Vijaya Arindenege aguvado

Composer : Shri Gopala dasaru

By Smt.Shubhalakshmi Rao

ವಿಜಯ ಆರಿಂದೆನಗೆ ಆಗುವುದೊ
ವಿಜಯದಾಸರ ಕರುಣದಿಂದ ಬಾಹುವದು [ಪ]

ಪರತತ್ವ ವಿಚಾರ ಪರಮ ನಿಷ್ಠರ ಸಂಗ
ಪರಿಪರಿಯ ಸುಕರ್ಮ ಪರಿಣಾಮವು |
ಪರ ವಾದಿಗಳ ತುಚ್ಚಕರಿಸಿ ಅವರುಕ್ತಿಗಳ, ಹರಿಯೆ
ಸರ್ವೋತ್ತಮನೆಂದರಿದು ಬಾಳುವಂಥ [೧]

ಭೂಸುರರ ಸೇವೆ ಭೂ ಯಾತ್ರಿ ದಾನ ಧರ್ಮ
ಗ್ರಾಸ ಉಣ ಉಡುವೋದು ಲೇಸು ಎಲ್ಲ |
ವಾಸುದೇವನ ಗುಣಗಳಾಶೆಯಲಿ ಕೇಳುತ,
ಕ್ಲೇಶ ತಟ್ಟದೆ ಹರಿವುಪಾಸನೆಯ ಮಾಳ್ಪಂಥ [೨]

ಜ್ಞಾನಿಗಳಿಂದ ಮಾನ ಕ್ಷೋಣಿಯೊಳಗೆ ಯಶಸ್ಸು
ಹೀನ ಜನರಿಗೆ ದೈನ್ಯವನು ಬಡದೆ |
ನಾನಾ ಪರಿ ಕವನಗಳು ಜ್ಞಾನಿ ಸಮ್ಮತ ರಚಿಸಿ,
ಶ್ರೀನಿವಾಸನ ದಾಸಾನು ದಾಸೆಂಬಂಥ [೩]

ಬಂಧು ಜನರ ಸಂದಣಿ ಚೆಂದುಳ್ಳ
ಆಭರಣಾ- ನಂದದಿ ಉಡುಗೊರೆ ಉತ್ಸಾಹವು
ಇಂದಿರೇಶನ ಸ್ತೋತ್ರದಿಂದಲೆ ದಿನವನ್ನು,
ಒಂದು ಘಳಿಗೆ ಮರೆಯದಂದದಿ ಇಪ್ಪಂಥ [೪]

ಅಪಾರ ಜನುಮ ಇವರ ಪಾದ ಆಶ್ರೈಸಿ
ಶ್ರೀಪತಿಯ ಧ್ಯಾನ ಮಾಡಿದ ಕಾರಣ |
ಗೋಪಾಲವಿಠ್ಠಲನ್ನ ರೂಪ ಧ್ಯಾನದಿ ನಿಲಿಸಿ,
ಈ ಪರಿಯಲಿ ಎನ್ನ ಕಾಪಾಡು ಎಂತೆಂಬ [೫]


vijaya AriMdenage Aguvudo
vijayadAsara karuNadiMda bAhuvadu [pa]

paratatva vicAra parama niShThara saMga
paripariya sukarma pariNAmavu |
para vAdigaLa tuccakarisi avaruktigaLa, hariye
sarvOttamaneMdaridu bALuvaMtha [1]

BUsurara sEve bhU yAtri dAna dharma
grAsa uNa uDuvOdu lEsu ella |
vAsudEvana guNagaLASeyali kELuta,
klESa taTTade harivupAsaneya mALpaMtha [2]

j~jAnigaLiMda mAna kShONiyoLage yaSassu
hIna janarige dainyavanu baDade |
nAnA pari kavanagaLu j~jAni sammata racisi,
SrInivAsana dAsAnu dAseMbaMtha [3]

baMdhu janara saMdaNi ceMduLLa
ABaraNA- naMdadi uDugore utsAhavu
iMdirESana stOtradiMdale dinavannu,
oMdu ghaLige mareyadaMdadi ippaMtha [4]

apAra januma ivara pAda Ashraisi
SrIpatiya dhyAna mADida kAraNa |
gOpAlaviThThalanna rUpa dhyAnadi nilisi,
I pariyali enna kApADu eMteMba [5]

Leave a Reply

Your email address will not be published. Required fields are marked *

You might also like

error: Content is protected !!