೋರ ಕಶ್ಯಪ ಪೋರನು
ಅತಿ ಕ್ರೂರ ಕೃತಿ ನಡೆಸೆ |
ಸಾರಿ ಕಂಬದಿ ಘೋ-ರನ ಸಂಹಾರ
ಮಾಡಿದ ಶ್ರೀ ರಮೇಶಗೆ || ೧ ||
ಅಂಬುಜಾಕ್ಷಿಯ ಕಂಬು ಕಂಠದಿ
ಡಿಂಬಕನ ನೋಡೆ |
ಕುಂಭಿಣಿ ಶತ ಕೋಟಿ ಮಾನಸ
ಬಿಂಬದೊಳ್ ಪ್ರತಿಬಿಂಬ ತೋರಿದ || ೨ ||
ಬಂದ ದಿವಿಜರಾನಂದ
ಪಡಿಸುತ ನಿಂದು ಭೂಮಿಯಲಿ |
ಪೊಂದಿದಾತ್ಮರಾನಂದ ಪಡಿಸುತ
ಇಂದಿರೇಶ ಸುರೇಂದ್ರ ವಂದ್ಯಗೆ ||೩||
maMgaLaM narasiMha dEvarige || pa ||
pannaMga shayanage |
maMgaLaM narasiMha dEvarige || a. pa ||
ghOra kashyapa pOranu
ati krUra kRuti naDese |
saari kaMbadi ghO-rana saMhaara
maaDida shrI ramEshage || 1 ||
aMbujaakShiya kaMbu kaMThadi
DiMbakana nODe |
kuMbhiNi shata kOTi maanasa
biMbadoL pratibiMba tOrida || 2 ||
baMda divijaraanaMda
paDisuta niMdu bhUmiyali |
poMdidaatmaraanaMda paDisuta
iMdirEsha surEMdra vaMdyage ||3||
Leave a Reply